ಯಶ್‌, ರಿಷಬ್‌ ಸೇರಿ ಗಣ್ಯರಿಂದ ಮೋದಿ ಭೇಟಿ!

ಏರೋ ಇಂಡಿಯಾ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾನುವಾರ ರಾತ್ರಿ ರಾಜಭವನದಲ್ಲಿ ಉದ್ಯಮಿಗಳು, ಸಿನಿಮಾ ತಾರೆಯರು ಹಾಗೂ ಖ್ಯಾತ ಕ್ರಿಕೆಟಿಗರು ಭೇಟಿಯಾದರು. ರಾಜಭವನಕ್ಕೆ ಆಗಮಿಸಿದ ಮೋದಿ ಅವರನ್ನು ರಾಜ್ಯಪಾಲರು ಸ್ವಾಗತಿಸಿದರು. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಚಿವ ಗೋಪಾಲಯ್ಯ ಉಪಸ್ಥಿತರಿದ್ದರು.

ಕಾಂತಾರಾ ಸಿನಿಮಾ ನಿರ್ಮಾಣ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, 20 ನಿಮಿಷಗಳ ಕಾಲ ರಾಜ್ಯದ ಪ್ರಸಕ್ತ ಬೆಳವಣಿಗೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸಿನಿಮಾ ಕ್ಷೇತ್ರದ ಬೆಳವಣಿಗೆಯಲ್ಲಿ ಸರ್ಕಾರಗಳ ಸಹಕಾರಕ್ಕೆ ಬದ್ಧ ಎಂದ ಪ್ರಧಾನಿ, ನಿರೀಕ್ಷೆಗಳೇನಾದರೂ ಇದೆಯಾ ಎಂದು ಕೇಳಿದ್ದಾರೆ. ನಂತರ ಕ್ರೀಡಾ ಕ್ಷೇತ್ರದ ಗಣ್ಯರ ಜೊತೆಗೆ ಮೋದಿ ಮಾತುಕತೆ ನಡೆಸಿದ್ದಾರೆ. ಮೋದಿ ಅವರೊಂದಿಗೆ ಭೋಜನಕೂಟದಲ್ಲಿ ಭಾಗಿಯಾದ ಪಿಎಂಓ ಕಚೇರಿ ಅಧಿಕಾರಿಗಳು ನಂತರ ಪ್ರಧಾನಿ ರಾಜಭವನದ ಸಿಬ್ಬಂದಿ ಜೊತೆಗೆ ಪೋಟೋ ತೆಗೆಸಿಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply