ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ವಿಶ್ವ ದಾದಿಯರ ದಿನಾಚರಣೆ ಪ್ರಯುಕ್ತ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಉತ್ತಮ, ಸುದೀರ್ಘ ಅವಧಿಯ ಸೇವೆ ನೀಡಿದ ದಾದಿಯರಿಗೆ ಸನ್ಮಾನ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ‍್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಜಿ ಎಸ್ ಚಂದ್ರಶೇಖರ್, ಆಸ್ಪತ್ರೆಯ  ಹಿರಿಯ ನರರೋಗ ಶಸ್ತ್ರ ಜಿಕಿತ್ಸಾ ತಜ್ಙರಾದ ಪ್ರೊ| ಎ ರಾಜಾ ಹಾಗೂ ಹಿರಿಯ ಎಲುಬು ಹಾಗೂ ಕೀಲು ರೋಗ ತಜ್ಙರಾದ ಡಾ| ಮೋಹನ್ ದಾಸ್ ಶೆಟ್ಟಿ ಉಪಸ್ಥಿತರಿದ್ದರು.
ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ ಎಸ್ ಚಂದ್ರಶೇಖರ್ ರವರು ದಾದಿಯರ ಕೆಲಸ ಅತ್ಯಂತ ಪವಿತ್ರವಾದ ಕೆಲಸವಾಗಿದೆ. ವೈದ್ಯರು ರೋಗಿಗೆ ಚಿಕತ್ಸೆ ನೀಡಿದರೆ, ದಾದಿಯರು ದಿನವಿಡೀ ರೋಗಿಗಳ ಆರೈಕೆಯನ್ನು ಮಾಡುತ್ತಾರೆ. ಕೋವಿಡ್ ಕಾಲದಲ್ಲಿ ದಾದಿಯರು ನೀಡಿದ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
 ಆಸ್ಪತ್ರೆಯಲ್ಲಿ ಸುದೀರ್ಘ ಅವಧಿಯ ಉತ್ತಮ ಸೇವೆ ನೀಡಿದ  ಸುಧಾ ನಾಯಕ್, ಉಷಾ ಶೋಭಲತಾ ಕುಂದರ್, ಬೇಬಿ ತಿಂಗಳಾಯ, ಶೈಲಜಾ ಪಿ. ಎಸ್ ಹಾಗೂ  ಎವ್ಜಿನ್ ಡಿಸೋಜ ಇವರಿಗೆ ಶಾಲು ಹೊದಿಸಿ ಫಲ ಪುಷ್ಪ ಹಾಗೂ ಫಲಕವನ್ನು ನೀಡಿ ಗೌರವಿಸಲಾಯಿತು.  ಆಸ್ಪತ್ರೆಯ ಎಲ್ಲಾ ಹಿರಿಯ ಹಾಗೂ ಕಿರಿಯ ವೈದ್ಯರು, ದಾದಿಯರು ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅನುಶ್ರೀ ಭಟ್ ನಿರೂಪಿಸಿದರು. ಆಸ್ಪತ್ರೆಯ  ಪ್ರಭಂಧಕ ಡಿಯಾಗೋ ಕ್ವಾಡ್ರಸ್ ವಂದಿಸಿದರು.
 
 
 
 
 
 
 
 
 
 
 

Leave a Reply