ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿಗೆ ವಂಚನೆ ಯತ್ನ

 

ಉಡುಪಿ: ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿಗೆ ವಂಚಿಸಲು ಯತ್ನಿಸಿದ ವೈದ್ಯೆ ಸಹಿತ ಈರ್ವರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಉಪ್ಪೂರು ಸಾಲ್ಮರ ನಿವಾಸಿ ಡಾ. ರಿನೆಟ್ ಸೋನಿಯಾ ಡಿಸೋಜ (37) ಹಾಗೂ ಸಾಲಿಗ್ರಾಮ ಚಿತ್ರಪಾಡಿ ನಿವಾಸಿ ವಿಜಯ ಕೊಠಾರಿ (43) ಬಂಧಿತ ಆರೋಪಿಗಳು.

ಮಣಿಪಾಲ ಮಾಹೆಯಲ್ಲಿ ವೈದ್ಯೆ ಮತ್ತು ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಾಸಿಕ ವೇತನ 2.66 ಲಕ್ಷ ರೂ., ಎಂದು ಹೇಳಿ ಡಾ. ರಿನೆಟ್ ಕಾರು ಖರೀದಿಗೆ ಸಾಲ ಪಡೆಯಲು ಕಾಪು ಮೂಡಬೆಟ್ಟು ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್ ಮ್ಯಾನೇಜರ್ ಅಲ್ವಿನಾ ಡಿ’ಸೋಜ ಅರ್ಜಿದಾರರ ವಿವರ ಹಾಗೂ ಮಣಿಪಾಲ ಮಾಹೆ ಸಂಸ್ಥೆಯ ವೇತನ ಸ್ಲಿಪ್ ಪರಿಶೀಲಿಸಿದಾಗ ಡಾ.ರಿನೆಟ್ ಸೋನಿಯಾ ಡಿ’ ಸೋಜಾ ಮಾಹೆಯಲ್ಲಿ ಉದ್ಯೋಗದಲ್ಲಿಲ್ಲ ಎಂಬ ಮಾಹಿತಿ ಲಭಿಸಿತು. ಆರೋಪಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿಗೆ ಮೋಸ ಮಾಡಿ ಸಾಲ ಪಡೆಯುವ ಉದ್ದೇಶ ಹೊಂದಿದ್ದ ಬಗ್ಗೆ ಕಾಪು ಠಾಣೆಯಲ್ಲಿ ಜು. 24ರಂದು ದೂರು ದಾಖಲಾಗಿತ್ತು.

ತನಿಖೆ ನಡೆಸಿದ ಕಾಪು ಪೊಲೀಸರು ಡಾ.ರಿನೆಟ್ ಡಿ’ಸೋಜಾ ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ವಿಜಯ ಕೊಠಾರಿ ಎಂಬಾತ ಸಾಲಕ್ಕೆ ಅರ್ಜಿ ಸಲ್ಲಿಸಲು ನಕಲಿ ದಾಖಲಾತಿ ಮಾಡಿಕೊಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ವಿಜಯ ಕೊಠಾರಿಯನ್ನೂ ಬಂಧಿಸಿ, ನಕಲಿ ದಾಖಲೆ ತಯಾರಿಸುತ್ತಿದ್ದ ಆತನ ಲ್ಯಾಪ್‌ಟಾಪ್‌ನ್ನು ವಶಪಡಿಸಿಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply