ರಾಜಸಂಪುಟ ಸಭೆಯಲ್ಲಿ ಹಲವು ಹಲವು ಮಹತ್ವದ ನಿರ್ಧಾರ.

ಬೆಂಗಳೂರು :  ಇಂದು ರಾಜ್ಯ ಸಚಿವ ಸಂಪುಟ ಸಭೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ಮಾಡಲಾಯಿತು. ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸಭೆ ಮುಕ್ತಾಯಗೊಂಡ ಬಳಿಕ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಮಾಹಿತಿ ನೀಡಿದರು.
ಎಸ್ ಡಿ ಪಿಐ ಸಂಘಟನೆ ನಿಷೇಧದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದೇವೆ. ಸಂಘಟನೆ ನಿಷೇಧ ಮಾಡುವಂತೆ ಅನೇಕರ ಒತ್ತಾಯ ಇದೆ. ಈ ಬಗ್ಗೆ ಸರ್ಕಾರ ಚರ್ಚೆ ನಡೆಸಿದೆ. ನಿಷೇಧ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವದರ ಬಗ್ಗೆ ಚರ್ಚೆ ಮಾಡಿದ್ದೇವೆ. ಆದರೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರ ಕುರಿತು ಸಾಕ್ಷ್ಯಾಧಾರಗಳ ಸಮೇತ ವರದಿ ಸಲ್ಲಿ ಸುವಂತೆ ಗೃಹ ಇಲಾಖೆಗೆ ರಾಜ್ಯ ಸರ್ಕಾರ ಸೂಚಿಸಿದೆ. ಪೊಲೀಸರ ವರದಿ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಯಾವ ರೀತಿ ನಿಷೇಧ ಮಾಡಲು ಕಾನೂನಿ ನಲ್ಲಿ ಅವಕಾಶ ನೋಡುತ್ತಿದ್ದೇವೆ. ಎಸ್ ಡಿ ಪಿಐ ರಾಜಕೀಯ ಪಕ್ಷವೂ ಆಗಿದೆ. ಹಾಲಿ ಇರುವ ಕಾನೂನಿನಡಿ ಸಂಘಟನೆಯನ್ನು ನಿಷೇದಿಸ ಬೇಕೋ ಅಥವಾ 1981ರ ಕಾಯ್ದೆಗೆ ತಿದ್ದುಪಡಿ ಮಾಡಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಂಘಟನೆಯು ಯಾವ ಯಾವ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂಬ ಬಗ್ಗೆ ಗೃಹ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳಿಂದ ವರದಿ ನೀಡಲು ಸೂಚಿಸಲಾಗಿದೆ.

ಉತ್ತರಪ್ರದೇಶದಲ್ಲಿ ಅಲ್ಲಿನ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ಅಧ್ಯಯನ ನಡೆಸಲಿದ್ದೇವೆ. ವರದಿ ಬಂದ ತಕ್ಷಣವೇ ಎಷ್ಟು ಸಾಧ್ಯವೋ ಅಷ್ಟು ಸಂಘಟನೆಯನ್ನು ನಿಷೇಧ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದರು.


ಸೆಪ್ಟೆಂಬರ್ 21ರಿಂದ 30ರವರೆಗೆ ಕಾಲ ಅಧಿವೇಶನ: ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿದ್ದ ವಿಧಾನಮಂಡಲದ ಮಳೆಗಾಲದ ಅವೇಶನ ಸೆಪ್ಟೆಂಬರ್ 21ರಿಂದ ಹತ್ತು ದಿನಗಳ ಕಾಲ ಬೆಂಗಳೂರುನಲ್ಲಿ ನಡೆಯಲಿದೆ. ಸೆಪ್ಟೆಂಬರ್ 21ರಿಂದ 30ರವರೆಗೆ ಕಾಲ ಅವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ಹಿಂದೆ ಜೂನ್ ತಿಂಗಳಿನಲ್ಲಿ ಮಳೆಗಾಲದ ಅವೇಶನ ನಡೆಸಬೇಕಾಗಿತ್ತಾದರೂ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿತ್ತು. ಅಂತಿಮವಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ವಿಧಾನ ಸೌಧದಲ್ಲಿ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂಬುದಾಗಿ ತಿಳಿಸಿದರು.


ಮೂರು ಮಹತ್ವದ ಕಾಯ್ದೆಗಳಿಗೆ ಅನುಮೋದನೆ: ಇಂದು ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿಗೊಳಿಸಲಾದಂತಹ ಮೂರು ಮಹತ್ವದ ಕಾಯ್ದೆಗಳಿಗೆ ಅನುಮೋದನೆ ನೀಡಿದೆ. ಅಲ್ಲದೇ ಮಳೆ ಗಾಲದ ಅಧಿವೇಶನವನ್ನು ಸೆ.21ರಿಂದ ಸೆ.30ರವರೆಗೆ ನಡೆಸಲು ದಿನಾಂಕ ಕೂಡ ನಿಗದಿ ಪಡಿಸಲಾಗಿದೆ. ಇದಲ್ಲದೇ ಸಹಕಾರ ಸಂಘಗಳ ಚುನಾವಣೆಯನ್ನು ಡಿಸೆಂಬರ್ ವರೆಗೂ ಮುಂದೂಡಿಕೆ ಮಾಡುವಂತ ನಿರ್ಣಯಕ್ಕೂ ಒಪ್ಪಿಗೆ ಸೂಚಿಸಲಾಗಿದೆ.


ರೈತರಿಂದಲೇ ಬೆಳೆ ಸಮೀಕ್ಷೆ
ಸಚಿವ ಸಂಪುಟ ಸಭೆಯಲ್ಲಿ ಕೃಷಿ ಇಲಾಖೆಯಲ್ಲಿ ಎಜೆನ್ಸಿಯಿಂದ ಬೆಳೆ ಸಮೀಕ್ಷೆಗೆ ಇತಿಶ್ರೀ ಹಾಡಲಾಗಿದೆ.  ರೈತರಿಂದಲೇ ಬೆಳೆ ಸಮೀಕ್ಷೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಸಮೀಕ್ಷೆ ಆರಂಭ ಮಾಡಲಾಗಿದೆ. ಪ್ರತಿ ರೈತರು ಆಪ್ ಮೂಲಕ ಫೋಟೋ ಕಳಿಸಬಹುದು. ಕಳಿಸಲು ಇನ್ನು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಜಮೀನಿನಲ್ಲಿನ ಬೆಳೆ, ಪರಿಹಾರ ನೀಡಲು ಸರ್ಕಾರಕ್ಕೆ ಅನುಕೂಲವಾಗಲಿದೆ. ರೈತರು ಬೆಳೆ ಸಮೀಕ್ಷೆ ಕಳಿಸಲು ಸೆ, 24 ರ ವರೆಗೆ ಅವಕಾಶ ನಿಡಲಾಗಿದೆ ಎಂದರು.


32 ಹುದ್ದೆಗಳ ನೇಮಕಾತಿಗೆ ಅನುಮೋದನೆ
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಗಿದೆ. ಸಹಕಾರ ಸಂಘಗಳ ಚುನಾವಣೆ ಘಟನೋತ್ತರ ವರದಿ ಕೈಗೊಳ್ಳಲಿದೆ. ಕರ್ನಾಟಕ ಭವನದ ಖಾಲಿ 32 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕೆ ತಿದ್ದುಪಡಿ ಮಾಡಲಾಗಿದೆ ಎಂಬುದಾಗಿ ತಿಳಿಸಿದರು.


64 ಕ್ರಿಮಿನಲ್ ಮೊಕದ್ದಮೆ ವಾಪಸ್
ರಾಜ್ಯದಲ್ಲಿ 72 ಸಂಚಾರಿ ಆರೋಗ್ಯ ಘಟಕಗಳನ್ನು ಮುಂದುವರಿಸಲು ಅನುಮತಿ ನೀಡಲಾಗಿದೆ. ವೈಯಕ್ತಿಕ ಪ್ರಕರಣಗಳನ್ನ ನಾವು ವಾಪಸ್ ಪಡೆಯುತ್ತಿಲ್ಲ. 64 ಕ್ರಿಮಿನಲ್ ಮೊಕದ್ದಮೆ ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ. 2615 ಕೊಳಚೆ ಪ್ರದೇಶಗಳಲ್ಲಿಇರುವ 7.46ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ನಿರ್ಧಾರ ಮಾಡಲಾಗಿದೆ ಎಂದರು

 
 
 
 
 
 
 
 
 
 
 

Leave a Reply