ದೋಣಿ ದುರಂತ- ಸಂಪೂರ್ಣ ಜಖಂ

ಉಡುಪಿ: ಜಿಲ್ಲೆಯಲ್ಲಿ ಮತ್ತೊಂದು ದೋಣಿ ದುರಂತ ಸಂಭವಿಸಿದ್ದು, ಐವರು ಮೀನುಗಾ ರರು ಅಪಾಯದಿಂದ ಪಾರಾಗಿದ್ದಾರೆ. ಟ್ರಾಲ್ ದೋಣಿ ಸಂಪೂರ್ಣ ಜಖಂಗೊಂಡಿದೆ.
ಬೈಂದೂರು ತಾಲೂಕಿನ ಮರವಂತೆ ಮಾರ ಸ್ವಾಮಿಯ ಗಂಗಾಧರೇಶ್ವರ ದೇವಸ್ಥಾ ನದ ಸಮೀಪ ಸಮುದ್ರದಲ್ಲಿ ಬುಧವಾರ ಮಧ್ಯಾಹ್ನ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಅವಘಡಕ್ಕೆ ಈಡಾಗಿದೆ.

ಗಂಗೊಳ್ಳಿಯ ಗುಡ್ಡೆಕೇರಿ ನಿವಾಸಿ ಶ್ರೀನಿವಾಸ ಖಾರ್ವಿ ಮಾಲೀಕತ್ವದ ಆದಿ ಆಂಜನೇಯ ಹೆಸರಿನ ಟ್ರಾಲ್ ದೋಣಿ ಸಮುದ್ರದ ಅಲೆಗಳ ರಭಸಕ್ಕೆ ದಿಬ್ಬಕ್ಕೆ ಹೊಡೆದು ಮಗುಚಿ ಬಿದ್ದಿದೆ. ಪರಿಣಾಮ ಶ್ರೀನಿವಾಸ್ ಖಾರ್ವಿ ಕಾಲಿಗೆ ಗಂಭೀರ ಗಾಯವಾಗಿದ್ದು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೋಣಿಯಲ್ಲಿ ಮೀನು ಗಾರಿಕೆ ನಡೆಸುತ್ತಿದ್ದ ಗಂಗೊಳ್ಳಿಯ ನಿವಾಸಿ ಗಳಾದ ರಾಮ ಖಾರ್ವಿ, ಶಂಕರ ಖಾರ್ವಿ, ಕೃಷ್ಣ ಖಾರ್ವಿ ಮತ್ತು ಕುಂದಾಪುರ ಕೋಡಿ ನಿವಾಸಿ ಸುಭಾಸ್ ಖಾರ್ವಿ ಸಮುದ್ರದಲ್ಲಿ ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೋಣಿ ಒಡೆದು ಸಂಪೂರ್ಣವಾಗಿ ಹಾನಿ ಯಾಗಿದೆ. 10 ಅಶ್ವಶಕ್ತಿಯ ಎರಡು ಯಮಹಾ ಔಟ್‌ ಬೋರ್ಡ್ ಎಂಜಿನ್ ಮತ್ತು ಬಲೆ ಹಾಗೂ ಇನ್ನಿತರ ಸಲಕರಣೆಗಳು ಸಮುದ್ರ ಪಾಲಾಗಿದೆ. 10 ಲಕ್ಷ ರೂ. ನಷ್ಟ ಆಗಿರಬಹುದೆಂದು ಅಂದಾಜಿಸ ಲಾಗಿದೆ. ದಡಕ್ಕೆ ತೇಲಿಬಂದ ದೋಣಿಯ ಅವಶೇಷ ವನ್ನು ಮೇಲೆತ್ತಲಾಗಿದೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಎಸ್‌ಐ ಭೀಮಾಶಂಕರ ಎಸ್. ಹಾಗೂ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೀಪ ಜಿ.ಎಸ್. ಮತ್ತು ಸಿಬ್ಬಂದಿ ಬಂದು ಪರಿಶೀಲಿಸಿ ದ್ದಾರೆ.

 
 
 
 
 
 
 
 
 
 
 

Leave a Reply