ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಎಕ್ಸಲೆನ್ಸಿ ಪ್ರಶಸ್ತಿ

ಉಡುಪಿ: ಶಂಕರಪುರ ಜೇಸಿ ಭವನದಲ್ಲಿ ನಡೆದ ವಲಯ 15ರ ಮಧ್ಯಂತರ ಸಮ್ಮೇಳನ `ಬದಲಾವಣೆ- 2020′ ಕಾರ್ಯಕ್ರಮದಲ್ಲಿ ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಎಕ್ಸಲೆನ್ಸಿ ಪ್ರಶಸ್ತಿ ಸಹಿತ ವಿವಿಧ ಪುರಸ್ಕಾರ ಪ್ರದಾನ ಮಾಡಲಾಯಿತು.
ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಅವರರಿಂದ ಘಟಕಾಧ್ಯಕ್ಷೆ ತನುಜಾ ಮಾಬೆನ್ ಪ್ರಶಸ್ತಿ ಸ್ವೀಕರಿಸಿದರು.
ಘಟಕ ಅತ್ಯುತ್ತಮ ಕಾರ್ಯಕ್ರಮ, ತರಬೇತಿ ವಿಭಾಗ ಸೇರಿದಂತೆ ವಿವಿಧ ಮನ್ನಣೆ ಪಡೆದುಕೊಂಡಿದೆ.
ವಲಯ ಉಪಾಧ್ಯಕ್ಷ ಲೋಕೇಶ್ ರೈ, ಅಶೋಕ್ ಚುಂತಾರ್, ಅಶ್ವಿನಿ ಐತಾಳ, ಜಬ್ಬಾರ್, ಉದಯ ನಾಯ್ಕ್, ಜಗದೀಶ್ ಶೆಟ್ಟಿ, ಪೂರ್ವ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಮೊದಲಾದವರಿದ್ದರು.

Leave a Reply