ಉಡುಪಿಯಲ್ಲಿ 84 ಮಂದಿ ಸೋಂಕಿನಿಂದ ಮುಕ್ತ

ಉಡುಪಿ: ಜಿಲ್ಲೆಯಲ್ಲಿ ಕೊರೊನಾದಿಂದ ಬಳಲುತ್ತಿದ್ದವರಲ್ಲಿ ಬುಧವಾರ 84 ಮಂದಿ ಗುಣಮುಖರಾಗಿದ್ದಾರೆ. ಆ ಮೂಲಕ ಇದುವರೆಗೆ 2,323 ಮಂದಿ ಸೋಂಕಿನಿಂದ ಗುಣಮುಖರಾದಂತಾಗಿದೆ. ಪ್ರಸ್ತುತ 1,547 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಬಾಧಿತ 25 ಮಂದಿ ಸಾವನ್ನಪ್ಪಿದ್ದಾರೆ.

ಇಂದು 173 ಹೊಸ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರಚಂದ್ರ ಸೂಡ ತಿಳಿಸಿದ್ದಾರೆ. ಇಲ್ಲಿಯ ವರೆಗೆ ಜಿಲ್ಲೆಯ ಒಟ್ಟು 3,895 ಮಂದಿಗೆ ಸೋಂಕು ತಗುಲಿದೆ.
ಆರೋಗ್ಯ ಇಲಾಖೆಗೆ ಲಭಿಸಿದ 660 ವರದಿಗಳ ಪೈಕಿ 487 ವರದಿ ನೆಗೆಟಿವ್ ಬಂದಿವೆ. ಹೊಸದಾಗಿ 824 ಜನರ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಇನ್ನೂ 835 ಮಂದಿಯ ವರದಿ ಬರಬೇಕಿದೆ.

ಪ್ರತ್ಯೇಕಿತ ವಾರ್ಡ್ ಗಳಲ್ಲಿ ಹೊಸದಾಗಿ 42 ಮಂದಿ ದಾಖಲಾಗಿದ್ದು, ಪ್ರಸ್ತುತ 286 ಮಂದಿ ಆಸ್ಪತ್ರೆ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ 1,369 ಜನರು ಗೃಹ ದಿಗ್ಬಂಧನದಲ್ಲಿದ್ದಾರೆ ಎಂದು ಡಿಎಚ್ ಒ ಡಾ. ಸೂಡ ತಿಳಿಸಿದ್ದಾರೆ

Leave a Reply