ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ

ಉಡುಪಿ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಉಡುಪಿ ಜಿಲ್ಲೆ, ಕಮಲಾ.ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ. ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ.ಭಾರತೀಯ ಮನೋವೈದ್ಯಕೀಯ ಸಂಘ ದಕ್ಷಿಣ ಪ್ರಾಂತ್ಯ ಘಟಕ ಸಮುದಾಯ ಮಾನಸಿಕ ಅರಿವು ಮೂಡಿಸುವ ಗುಂಪು ಉಡುಪಿ ಮನೋ ವೈದ್ಯಕೀಯ ಸಂಘ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಸಮುದಾಯ ಪ್ರಾರ್ಥನ ಕೇಂದ್ರ ಅಣ್ಣಪ್ಪ ನಗರ ಹಾರಾಡಿಯಲ್ಲಿ ಅದು.10ರಂದು ನಡೆಯಿತು.

ಕಾರ್ಯಕ್ರಮನ್ನು ಕಾನೂನು‌ ಸೇವೆಗಳ ಪ್ರಾಧಿಕಾರ ಉಡುಪಿ ಇದರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಉದ್ಘಾಟಿಸಿದರು. ತಮ್ಮ ಉದ್ಘಾಟನ ಭಾಷಣದಲ್ಲಿ ಮಾನಸಿಕ ರೋಗಿಗಳನ್ನು ಮಾನವೀಯತೆಯ ನಿಲುವಿನಲ್ಲಿ ಸಮಾಜ ನೋಡಬೇಕು, ಮಾನಸಿಕ ರೋಗಿಗಳನ್ನು ತಾರತಮ್ಯ,ಭೇಧಭಾವದಿಂದ ನೋಡುವುದು, ಕಾನೂನಿನ ಅಡಿಯಲ್ಲಿ ಅಪರಾಧ ಎಲ್ಲಾ ಸ್ಥರದ ಮಾನಸಿಕ‌ ಕಾಯಿಲೆಗಳಿಗೂ ಚಿಕಿತ್ಸೆ ದೊರೆಯುವಂತೆ‌ ಅಗಾಬೇಕು ಎಂದು ಕಾರ್ಯಕ್ರಮದ ಉಧ್ಘಾಟನೆಯನ್ನು ನೇರವೇರಿಸಿ ನುಡಿದರು.
ಮನೋರೋಗಕ್ಕೆ ಚಿಕಿತ್ಸೆಗಳು ಹಾಗೂ ಮಾನಸಿಕ ‌ಆರೋಗ್ಯದ ಬಗ್ಗೆ ಸಮುದಾಯ ಜಾಗೃತಿ ಕಾರ್ಯಕ್ರಮಗಳು ಮಾನಸಿಕ ಆರೋಗ್ಯ ಸಮತೋಲನಕ್ಕೆ‌ ಅವಶ್ಯಕ ಎಂದು ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿಕೊಂಡ ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಯ ನಿರ್ದೇಶಕರು,ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಇವರು ಕಿವಿ ಮಾತು ಹೇಳಿದರು. ಒನ್ ಗುಡ್ ಸ್ಟಪ್ ಸಂಸ್ಥೆಯ ಸಂಸ್ಥಾಪಕರು ಅಡಳಿತ ವಿಶ್ವಸ್ಥೆ ಅಮಿತಾ ಪೈ, ಸಂಘ ಸಂಸ್ಥೆಗಳು ಸಮುದಾಯದಲ್ಲಿ ಮಾನಸಿಕ‌ ಆರೋಗ್ಯ ಕುರಿತು ಅರಿವು ಮೂಡಿಸಬೇಕು ಎಂದು‌ ತಿಳಿಸಿದರು.
ರೋಟರಿ ಸಂಸ್ಥೆ ಬ್ರಹ್ಮವಾರದ ಮಾಜಿ‌ ಅಧ್ಯಕ್ಷ ರೋ.ವಾಲ್ಟರ್ ಸಿರಿಲ್ ಪಿಂಟೋ,‌ರೋಟರಿ ಶಂಕರಪುರದ ನಿಕಟಪೂರ್ವ ರೋ. ಎಡ್ವರ್ಡ್ ಮೆಂಡೊನ್ಸಾ ಮುಖ್ಯ‌ಅತಿಥಿಗಳಾಗಿ ಭಾಗವಹಿಸಿದರು. ಸಂಸ್ಥೆಯ ಮನೋ ವೈದ್ಯ ಡಾ.ಮಾನಸ್ ಉಪಸ್ಥಿತರಿದ್ದರು.

ಸಂಸ್ಥೆಯ ಮನಶಾಸ್ತ್ರಜ್ಞರಾದ ನಾಗರಾಜ್ ಮೂರ್ತಿ ಸ್ವಾಗತಿಸಿದರು ಸಹನಾ ಪ್ರಾರ್ಥಿಸಿ,ಅಪ್ತ ಸಮಲೋಚಕ ದೀಪಾ ನಿರೂಪಿಸಿದರು. ಅಪ್ತ ಸಮಲೋಚಕ ಪದ್ಮರಾಘವೇಂದ್ರ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯಿತು.

 
 
 
 
 
 
 
 
 
 
 

Leave a Reply