Janardhan Kodavoor/ Team KaravaliXpress
24.6 C
Udupi
Tuesday, October 26, 2021

ಬ್ರಹ್ಮಾವರ : ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ಮತ್ತು 75 ಹಿರಿಯ ನಾಗರೀಕರಿಗೆ ಅಭಿನಂದನಾ ಸಮಾರಂಭ

ಬ್ರಹ್ಮಾವರ: – ನಮ್ಮ ಜೀವನದಲ್ಲಿ ಅತ್ಯಂತ ಮಹತ್ವದ ಕೊಡುಗೆ ಆರೋಗ್ಯವಾಗಿದೆ.ಆರೋಗ್ಯದ ಪಾಲನೆ ಸರಿಯಾಗಿ ಮಾಡಿದರೆ ನಮ್ಮ ಜೀವನ ಯಶಸ್ವಿಯಾಗಿ ನಡೆಯಲು ಸಾಧ್ಯ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಬ್ರಹ್ಮಾವರ ಭಾರತೀಯ ಜನೌಷಧಿ ಕೇಂದ್ರ ಹಾಗೂ ಜಯಂಟ್ಸ್ ಗ್ರೂಪ್ ಇದರ ವತಿಯಿಂದ ಅ.10 ರಂದು ನಡೆದ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ಮತ್ತು 75 ಹಿರಿಯ ನಾಗರೀಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

 

ಈ ಸಂದರ್ಭದಲ್ಲಿ ಹಿರಿಯ ನಾಗರೀಕರಿಗೆ ಅಭಿನಂದನೆ ನಡೆಯಿತು. ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿಯವರ ಕನಸಿನ ಕಾಯ೯ಕ್ರಮ ಹಿರಿಯ ನಾಗರೀಕರಿಗೆ ಅಭಿನಂದನೆ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಾರ್ಯ ನಡೆಸುತ್ತಿರುವು ಅಭಿನಂದನೀಯ ಎಂದರು.

ವೇದಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ. ಅಜಿತ್ ಕುಮಾರ್ ಶೆಟ್ಟಿ, ಮೂಳೆ ರೋಗ ತಜ್ಞ ಡಾ. ಅರ್ಜುನ್ ಬಲ್ಲಾಳ, ಡಾ. ಗಣೇಶ್ ಕಾಮತ್, ಕೆ.ಎಂ.ಸಿ ನೇತೃ ತಜ್ಞ ಡಾ. ಸೌಮ್ಯ, ಡಾ. ಧನಂಜಯ್ ಭಟ್, ಮಧುಸೂಧನ್ ಹೇರೂರು ಪ್ರಸನ್ನ ಕಾರಂತ್ ಮುಂತಾದವರಿದ್ದರು. ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಸ್ವಾಗತಿಸಿದರು.ರಾಘವೇಂದ್ರ ಪ್ರಭು,ಕರ್ವಾಲು ನಿರೂಪಿಸಿ, ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!