ಯು.ಪಿ.ಎಂ.ಸಿ ವಿದ್ಯಾರ್ಥಿಗಳಿಗೆ – ಕೋವಿಡ್ ಲಸಿಕೆ ವಿತರಣೆ

ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮವು ಇಂದು ಜರಗಿತು. 

ವೈಕುಂಠ ಬಾಳಿಗ ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಲಾ ಕಾಲೇಜಿನ ಪ್ರಾಂಶುಪಾಲೆ ಡಾ‌.ನಿರ್ಮಲ ಕುಮಾರಿಯವರು ಚಾಲನೆ ನೀಡಿದರು. ಕಾಲೇಜಿನ 300 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯನ್ನು ವಿತರಿಸಲಾಯಿತು.

ಯು.ಪಿ.ಎಂ.ಸಿ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಶುಭಾಶಂಸನೆಗೈದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ‌.ಚಾರ್ಮಿನ, ಇತರ ವೈದ್ಯ ಸಿಬ್ಬಂದಿಗಳು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರಾಜೇಶ್ ಕುಮಾರ್ ಉಪಸ್ಥಿತರಿದ್ದರು.ಕೋವಿಡ್ ಲಸಿಕಾ ವಿತರಣೆಯ ಕಾಲೇಜು ಸಂಚಾಲಕ ಉಪನ್ಯಾಸಕ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply