Janardhan Kodavoor/ Team KaravaliXpress
32 C
Udupi
Wednesday, March 3, 2021

ಉಡುಪಿಯಲ್ಲಿ ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ವಿತರಣೆ

ಉಡುಪಿಯಲ್ಲಿ  ವೈದ್ಯರು ಸೇರಿದಂತೆ 5078 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ 2657 ಮಂದಿ ಶುಕ್ರವಾರ ಕೊರೋನ ವಿರುದ್ಧದ ‘ಕೊವಿಶೀಲ್ಡ್’ ಲಸಿಕೆ ಪಡೆದಿದ್ದಾರೆ. ಇದು ದಿನದ ನಿಗದಿತ ಗುರಿಯ ಶೇ.52ರಷ್ಟು ಸಾಧನೆಯಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

ಇಂದು ಜಿಲ್ಲೆಯ ಮೂರು ತಾಲೂಕುಗಳ ಒಟ್ಟು 30 ಸಂಸ್ಥೆಗಳ 56 ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಯಿತು. ಉಡುಪಿ ತಾಲೂಕಿನ 14 (40 ಕೇಂದ್ರ), ಕುಂದಾಪುರ ತಾಲೂಕಿನ 10(10) ಹಾಗೂ ಕಾರ್ಕಳದ 6(6) ಸಂಸ್ಥೆಗಳಲ್ಲಿ ಲಸಿಕೆಗೆ ವ್ಯವಸ್ಥೆ ಮಾಡಲಾಗಿತ್ತು.  ಕುಂದಾಪುರ ತಾಲೂಕಿನಲ್ಲಿ ಅತ್ಯಧಿಕ ಮಂದಿ ಲಸಿಕೆ ಪಡೆದುಕೊಂಡರು.

ಕುಂದಾಪುರ ತಾಲೂಕಿನ ಆಲೂರು ಪಿಎಚ್‌ಸಿಯಲ್ಲಿ ಶೇ.92, ಸಿದ್ಧಾಪುರ, ಶಿರೂರು ಮತ್ತು ಹಾಲಾಡಿ ಪಿಎಚ್‌ಸಿಗಳಲ್ಲಿ ತಲಾ 89 ಹಾಗೂ ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಶೇ.89 ಮಂದಿ ಲಸಿಕೆ ಪಡೆದಿದ್ದು  ತಾಲೂಕಿನಲ್ಲಿ ಅತ್ಯಧಿಕ ಲಸಿಕೆಯನ್ನು ಉಡುಪಿ ಪಿಎಚ್‌ಸಿಯಲ್ಲಿ ಶೇ.74 ಮಂದಿ ಪಡೆದರು.ಮಣಿಪಾಲ ಕೆಎಂಸಿಯ 10 ಕೇಂದ್ರಗಳಲ್ಲಿ 1000 ಮಂದಿ ಲಸಿಕೆ ಪಡೆಯ ಬೇಕಿದ್ದು 242 ಮಂದಿ ಮಾತ್ರ ಇಂದು ಪಡೆದಿದ್ದಾರೆ. ಉಡುಪಿ ಪಿಎಚ್‌ಸಿಯಲ್ಲಿ ನಿಗದಿತ 875 ಮಂದಿಯಲ್ಲಿ 639 ಮಂದಿ ಪಡೆದರು. ಆಲೂರು ಪಿಎಚ್‌ಸಿಯ ನಿಗದಿತ 79 ಮಂದಿಯಲ್ಲಿ 73 ಮಂದಿ, ನಂದಳಿಕೆಯ 18ರಲ್ಲಿ 16 ಮಂದಿ, ಸಿದ್ಧಾಪುರದ 90ರಲ್ಲಿ 80 ಮಂದಿ, ಶಿರೂರಿನ 86ರಲ್ಲಿ 73 ಮಂದಿ ಲಸಿಕೆ ಪಡೆದಿದ್ದಾರೆ.

 

ಮೊದಲ ಹಂತದ ಕೋವಿಡ್ ವಿರುದ್ಧದ ವ್ಯಾಕ್ಸಿನೇಷನ್‌ನಲ್ಲಿ  ಜಿಲ್ಲೆಯ ಒಟ್ಟು 22,103 ಮಂದಿ ಕೊರೋನಾ ವಾರಿಯರ್ಸ್‌ಗೆ ಲಸಿಕೆಯನ್ನು ನೀಡುವ ಗುರಿ ಹೊಂದಿದ್ದು, ಇದುವರೆಗೆ ಲಸಿಕೆ ಪಡೆಯಬೇಕಿದ್ದ 8976 ಮಂದಿಯಲ್ಲಿ 4816 ಮಂದಿ ಮಾತ್ರ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಶೇ.53.7ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕುಂಜಾರುಗಿರಿಯ ಗಿರಿಬಳಗ (ರಿ) ಇದರ 32ನೆಯ ವಾರ್ಷಿಕೋತ್ಸವ

ಕುಂಜಾರುಗಿರಿಯ ಗಿರಿಬಳಗ (ರಿ) ನ 32ನೆಯ ವಾರ್ಷಿಕೋತ್ಸವವು ಕುಂಜಾರುಗುರಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಭೆಯಲ್ಲಿ ಭಾಗವಹಿಸಿ, ಇಂದಿನ ಮಕ್ಕಳು ಜೀವನದಲ್ಲಿ ದಾರಿ ತಪ್ಪುತ್ತಿರುವುದು ಬೇಸರದ...

ಮಾಸ್ಟರ್ ಪ್ಲಾನ್ ಗೆ ವೇಗ, ಜನಸ್ನೇಹಿ ಆಡಳಿತಕ್ಕೆ ನಿರ್ಧಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಿರ್ಣಯ

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಕೋವಿಡ್ ಕಾರಣದಿಂದ ವಿಳಂಬವಾಗುತ್ತಿರುವ ಮಾಸ್ಟರ್ ಪ್ಲಾನಿಗೆ ವೇಗ ನೀಡಲು, ಸಾರ್ವಜನಿಕರಿಗೆ ತಮ್ಮ ಅರ್ಜಿ ಸ್ಥಿತಿಗತಿ ಮಾಹಿತಿ ನೀಡುವ ನೂತನ ಸಾಫ್ಟವೇರ್ , ಪ್ರಾಧಿಕಾ ರದ ವ್ಯಾಪ್ತಿಯಲ್ಲಿ...

ವಿಪ್ರ ಸಂಘಟನೆಗಳು ಆಶಕ್ತರು, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ~ ವಾಸುದೇವ ಅಡೂರು

ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆಯು ಚಿಟ್ಪಾಡಿ ಶ್ರೀನಿವಾಸ ದೇವಸ್ಥಾನ ದಲ್ಲಿ ಜರುಗಿತು. ಎಸ್ ಎಸ್ ಎಲ್ ಸಿ, ಪಿ ಯು ಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮುಖ್ಯ ಅತಿಥಿ...

ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ 

ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ (93 ವ.)  ಶನಿವಾರ ದಂದು ನಿಧನರಾಗಿರುತ್ತಾರೆ. ಇವರು ಸ್ವಾತಂ​ತ್ರ್ಯ ಹೋರಾಟಗಾರ ದಿ| ಕುರ್ಕಾಲು ಗಣಪಯ್ಯ ಶೆಟ್ಟರ ಮಗಳು, ಮೂಳೂರು ಬೈಲುಮನೆ ಶತಾಯುಷಿ ದಿ| ಬಾಬು ಶೆಟ್ಟಿಯವರ...
error: Content is protected !!