ಎಸ್.ಡಿ.ಎಮ್.ನಲ್ಲಿ ಪ್ರಸೂತಿತಂತ್ರ ಮತು ಸ್ತ್ರೀರೋಗ ಶಿಕ್ಷಕರಿಗೆ ವೈಜ್ಞಾನಿಕ ಕಾರ್ಯಾಗಾರ

ಉಡುಪಿ: ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗ ಹಾಗೂ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ ಮತ್ತು ಆಯುಷ್ ಮಂತ್ರಾಲಯ, ಭಾರತ ಸರಕಾರ, ಹೊಸ ದೆಹಲಿ ಇವರ ಜಂಟಿ ಸಹಭಾಗಿತ್ವದಲ್ಲಿ ಪ್ರಸೂತಿತಂತ್ರ ಮತ್ತು ಸ್ತ್ರೀರೋಗದ ಶಿಕ್ಷಕರಿಗಾಗಿ ಆರು ದಿನಗಳ ವೈಜ್ಞಾನಿಕ ಕಾರ್ಯಾಗಾರವು ದಿನಾಂಕ ಮಾ.8ರಿಂದ 13 ರವರೆಗೆ ನೆರವೇರಿಸಲಾಯಿತು. ನೂತನ ಶಿಕ್ಷಕರು, ಈ ಕ್ಷೇತ್ರದಲ್ಲಿರುವ ವಿನೂತನ ವೈದ್ಯಕೀಯ ಜ್ಞಾನ ವೃದ್ಧಿಸಿಕೊಳ್ಳುವುದು, ಹೊಸ ತಂತ್ರಜ್ಞಾನದ ಸದ್ಬಳಕೆ ಹಾಗೂ ಭಾರತದ ವಿವಿಧ ರಾಜ್ಯಗಳಲ್ಲಿ ನೀಡುವ ವಿಶೇಷ ಚಿಕಿತ್ಸಾ ಪದ್ಧತಿಯ ಅರಿವು ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು.ಉದ್ಘಾಟನಾ ಸಮಾರಂಭದಲ್ಲಿ ಡಾ. ವಿಶಾಲ ತುರ್ಲಾಪಾಠಿ, ಪ್ರಾಧ್ಯಾಪಕರು, ಪ್ರಸೂತಿತಂತ್ರ ಮತ್ತು ಸ್ತ್ರೀರೋಗವಿಭಾಗ, ಯಶವಂತ್ ಆಯುರ್ವೇದ ಕಾಲೇಜು, ಗೋವಾ, ಡಾ. ವಿಶ್ವೇಶ್ ಬಿ.ಎನ್,ಪ್ರಾಧ್ಯಾಪಕರು, ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗ, ಬನಾರಸ್ ಹಿಂದೂ ಯೂನಿವರ್ಸಿಟಿ, ವಾರಣಾಸಿ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ, ವೈದ್ಯಕೀಯ ಅಧೀಕ್ಷಕಿ ಹಾಗೂ ಪ್ರಸೂತಿತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಕೆ.ವಿ, ಮುಖ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಪ್ರಾಧ್ಯಾಪಕಿ ಡಾ. ರಮಾದೇವಿ ಜಿ., ಸಂಘಟನಾ ಕಾರ್ಯದರ್ಶಿ ಹಾಗೂ ಸಹಪ್ರಾಧ್ಯಾಪಕಿ ಡಾ. ಸುಚೇತ ಕುಮಾರಿ, ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಉಪಸ್ಥಿತರಿದ್ದರು. ಡಾ. ಸುಚೇತ ಕುಮಾರಿ ಸ್ವಾಗತಿಸಿ, ಸಹ ಸಂಯೋಜಕ ಹಾಗೂ ಸಹಪ್ರಾಧ್ಯಾಪಕ ಡಾ. ವಿದ್ಯಾ ಬಲ್ಲಾಳ್ ಕೆ. ವಂದಿಸಿದರು.

 ಈ ಕಾರ್ಯಗಾರದಲ್ಲಿ ಭಾರತದ ವಿವಿಧ ರಾಜ್ಯಗಳಿಂದ 12 ಮಂದಿ ನುರಿತಆಯುರ್ವೇದ ತಜ್ಞರಿಂದ 24 ವೈಜ್ಞಾನಿಕ ಕಾರ್ಯಾಗಾರಗಳನ್ನು ನೇರವೇರಿಸಲಾಯಿತು. ರಾಜ್ಯ ಹಾಗೂ ಹೊರರಾಜ್ಯಗಳಿಂದ 30 ಮಂದಿ ಆಯುರ್ವೇದದ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ಶಿಕ್ಷಕರು ಫಲಾನುಭವಿಗಳಾಗಿ ಭಾಗವಹಿಸಿದ್ದರು.

ಮಾ.13ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಎಸ್.ಡಿ.ಎಮ್.ಆಯುರ್ವೇದ ಕಾಲೇಜು, ಹಾಸನದ ಪ್ರಸೂತಿತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ. ಗಾಯತ್ರಿ ಭಟ್, ಕಾಲೇಜಿನ ಪ್ರಭಾರಪ್ರಾಂಶುಪಾಲೆ ಹಾಗೂ ಪ್ರಸೂತಿತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಕೆ.ವಿ, ಪ್ರಾಧ್ಯಾಪಕಿ ಡಾ. ರಮಾದೇವಿ ಜಿ.,ಸಹಪ್ರಾಧ್ಯಾಪಕಿ ಡಾ. ಸುಚೇತ ಕುಮಾರಿ, ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಮತ್ತು ಡಾ. ಸಮೀರ್ ಗೋಲಪ್ ಸುರೇಶ್ಚಂದ್ರ, ಸಹಪ್ರಾಧ್ಯಾಪಕರು, ಪ್ರಸೂತಿತಂತ್ರ ಮತ್ತು ಸ್ತ್ರೀ ರೋಗ ವಿಭಾಗ, ಎಸ್.ಎಮ್.ಬಿ.ಟಿ. ಆಯುರ್ವೇದ ಕಾಲೇಜು, ನಾಸಿಕ್ ಇವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಡಾ. ಸುಚೇತ ಕುಮಾರಿ ಸ್ವಾಗತಿಸಿ, ಕಾರ್ಯಾಗಾರದ ಸಾರಾಂಶವನ್ನು ವಿವರಿಸಿದರು. ಫಲಾನುಭವಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಮುಂದೆಯೂ ಕೂಡಾ ಈ ತರಹದ ಕಾರ್ಯಾಕ್ರಮವನ್ನು ಸಂಯೋಜಿಸಲು ವಿನಂತಿಸಿದರು. ಅತಿಥಿಗಳಿಂದ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಪ್ರಸೂತಿತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅರ್ಪಣಾರವರು ವಂದಿಸಿ,ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ. ಧರಿತ್ರಿ ಹಾಗೂ ಡಾ. ಶಾರೋನ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply