ಉಡುಪಿ ಜಿಲ್ಲೆಯಲ್ಲಿ ಇಂದು 220 ಮಂದಿಗೆ ನೆಗೆಟಿವ್

ಉಡುಪಿ, ಆಗಸ್ಟ್ 31,  ಕೋವಿಡ್-19 ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಇಂದು 220 ಮಂದಿಗೆ ನೆಗೆಟಿವ್ ಮತ್ತು 83 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಉಡುಪಿ ತಾಲೂಕಿನಲ್ಲಿ 28, ಕುಂದಾಪುರ 35 , ಕಾರ್ಕಳ 18 ಮತ್ತು ಹೊರ ಜಿಲ್ಲೆಗೆ ಸಂಬಂಧಿಸಿದಂತೆ 2 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇಂದು 303 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಈತನಕ  ಉಡುಪಿಯಲ್ಲಿ 9101 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2398 ಸಕ್ರಿಯ ಪ್ರಕರಣಗಳು ಉಳಿದಿವೆ.

Leave a Reply