ಶಾಸ್ತ್ರೋಕ್ತ ಸೂತ್ರದ ಆರೋಗ್ಯ ಸಂಜೀವಿನಿ ‘ಎಸ್‌ಡಿಎಮ್ ಚ್ಯವನಪ್ರಾಶ ಲೇಹ’

ಚ್ಯವನಪ್ರಾಶ ಲೇಹ ಪ್ರಾಚೀನ ಋಷಿಮುನಿಗಳಿಂದ ಬಂದಿರುವ ವಿಶೇಷ ಆಯುರ್ವೇದ ಆರೋಗ್ಯವರ್ಧಕ. ಇದನ್ನು ನೆಲ್ಲಿಕಾಯಿಯ ಮೂಲದಿಂದ ತಯಾರಿಸಲಾಗುತ್ತದೆ ಮತ್ತು
ಸುಮಾರು 50 ಇನ್ನಿತರ ರೋಗನಿರೋಧಕ ಶಕ್ತಿವರ್ಧಕ ಮತ್ತು ಪೌಷ್ಟಿಕ ಗಿಡಮೂಲಿಕೆಗಳು, ತುಪ್ಪ, ಎಳ್ಳು ಎಣ್ಣೆ, ಬೆಲ್ಲ ಇತ್ಯಾದಿಗಳನ್ನು ಹೊಂದಿರುತ್ತದೆ.
ಚ್ಯವನಪ್ರಾಶದ ತಯಾರಿಕೆಯಲ್ಲಿ ಸಂಯೋಜಿಸಲ್ಪಡುವ ನೈಸರ್ಗಿಕ ಮೂಲಿಕೆಗಳು ದೇಹದ ಅಂಗಾ೦ಶಗಳಿಗೆ ಔಷಧೀಯ ಸತ್ವಗಳನ್ನು ಸಾಗಿಸಲು ಯೋಗವಾಹಿಗಳಾಗಿ ಕಾರ್ಯ ನಿರ್ವಹಿಸುತ್ತವೆ. ಶರೀರ ಚಯಾಪಚಯಗಳನ್ನು ಸುಸ್ಥಿಯಲ್ಲಿಟ್ಟು ಆರೋಗ್ಯವೃದ್ಧಿಗೆ, ಧಾತುವೃದ್ಧಿಗೆ ಕಾರಣವಾಗತ್ತದೆ. ಇಂತಹಾ ಗುಣವಿಶೇಷತೆಯಿಂದಾಗಿ ಈ ಔಷಧವನ್ನು  ಆಬಾಲವೃದ್ಧರಾದಿಯಾಗಿ ಪ್ರಯೋಗಿಸಬಹುದು.
ಪದೇಪದೇ ಕೆಮ್ಮು ಬಾಧಿಸುತ್ತಿದ್ದಲ್ಲಿ ಈ ಔಷಧವನ್ನು ಪ್ರತಿ ಅರ್ಧಘಂಟೆಗೆ ಅರ್ಧ ಚಮಚೆಯಂತೆ ದಿನಕ್ಕೆ ಹತ್ತು ಹನ್ನೆರಡು ಸಲ ಸೇವಿಸಿಕೊಂಡಲ್ಲಿ ಶೀಘ್ರ ಪರಿಣಾಮವನ್ನು ಪಡೆಯಬಹುದು. ಸಾಮಾನ್ಯ ಆರೋಗ್ಯವೃದ್ಧಿಗೆ ಒಂದು ದೊಡ್ಡ ಚಮಚೆ ಲೇಹ್ಯವನ್ನು ದಿನಕ್ಕೆರಡು ಬಾರಿ ಊಟದ ಮೊದಲು ಹಾಲಿನೊಂದಿಗೆ ಸೇವಿಸಬಹುದು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿಯಲ್ಲಿ ಈ ಚ್ಯವನಪ್ರಾಶ ಲೇಹ್ಯದ ಅತ್ಯುತ್ತಮ ಗುಣಮಟ್ಟ ಖಾತ್ರಿಪಡಿಸಿಕೊಳ್ಳಲು ಹಸಿ ನೆಲ್ಲಿಕಾಯಿಯನ್ನೇ ಬಳಸಿ ಕೊಳ್ಳಲಾಗುತ್ತಿದೆ.  ಅಲ್ಲದೆ ಆಯ್ದ 50 ಗಿಡಮೂಲಿಕೆಗಳನ್ನು ರೀತಿಯಿಂದಲೇ ಸ೦ಯೋಜಿಸಿ ಕೊ೦ಡು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಲಾಗುವುದರಿಂದ ಚ್ಯವನಪ್ರಾಶ ಸೇವನೆಯ ಲಾಭಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳ ಬಹುದುದಾಗಿದೆ ಎಂದು ಫಾರ್ಮಸಿಯ ಜನರಲ್ ಮ್ಯಾನೇಜರ್ ಡಾ| ಮುರಳೀಧರ ಬಲ್ಲಾಳ್ ತಿಳಿಸಿರುತ್ತಾರೆ.
 
 
 
 
 
 
 
 
 
 
 

Leave a Reply