ಹಸುಗಳಿಗೆ ವಿಮೆ ಮಾಡಿಸುವಂತೆ ಡಾ.ಧನಂಜಯ್ ಸಲಹೆ

ಕೊಕ್ಕರ್ಣೆ:ಹೈನುಗಾರರು ತಮ್ಮ ರಾಸುಗಳಿಗೆ ಲವಣ ಮಿಶ್ರಿತ ಪೋಷಕಾಂಶ,ಪಶುಆಹಾರಗಳನ್ನು ವೈಜ್ಞಾನಿಕ ರೀತಿಯಲ್ಲಿ ನೀಡುವುದರಿಂದ ಗುಣಮಟ್ಟದ ಶುದ್ಧ ಹಾಲು ದೊರೆಯುತ್ತದೆ.

ಶುದ್ಧ ಹಾಲನ್ನು ಸಂಘಕ್ಕೆ ನೀಡುವುದರಿಂದ ಸಂಘದ ಅಭಿವೃದ್ಧಿಯೊಂದಿಗೆ ಹೈನುಗಾರರ ಅಭಿವೃದ್ಧಿ ಆಗುತ್ತದೆ ಎಂದು ದ.ಕ.ಹಾಲು ಒಕ್ಕೂಟ ಮಂಗಳೂರು ಇದರ ವೈಧ್ಯಾಧಿಕಾರಿ ಡಾ.ಧನಂಜಯ್ ಸಲಹೆ ನೀಡಿದರು.

ದ.ಕ.ಹಾಲು ಒಕ್ಕೂಟ ಮಂಗಳೂರು ಹೈನುಗಾರರಿಗೆ ಪಶು ವಿಮೆ ಯೋಜನೆಗೆ ಶೇಕಡಾ 75ರ ಅನುದಾನ ನೀಡುತ್ತಿದೆ.ಮಿನಿ ಡೈರಿ ಯೋಜನೆ,ಹಾಲು ಕರೆಯುವ ಯಂತ್ರ,ಹುಲ್ಲು ಕತ್ತರಿಸುವ ಯಂತ್ರ,ರಬ್ಬರ್ ಮ್ಯಾಟ್ ಅನಿಲ ಸ್ಥಾವರ ಘಟಕ,ಸ್ಲರಿ ಪಂಪ್,ಅಜೋಲ ಬೆಳೆ ಬೆಳೆಯಲು ಅನುದಾನ,ಹಸಿರು ಹುಲ್ಲು ಬೆಳೆಯಲು,ರೈತ ಕಲ್ಯಾಣ ಟ್ರಸ್ಟ್ನಿಂದ ಜಾನುವಾರುಗಳಿಗೆ ವಿಮೆ ಮುಂತಾದ ಹತ್ತು ಹಲವು ಅನುದಾನಗಳನ್ನು ಬಳಸಿಕೊಳ್ಳಿ ಎಂದು ಒಕ್ಕೂಟದ ವಿಸ್ತರಣಾಧಿಕಾರಿ ಮಂಜುನಾಥ್ ಹೇಳಿದರು.

ಹೊರ್ಲಾಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಹೆಚ್.ದಯಾನಂದ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಂಘದ ಬಳಿಯ ಸಾರ್ವಜನಿಕ ಸಭಾಭವನದಲ್ಲಿ ಶನಿವಾರ ಜರುಗಿತು.

ಸಂಘದ ಉಪಾಧ್ಯಕ್ಷ ಹೆಚ್.ವಿಶ್ವನಾಥ ಅಡಿಗ, ನಿರ್ದೇಶಕರುಗಳಾದ ಕೆ.ಭಾಸ್ಕರ ಶೆಟ್ಟಿ,ಮೋಹನದಾಸ ಹೆಗ್ಡೆ,ಅಶೋಕ ಶೆಟ್ಟಿ,ಜಯಪ್ರಕಾಶ ಶೆಟ್ಟಿ,ಪ್ರಭಾಕರ ಶೆಟ್ಟಿ,ಪರಮೇಶ್ವರ ನಾಯ್ಕ,ಬಾಬು ನಾಯ್ಕ,ಗಿರಿಜಾ ಶೆಟ್ಟಿ,ಲೀಲಾವತಿ ಶೆಟ್ಟಿ,ಸಂಘದ ಸಿಬ್ಬಂದಿ,ಹೈನುಗಾರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಮುಕುಂದ ಸ್ವಾಗತಿಸಿ,ವರದಿ ವಾಚಿಸಿ,ಹಾಲು ಪರೀಕ್ಷಕಿ ಜ್ಯೋತಿ ಧನ್ಯವಾದಗೈದು ಸಿಬ್ಬಂದಿ ರವಿ ಸಹಕರಿಸಿದರು.

ಬಾಕ್ಸ್:ಸಂಘವು ಪ್ರತಿನಿತ್ಯ 820ಲೀಟರ್ ಹಾಲು ಸಂಗ್ರಹಣೆ ಮಾಡುತ್ತಿದ್ದು 2020-2021ನೇ ಸಾಲಿನಲ್ಲಿ ಒಂದು ಲಕ್ಷದ ಏಳು ಸಾವಿರ ನಿವ್ವಳ ಲಾಭ ಗಳಿಸಿದ್ದು ಹೈನುಗಾರರಿಗೆ 65%ಭೋನಸ್,ಹೈನುಗಾರ ಸದಸ್ಯರಿಗೆ ಬಹುಮಾನವನ್ನು ನೀಡಲಾಯಿತು.

 
 
 
 
 
 
 
 
 
 
 

Leave a Reply