ಕೋವಿಡ್-19: ಇಂದು ಉಡುಪಿಯಲ್ಲಿ 858 ನೆಗೆಟಿವ್

ಕೋವಿಡ್-19 ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಇಂದು 858 ಮಂದಿಗೆ ನೆಗೆಟಿವ್ ಬಂದಿದೆ. 215 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಉಡುಪಿ ತಾಲೂಕಿನಲ್ಲಿ 121, ಕುಂದಾಪುರ 50, ಕಾರ್ಕಳ 35 ಮತ್ತು ಹೊರ ಜಿಲ್ಲೆಗೆ ಸಂಬಂಧಿಸಿದಂತೆ 9 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇಂದು 311 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  ಜಿಲ್ಲೆಯಲ್ಲಿಂದು ಕೋವಿಡ್-19 ಸಂಬಂಧಿಸಿದಂತೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಉಡುಪಿಯಲ್ಲಿ 13,621 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1337 ಸಕ್ರಿಯ ಪ್ರಕರಣಗಳು ಉಳಿದಿವೆ.

 
 
 
 
 
 
 
 
 
 
 

Leave a Reply