ವಿದ್ಯೋದಯ ಪದವಿ ಪೂರ್ವ ಕಾಲೇಜು 100%

ದ್ವಿತೀಯ ಪಿಯುಸಿ ಫಲಿತಾಂಶ ೧೦೦% ಹಾಗೂ ೧೩ ರ‍್ಯಾಂಕ್

ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.) ನ ಅಂಗಸ0ಸ್ಥೆಯಾದ ವಿದ್ಯೋದಯ ಪದವಿಪೂರ್ವ ಕಾಲೇಜು ೨೦೨೨-೨೩ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ ೧೦೦ ಫಲಿತಾಂಶ ದಾಖಲಿಸಿದೆ.

ಈ ಬಾರಿ ವಿಜ್ಞಾನ ವಿಭಾಗದಲ್ಲಿ ೧೦೦% ಫಲಿತಾಂಶ ದಾಖಲಾಗಿದ್ದು, ಈ ವರುಷ ೩೧೧ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; ೨೪೧ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು ೬೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ೧ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ೧೦೦% ಫಲಿತಾಂಶ ದಾಖಲಾಗಿದ್ದು, ಈ ವರುಷ ೯೪ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; ೫೯ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು ೩೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ೮ ರಾಜ್ಯ ಮಟ್ಟದ ರ‍್ಯಾಂಕಗಳು:
ಸ್ರಜಾ ಎಚ್. ಹೆಗ್ಡೆ ೫೯೧ ಅಂಕಗಳೊoದಿಗೆ ೬ನೇ ರ‍್ಯಾಂಕ್, ಜೆರೋಹಮ್ ಲಾಯ್ಡ್ ಮಾಬೆನ್ ೫೯೦ ಅಂಕಗಳು ೭ನೇ ರ‍್ಯಾಂಕ್, ಸುಹಾನಿ ಎಸ್. ಗಾಂವ್ಕರ್ ಮತ್ತು ರಿಯಾ ಪೈ ೫೮೯ ಅಂಕಗಳು ೮ ನೇ ರ‍್ಯಾಂಕ್, ದಿಯಾ ಎಸ್. ಶೆಟ್ಟಿ ೫೮೮ ಅಂಕಗಳೊoದಿಗೆ ೯ನೇ ರ‍್ಯಾಂಕ್ ಮತ್ತು ೫೮೭ ಅಂಕಗoಳೊoದಿಗೆ ೧೦ನೇ ರ‍್ಯಾಂಕ್‌ನ್ನು ರೋಶನ್ ರತ್ನಾಕರ ಪೂಜಾರಿ, ಶ್ರೇಯ ಮತ್ತು ಸಿಂಚನಾ ಸಿ. ಪೂಜಾರಿ ಗಳಿಸಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ೫ ರಾಜ್ಯ ಮಟ್ಟದ ರ‍್ಯಾಂಕಗಳು:
ರಮ್ಯಾ ಆರ್. ಭಟ್ ೫೯೩ ಅಂಕಗಳೊoದಿಗೆ ೫ನೇ ರ‍್ಯಾಂಕ್, ಮೈಥಿಲಿ ೫೯೧ ಅಂಕಗಳೊoದಿಗೆ ೭ನೇ ರ‍್ಯಾಂಕ್, ಹನ್ಫಾ ಅಸ್ಲಾಂ ಬೆಯಜಿದ್ ೫೯೦ ಅಂಕಗಳು ೮ನೇ ರ‍್ಯಾಂಕ್, ನಿಮಿತ್ ವೈ ಸುವರ್ಣ ೫೮೯ ಅಂಕಗಳು ೯ನೇ ರ‍್ಯಾಂಕ್, ೫೮೮ ಅಂಕಗಳೊoದಿಗೆ ೧೦ನೇ ರ‍್ಯಾಂಕ್ ಸುಪ್ರೀತಾ ಗಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply