ನಿರಂತರ ಕಲಿಕಾ ಮೌಲ್ಯಮಾಪನ ವಿದ್ಯಾಸಂಸ್ಥೆಗಳ ಬೆಳವಣಿಗೆಗೆ ಅವಶ್ಯಕ~  ಪ್ರೊ.(ಡಾ.) ಪಿ.ಈಶ್ವರ ಭಟ್.

ಉಡುಪಿ.: ಶಿಕ್ಷಣ ಸಂಸ್ಥೆಗಳು ಸಮಾಜದ ಒಂದು ಭಾಗವಾಗಿದ್ದು, ಸಮಾಜದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಜಾಗತಿಕ ಸ್ಪಧಾ೯ತ್ಮಕತೆಗೆ ಅನುಗುಣವಾಗಿ ನವೀನ ಸಂಶೋಧನಾ ಚಟುವಟಿಕೆಗಳ ಹಾಗೂ ನಿರಂತರ ಕಲಿಕಾ ಮೌಲ್ಯಮಾಪನದ ಮೂಲಕ ಶಿಕ್ಷಣ ಸಂಸ್ಥೆಗಳು ಬೆಳವಣಿಗೆ ಸಾಧಿಸುವ ಅವಶ್ಯಕತೆ ಇದೆ ಎಂದು ಕನಾ೯ಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.(ಡಾ.)ಪಿ. ಈಶ್ವರ ಭಟ್ ರವರು ಹೇಳಿದರು.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯವು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್), ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಉನ್ನತ ಶಿಕ್ಷಣ ಸಂಸ್ಥೆಗಳ ಭವಿಷ್ಯದ ನಿರೀಕ್ಷೆಗಳು ಮತ್ತು ಪರಿಷ್ಕ್ರತ ಮಾನ್ಯತೆ ಹಾಗೂ ಮೌಲ್ಯಮಾಪನ ಸೂಚಿ” ಎಂಬ ವಿಷಯದ ಮೇಲಿನ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ (ಆನ್‌ಲೈನ್)ದ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ, ಭಾರತದ ವಿಶ್ವವಿದ್ಯಾಲಯಗಳು, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ಸಂಶೋಧನೆಯ ವಿಷಯದಲ್ಲಿ ಹಿಂದುಳಿದಿದ್ದು, ನವೀನ ವಿಧಾನಗಳು ಮತ್ತು ಹೊಸ ತಂತ್ರಗಳನ್ನು ಅನುಸರಿಸುವುದರ ಮೂಲಕ ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಸ್ಪಂದಿಸುವAತಹ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂದು ಹೇಳಿದರು.
ಕಾಯ೯ಕ್ರಮದಲ್ಲಿ ಕನಾ೯ಟಕ ಸಕಾ೯ರದ ಕಾನೂನು ಇಲಾಖೆಯ ಪ್ರಧಾನ ಕಾಯ೯ದಶಿ೯ಗಳಾದ ಶ್ರೀ.ವೆಂಕಟೇಶ್ ನಾಯಕ್ ಟಿ. ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾನೂನು ವಿದ್ಯಾಥಿ೯ಗಳು ಕಾನೂನುಗಳು, ಪ್ರಕ್ರಿಯಾ ಸಂಹಿತೆಗಳು, ಸಂವಿಧಾನಗಳನ್ನು ಸರಿಯಾದ ರೀತಿಯಲ್ಲಿ ಅಭ್ಯಸಿಸಬೇಕು ಹಾಗೂ ವೃತ್ತಿಗೆ ಅವಶ್ಯಕವಾಗಿರುವ ಶಿಷ್ಟಚಾರ ಮತ್ತು ಸಭ್ಯತೆಗಳನ್ನು ಬೆಳಸಿಕೊಳ್ಳಬೇಕೆಂದು ವಿದ್ಯಾಥಿ೯ಗಳಿಗೆ ಕರೆ ನೀಡಿದರು.
 ಸಮ್ಮೇಳನದಲ್ಲಿ ಡಾ.ಜಿ.ಎಸ್.ಮಲ್ಲಿಕಾಜು೯ನಪ್ಪ, ನಿವೃತ್ತ ಪ್ರಾಂಶುಪಾಲರು, ಸಾವ೯ಜನಿಕ ಶಿಕ್ಷಣ ಇಲಾಖೆ ಮತ್ತು ಶೈಕ್ಷಣಿಕ ಸಲಹೆಗಾರರು “ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಭಾರತದಲ್ಲಿ ಉನ್ನತ ಶಿಕ್ಷಣದ ಭವಿಷ್ಯ” ಎಂಬ ವಿಷಯದ ಬಗ್ಗೆ, ಡಾ.ಸುಜಾತ ಪಿ.ಶಾನ್‌ಭಾಗ್ ಸಲಹೆಗಾರರು, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಲಿ, ಬೆಂಗಳೂರು ರವರು “ಪರಿಷ್ಕ್ರತ ಮಾಗ೯ಸೂಚಿಗಳು ಮತ್ತು ಎಸ್.ಎಸ್.ಅರ್ ಹಾಗೂ ಐ.ಕ್ಯೂ.ಎ.ಸಿ ಆನ್‌ಲೈನ್ ಸಲ್ಲಿಕೆ” ಎಂಬ ವಿಷಯದ ಬಗ್ಗೆ ಹಾಗೂ ಪ್ರೊ.ಇಂದ್ರಜಿತ್ ದುಬೆ, ರಾಜೀವ್‌ಗಾಂಧಿ ಬೌದ್ದಿಕ ಸ್ವತ್ತಿನ ಹಕ್ಕುಗಳ ಶಾಲೆ, ಐ.ಐ.ಟಿ ಕರಗ್‌ಪುರ್ ರವರು “ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಖಾತ್ರಿಪಡಿಸುವ ಅವಿಷ್ಕಾರಗಳು” ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಷಯ ಮಂಡನೆ ಮಾಡಿದರು.
ಕಾಯ೯ಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.(ಡಾ.) ನಿಮ೯ಲ ಹರಿಕೃಷ್ಣ ರವರು ಅತಿಥಿಗಳನ್ನು ಸ್ವಾಗತಿಸಿದರು. ಪ್ರಾದ್ಯಾಪಕರುಗಳಾದ ಶ್ರೀಮತಿ ಪ್ರೀತಿ ಹರೀಶ್ ರಾಜ್ ರವರು ಅತಿಥಿಗಳನ್ನು ಕಾಯ೯ಕ್ರಮಕ್ಕೆ ಪರಿಚಯಿಸಿದರು, ಶ್ರೀಮತಿ ಸುರೇಖಾ ಕೆ ರವರು ವಂದನಾಪ೯ಣೆ ಸಲ್ಲಿಸಿದರು. ಶ್ರೀಮತಿ ಜಯಮೋಲ್ ಪಿ.ಎಸ್ ರವರು ಕಾಯ೯ಕ್ರಮವನ್ನು ನಿರೂಪಿಸಿದರು. ಶ್ರೀ. ರಘನಾಥ್ ಕೆ.ಎಸ್ ರವರು ಕಾಯ೯ಕ್ರಮದ ಸಂಯೋಜರಾಗಿದ್ದರು.
 
 
 
 
 
 
 
 
 
 
 

Leave a Reply