ಯು.ಪಿ.ಎಂ.ಸಿ ಟ್ರೋಫಿ 2023- ಕ್ರಿಕೆಟ್ ಪಂದ್ಯಾಟ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿ ಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಮಿತ್ರರು ಆಯೋಜಿಸಿದ ಯು.ಪಿ‌.ಎಂ.ಸಿ ಟ್ರೋಫಿ 2023 ಅಂತರ್ಕಾಲೇಜು ಕ್ರಿಕೆಟ್ ಪಂದ್ಯಾಟ ಹಾಗೂ 24 ವಯೋಮಿತಿಯ ಕಿರಿಯರಿಗೆ ಆಯೋಜಿಸಿದ ಕ್ರಿಕೆಟ್ ಪಂದ್ಯಾಟವು ಮಾರ್ಚ್ 25ರಂದು ಉಡುಪಿ ದೊಡ್ಡಣಗುಡ್ಡೆಯ ಗುಂಡಿಬೈಲು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

.ಯು.ಪಿ.ಎಂ.ಸಿ ಯ ಪ್ರಾಚಾರ್ಯರಾದ ಡಾ.ಮಧುಸೂದನ ಭಟ್ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳ ಅಂತರ್ಮುಖಿ ಪ್ರತಿಭೆಗಳ ಅಭಿವ್ಯಕ್ತಿಗೆ ಇಂತಹ ಕ್ರೀಡೆಗಳು ಪೂರಕವಾಗಿದ್ದು ತರಗತಿಗಳಲ್ಲಿ ಕಲಿಯುವ ನಿರ್ವಾಹಣೆಯ ವಿಚಾರಗಳನ್ನು ಪ್ರಾಯೋಗಿ ಕವಾಗಿ ನಡೆಸಲು ಇದೊಂದು ಉತ್ತಮ ಅವಕಾಶ ಎಂದು ಹೇಳಿದರು.

ಕಾಲೇಜಿನ ಉಪನ್ಯಾಸಕರುಗಳಾದ ಶ್ರೀ ಚಂದ್ರಶೇಖರ್, ಶ್ರೀ ಜಾವೇದ್, ಶ್ರೀ ರಾಘವೇಂದ್ರ ಜಿ.ಜಿ, ಶ್ರೀ ಹರಿಕೇಶವ್, ಶ್ರೀಮತಿ ಸುನೀತಾ ಕಾಮತ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಗೆಳೆಯರ ಪ್ರತಿನಿಧಿಗಳಾದ ಪ್ರಜ್ವಲ್, ಆಶಿಶ್, ಸೂರಜ್ ಕುಮಾರ್, ಶಶಾಂಕ್ ದೇವಾಡಿಗ, ಜ್ಞಾನೇಶ್ ಇವರು ಕಾರ್ಯಕ್ರಮ ಸಂಯೋಜಿ ಸಿದರು.

ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು, ಶಶಾಂಕ್ ದೇವಾಡಿಗ ವಂದಿಸಿದರು, ಹಿಮಲ್ ಕುಮಾರ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply