ಸಾಹೇಬರಕಟ್ಟೆಯ ಮಹಾತ್ಮಾ ಗಾಂಧಿ ಪ್ರೌಢಶಾಲೆಗೆ 3 ಕಂಪ್ಯೂಟರ್ ಗಳ ಹಸ್ತಾಂತರ

ಸಾಹೇಬರಕಟ್ಟೆಯ ಮಹಾತ್ಮಾ ಗಾಂಧಿ ಪ್ರೌಢಶಾಲೆಗೆ ರೋಬೋಸಾಫ್ಟ್ ಟೆಕ್ನಾಲಜೀಸ್ ಸಂತೆಕಟ್ಟೆ ಉಡುಪಿ ಇದರ ವತಿಯಿಂದ ರೂ1.5 ಲಕ್ಷ ಮೌಲ್ಯದ 3 ಕಂಪ್ಯೂಟರ್ ಗಳ ಹಸ್ತಾಂತರ ಕಾರ್ಯಕ್ರಮ ಜರಗಿತು. ರೋಬೋಸಾಫ್ಟ್ ನ ಕಾರ್ಯದರ್ಶಿ ಶ್ರೀ ಚಕ್ರೀ ಹೆಗ್ಡೆ ಈ ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿ ಮಾತನಾಡುತ್ತಾ ಕಾರ್ಪೊರೇಟ್ ವಲಯದ ಸಂಸ್ಥೆ ನಮ್ಮದಾಗಿದ್ದು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ಶಾಲೆಗಳಿಗೆ ಮೂಲಭೂತ ಅಗತ್ಯತೆಗಳಲ್ಲಿ ಒಂದಾದ ಕಂಪ್ಯೂಟರ್ ಗಳನ್ನು ಕೊಡುವಮೂಲಕ ಸಮಾಜೋಪಯೋಗಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಮ್ಮದು ಎಂದು ತಿಳಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಲ್ತಾರು ನಿರಂಜನ ಹೆಗ್ಡೆ ಕಂಪ್ಯೂಟರ್ ಗಳನ್ನು ಸ್ವೀಕರಿಸಿ ರೋಬೋಸಾಫ್ಟ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ ಅದರ ಸದ್ವಿನಿಯೋಗದ ಕುರಿತು ತಿಳಿಸಿದರು. ಸಮಾರಂಭದಲ್ಲಿ ಶ್ರೀ ಚಕ್ರಿ ಹೆಗ್ಡೆ ಇವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

 

ರೋಬೋಸಾಫ್ಟ್ ನ ಆಡಳಿತಾಧಿಕಾರಿ ಶ್ರೀ ಪ್ರಸಾದ್ ಆಚಾರ್ಯ, ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಕೊಳ್ಕೆಬೈಲ್ ಸದಸ್ಯರಾದ ಶ್ರೀ ಅಶೋಕ ಪ್ರಭು ಸಾಹೇಬರಕಟ್ಟೆ ಹಾಗೂ ಶ್ರೀ ರಾಮಪ್ರಕಾಶ್, ಸಂಸ್ಥೆಯ ಬೋಧಕ- ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಸ್ವಾಗತಿಸಿ ಶಿಕ್ಷಕಿ ಡೈಸಿ ಡಿಸಿಲ್ವ ವಂದಿಸಿದರು. ಶಿಕ್ಷಕ ಶಿರಿಯಾರ ಗಣೇಶ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply