ಉಡುಪಿ ಉನ್ನತಿ ಕೆರಿಯರ್ ಅಕಾಡೆಮಿಯಲ್ಲಿ ನಾಲ್ಕನೇ ಮಾಸಿಕ “ಉನ್ನತಿ ಉದ್ಯೋಗ ಮೇಳ’ 

 

ಕೌಶಲ್ಯ ಶಿಕ್ಷಣಕ್ಕೆ ಸುಪ್ರಸಿದ್ಧ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾಗಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ಜನವರಿ 2023ರಿಂದ ಜನವರಿ 2024ರ ವರೆಗೆ ಪ್ರತಿ ತಿಂಗಳು ಉಚಿತ ಮಾಸಿಕ “ಉನ್ನತಿ ಉದ್ಯೋಗ ಮೇಳ”ಗಳನ್ನು ಪ್ರಾರಂಭಿಸಿದ್ದು, ಇಂದು ತನ್ನ ಕ್ಯಾಂಪಸ್ ನಲ್ಲಿ ನಾಲ್ಕನೇ ಮೇಳವನ್ನು ಆಯೋಜಿಸಲಾಗಿತ್ತು.

ಈ ಮೇಳದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ನೂರಾರು ಉದ್ಯೋಗಾಕಾಂಕ್ಷಿಗಳು ನೇರ ಸಂದರ್ಶನ ಮೂಲಕ ವಿವಿಧ ಕ್ಷೇತ್ರಗಳ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಹೆಚ್ ಡಿ ಫ್ ಸಿ ಲೈಫ್, ಐ ಡಿ ಎಫ್ ಸಿ ಬ್ಯಾಂಕ್, ವೈಟ್ ಲೋಟಸ್ , ಫಿಷರ್ಮೆನ್ಸ್ ಡೇ ಹೀಗೆ ಹತ್ತಾರು ಕಂಪೆನಿಗಳು ಭಾಗವಹಿಸಿದ್ದವು.

ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ “ನಮ್ಮ ಪ್ರತಿ ತಿಂಗಳ ಉದ್ಯೋಗ ಮೇಳಗಳಿಗೆ ಬಹು ಬೇಡಿಕೆಯಿದ್ದು, ಇದೀಗ ಇಂತಹ ಮೇಳಗಳನ್ನು ಪ್ರತಿ ಗುರುವಾರ ಸಂಸ್ಥೆಯ ಆವರಣದಲ್ಲಿ ಆಯೋಜಿಸುವ ಯೋಚನೆ ಇದೆ. ಈ ಮೇಳಗಳಲ್ಲಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇ೦ಜಿನೀಯರಿಂಗ್, ಡಿಪ್ಲೊಮಾ ಅಭ್ಯರ್ಥಿಗಳು ಭಾಗವಹಿಸುತ್ತಿದ್ದು, ಉತ್ತಮ ಉದ್ಯೋಗ ದೊರಕಿಸುವ ದೃಷ್ಟಿಯಿಂದ ಟೂಲ್ ಬೇಸ್ಡ್ ಕೌಶಲ್ಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳಿಗೆ ಪ್ರಸಿದ್ಧ ಐಟಿ, ಬ್ಯಾಂಕಿಂಗ್, ಹಾಸ್ಪಿಟಾಲಿಟಿ ಇನ್ನಿತರ ಕಂಪೆನಿಗಳಲ್ಲಿ ಅವಕಾಶಗಳನ್ನು ಒದಗಿಸಲು ನಾವು ತಯಾರಿ ನಡೆಸಿದ್ದೇವೆ.

ಆಸಕ್ತ ಅಭ್ಯರ್ಥಿಗಳು ಈ ಟೂಲ್ ಬೇಸ್ಡ್ ಪರೀಕ್ಷೆಗೆ ಹಾಜರಾಗಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಅಭ್ಯರ್ಥಿಗಳಲ್ಲಿ ಕೌಶಲ್ಯದ ಕೊರತೆ ಕಂಡು ಬಂದರೆ ಸಂಸ್ಥೆಯು ಇಂತಹ ಅಭ್ಯರ್ಥಿಗಳಿಗೆ 1-2 ತಿಂಗಳ ಅವಧಿಯಲ್ಲಿ ತರಬೇತಿ ನೀಡಿ ಮುಂದಿನ ಉದ್ಯೋಗ ಮೇಳಗಳಲ್ಲಿ ಅವಕಾಶ ಕಲ್ಪಿಸಲಿದೆ” ಎಂದು ತಿಳಿಸಿದರು. ಆಸಕ್ತ ಅಭ್ಯರ್ಥಿಗಳು ಮತ್ತು ಉದ್ಯೋಗದಾತರು www.unnathijobs.com ಮೂಲಕ ನೋಂದಣಿ ಮಾಡಿಕೊ೦ಡು ಈ ಮೇಳಗಳಲ್ಲಿ ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ರಾಜೇಶ್, ಸ್ಮೃತಿ, ಛಾಯಾ,ಪ್ರಿಯಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply