ಮಾರ್ಚ್ 9 ರಿಂದ 29 ರವರೆಗೆ ದ್ವೀತಿಯ ಪಿಯು ಪರೀಕ್ಷೆ

ಮಾರ್ಚ್ 9 ರಿಂದ 29 ರವರೆಗೂ ದ್ವೀತಿಯ ಪಿಯು
ಪರೀಕ್ಷೆಗಳು ನಡೆಯಲಿದ್ದು ಇದೆ ಮೊದಲ ಬಾರಿಗೆ ಪಿಯುಸಿ
ಪರೀಕ್ಷೆಯಲ್ಲಿ ಮಲ್ಟಿಪಲ್ ಚಾಯ್ಸ್ ಇರಲಿದೆ. ಮಕ್ಕಳು ಪಾಸಾಗಲು 3
ಹಂತದ ಪ್ರಶ್ನೆಗಳು ಇರಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ನಡೆದ ಸಭೆ ಬಳಿಕ
ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ
ಬಿ.ಸಿ.ನಾಗೇಶ್ ಈ ಬಾರಿ ದ್ವಿತೀಯ ಪಿಯುಸಿ ಪರೀಸಖೆಯಲ್ಲಿ ಒಟ್ಟು
5716 ಕಾಲೇಜುಗಳು ಭಾಗಿಯಾಗಲಿವೆ. ಒಟ್ಟು 7,27,387
ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. 1109 ಒಟ್ಟು ಪರೀಕ್ಷಾ
ಕೇಂದ್ರಗಳು ಇರಲಿದೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ಅವಕಾಶ ಇರುವುದಿಲ್ಲ ಪರೀಕ್ಷೆ
ಪ್ರಾರಂಭವಾಗುವ 15 ನಿಮಿಷ ಮೊದಲು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಹಾಜರಿರಬೇಕು ಇದೆ ಮೊದಲ ಬಾರಿಗೆ
ಪಿಯುಸಿ ಪರೀಕ್ಷೆಯಲ್ಲಿ ಮಲ್ಟಿಪಲ್ ಚಾಯ್ಸ್ ಇರಲಿದೆ. ಮಕ್ಕಳು ಪಾಸಾಗಲು 3 ಹಂತದ ಪ್ರಶ್ನೆಗಳು ಇರಲಿವೆ ಎಂದು ವಿವರಿಸಿದರು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ

ದಿನಾಂಕ 09-03-2023 ಗುರುವಾರ – ಕನ್ನಡ, ಅರೇಬಿಕ್

ದಿನಾಂಕ 11-03-2023, ಶನಿವಾರ – ಗಣಿತ ಶಾಸ್ತ್ರ ಶಿಕ್ಷಣ ಶಾಸ್ತ್ರ

ದಿನಾಂಕ 13-03-2023, ಸೋಮವಾರ – ಅರ್ಥಶಾಸ್ತ್ರ

ದಿನಾಂಕ 14-03-2023, ಮಂಗಳವಾರ – ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ ರಸಾಯನಶಾಸ್ತ್ರ ಮೂಲ ಗಣಿತ

ದಿನಾಂಕ 15-03-2023 ಬುಧವಾರ – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ದಿನಾಂಕ 16-03-2023 ಗುರುವಾರ – ತರ್ಕಶಾಸ್ತ್ರ ವ್ಯವಹಾರ ಅಧ್ಯಯನ

ದಿನಾಂಕ 17-03-2023, ಶುಕ್ರವಾರ – ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್

ದಿನಾಂಕ 18-03-2023, ಶನಿವಾರ – ಭೂಗೋಶಶಾಸ್ತ್ರ ಜೀವಶಾಸ್ತ್ರ

ದಿನಾಂಕ 20-03-2023, ಸೋಮವಾರ – ಇತಿಹಾಸ, ಭೌತಶಾಸ್ತ್ರ

ದಿನಾಂಕ 21-03-2023, ಮಂಗಳವಾರ – ಹಿಂದಿ

ದಿನಾಂಕ 23-03-2023, ಗುರುವಾರ – ಇಂಗ್ಲೀಷ್

ದಿನಾಂಕ 25-03-2023 ಶನಿವಾರ – ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ

ದಿನಾಂಕ 27-03-2023, ಸೋಮವಾರ – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ ಭೂಗರ್ಭಶಾಸ್ತ್ರ ಗೃಹ ವಿಜ್ಞಾನ

ದಿನಾಂಕ 29-03-2023, ಬುಧವಾರ – ಸಮಾಜಶಾಸ್ತ್ರ ವಿದ್ಯುನ್ಮಾನಶಾಸ್ತ್ರ ಗಣಕ ವಿಜ್ಞಾನ

 
 
 
 
 
 
 
 
 
 
 

Leave a Reply