ಕುತ್ಪಾಡಿ ಎಸ್ ಡಿ ಎಂ ನಲ್ಲಿ ವಿಶ್ವ ಯೋಗ ದಿನಾಚರಣೆ – 2021

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಕುತ್ಪಾಡಿ ಉಡುಪಿಯ ಸ್ವಸ್ಥವೃತ್ತ ವಿಭಾಗವು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆ – 2021ರ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಪ್ರಯುಕ್ತವಾಗಿ ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಲಯ ಬದ್ಧ ಯೋಗ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 
ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 08.06.2021 ರಿಂದ 21.06.2021 ರವರೆಗೆ ಆನ್ಲೈನ್ ಯೋಗ ತರಬೇತಿ ಶಿಬಿರವನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರು, ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಆಯೋಜಿಸಲಾಗಿತ್ತು. ದಿನಾಂಕ 21.06.2021ರಂದು ಅತಿಥಿ ಉಪನ್ಯಾಸವನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿತ್ತು. 
ಅತಿಥಿಗಳಾಗಿ ಉಪನ್ಯಾಸ ನೀಡಿದ ಡಾ| ನಿತಿನ್ ಪಾಟೀಲ್, ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಯೋಗ ಮತ್ತು ಆಯುರ್ವೇದ ವಿಭಾಗ ಶ್ರೀ ದೇವರಾಜ್ ಅರಸ್ ಮೆಡಿಕಲ್ ಕಾಲೇಜ್ ಕೋಲಾರ ಇವರು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಮತ್ತು ಒತ್ತಡ, ಹಿರಿಯರಲ್ಲಿ ಕೆಲಸದ ಒತ್ತಡ ಸಾಮಾನ್ಯವಾಗಿದೆ. ಇವುಗಳ ನಿವಾರಣೆಗೆ ಹಲವಾರು ಉಪಾಯಗಳಿದ್ದು ಅವುಗಳಲ್ಲಿ ಮುಖ್ಯ ವಾದದ್ದು ಯೋಗ. 
ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮನಸ್ಸಿನ ಪಾತ್ರ ಬಹಳ. ಮನಸ್ಸಿನ ಸಂರಕ್ಷಣೆ, ವಿವಿಧ ಒತ್ತಡ ಹಾಗೂ ರೋಗಗಳಿಗೆ ಆಯುರ್ವೇದ ಮತ್ತು ಯೋಗ ಶಾಸ್ತ್ರದ ಸಹಯೋಗ ಪ್ರಾಮುಖ್ಯವೆಂದು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ಇವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಯೋಗವು ಬಹಳ ಪ್ರಾಮುಖ್ಯವನ್ನು ಪಡೆಯುತ್ತಿದೆ. 
ಯೋಗದ ಅಭ್ಯಾಸ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ, ನಿರಂತರ ಅಭ್ಯಾಸ ಮಾಡುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಬಹುದೆಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು. ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ ಸಮುದ್ರುಡು ಸ್ವಾಗತಿಸಿದರು. ಡಾ. ಅಪರ್ಣ ಕಾರ್ಯಕ್ರಮ ನಿರೂಪಿಸಿದರು.
ಡಾ ರಕ್ಷಿತ ವಂದನೆಗೈದರು. ಡಾ. ವಿಜಯ್ ಬಿ. ನೆಗಳೂರು, ಡಾ. ವಿದ್ಯಾಲಕ್ಷ್ಮಿ ಕೆ, ಡಾ. ಯೋಗೀಶ ಆಚಾರ್ಯ, ಡಾ. ಸಂದೇಶ್ ಕುಮಾರ್ ಶೆಟ್ಟಿ, ಡಾ. ಶ್ರೀನಿಧಿ ಧನ್ಯ ಬಿ.ಎಸ್. ಡಾ ಸರಿತ, ಡಾ ಶರಶ್ಚಂದ್ರ, ಡಾ. ಕೃತಿ ಅಮೈ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply