ಪಿಪಿಸಿ ಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

ಗಣಿತ ಶಾಸ್ತ್ರ, ವಿಜ್ಞಾನ ವಿಭಾಗದ ಒಂದು ಮುಖ್ಯ ಅಂಗ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳಲ್ಲಿ ಶೇಕಡಾ೬೦ ರಷ್ಟು ಗಣಿತ ಶಾಸ್ತ್ರದ ಪ್ರಭಾವವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪದವಿಯ ನಾಲ್ಕನೇ ವಷ೯ದಲ್ಲಿ ಯೋಜನೆಗಳಿಗೆ ಪ್ರಾಮುಖ್ಯತೆ ಇರುವುದರಿಂದ ಈ ವಿಚಾರ ಸಂಕಿರಣವು ಆ ನಿಟ್ಟಿನಲ್ಲಿ ತುಂಬಾ ಅಗತ್ಯ.
ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗಣಿತ ಶಾಸ್ತ್ರ ವಿಭಾಗದ ವತಿಯಿಂದ “Scope of Research in Discrete Mathematics as per NEP ” ಎಂಬ ವಿಷಯದ ಮೇಲೆ ಆಯೋಜಿಸಲಾದ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಶಿವಮೊಗ್ಗ ಜಿಲ್ಲೆಯ,ಕುವೆಂಪು ವಿಶ್ವವಿದ್ಯಾಲಯದ, ವಿಶ್ರಾಂತ ಕುಲಪತಿಗಳಾದ ,ಪ್ರೋ . ಬಿ. ಎಸ್ .ಶೇರೇಗಾರ ಮಾತನಾಡಿದರು.
ಕೊಚ್ಚೀನ್ ವಿಶ್ವವಿದ್ಯಾಲಯದ , ಗೌರವಾನ್ವಿತ  ಪ್ರೋಪೇಸರ್ ಡಾ.ಅಂಬಟ್ ವಿಜಯಕುಮಾರ್ ಇವರು ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಪೂರ್ಣಪ್ರಜ್ಞ ಕಾಲೇಜಿನ ಗೌರವ ಕೋಶಾಧಿಕಾರಿ ಶ್ರೀ ಪ್ರಶಾಂತ್ ಹೊಳ್ಳ , ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ , ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕರಾದ ಡಾ ವಿನಯ್ ಕುಮಾರ್  ಉಪಸ್ಥಿತರಿದ್ದರು.
ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ರಾಕೇಶ್ ಸ್ವಾಗತಿಸಿದರು. ವಿಚಾರ ಸಂಕೀರಣದ ಸಂಯೋಜಕ ಶ್ರೀ ಗೌತಮ್ ವಂದಿಸಿದರು. ವಿದ್ಯಾಥಿ೯ ವಾಸುಕಿ ಕಾಯ೯ಕ್ರಮ ನಿರೂಪಿಸಿದರು
 
 
 
 
 
 
 
 
 
 
 

Leave a Reply