ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿ ಪುತ್ತಿಗೆ ವಿದ್ಯಾಪೀಠ ಆರಂಭ

ಉಡುಪಿ: ಇಲ್ಲಿನ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಬೆಂಗಳೂರು ಬಸವನಗುಡಿ ಶಾಖಾ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಶ್ರೀ ಪುತ್ತಿಗೆ ವಿದ್ಯಾಪೀಠದ ನೂತನ ಶಾಖೆ ಜು. 25ರಿಂದ ಪ್ರಾರಂಭವಾಗಲಿದೆ.

ಉಡುಪಿ ಹಿರಿಯಡಕ ಸಮೀಪದ ಪುತ್ತಿಗೆಯಲ್ಲಿ ಕಳೆದ 36 ವರ್ಷದಿಂದ ಪುತ್ತಿಗೆ ವಿದ್ಯಾಪೀಠ ಸಾಂಪ್ರದಾಯಿಕ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡುತ್ತಿದ್ದು, ಈಗಾಗಲೇ ಅನೇಕ ಮಂದಿ ವೈದಿಕ ವಿದ್ಯಾಂಸರನ್ನು ಸಮಾಜಕ್ಕೆ ನೀಡಿದೆ. ಇದೀಗ ಬೆಂಗಳೂರು ಶಾಖೆ ಮೂಲಕ ವಿಪ್ರ ಬಾಂಧವರಿಗೆ ಲೌಕಿಕ ಶಿಕ್ಷಣದೊಂದಿಗೆ ವೈದಿಕ ವಿದ್ಯೆ ನೀಡಿ ಸಾಂಪ್ರದಾಯಿಕ ವಿದ್ಯಾಂಸರ ನಿರ್ಮಾಣಕ್ಕಾಗಿ ಕಾರ್ಯಪ್ರವೃತ್ತವಾಗಲಿದೆ.

ವಿದ್ಯಾರ್ಥಿಗಳ ಜೊತೆಗೆ ಉದ್ಯೋಗಸ್ಥ ವಿಪ್ರ ಬಾಂಧವರಿಗೂ ಅವಕಾಶ ಕಲ್ಪಿಸಲಾಗಿದೆ. ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ತತ್ಕರಕಮಲಸಂಜಾತರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮುನ್ನಡೆಯುವ ಈ ನೂತನ ವಿದ್ಯಾಪೀಠದಲ್ಲಿ ಅಭ್ಯಾಸ ಮಾಡುವವರಿಗೆ ಉಚಿತ ಊಟ, ವಸತಿ ವ್ಯವಸ್ಥೆ ಇದ್ದು, ಶಿಕ್ಷಣದ ಕೊನೆಗೆ ವಿದ್ಯಾಪೀಠದ ಸರ್ಟಿಫಿಕೇಟ್ ಕೂಡಾ ದೊರೆಯಲಿದೆ.

ಮುಂದೆ ದೇಶ- ವಿದೇಶಗಳಲ್ಲಿ ವೈದಿಕ ವೃತ್ತಿಗೆ ಅವಕಾಶವೂ ಲಭಿಸಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.ಆಸಕ್ತರು 9611039332 ಅಥವಾ  7760122545  ಅಥವಾ 8971797631ನ್ನು ಸಂಪರ್ಕಿಸಲು ಸೂಚಿಸಲಾಗಿದೆ

 
 
 
 
 
 
 
 
 
 
 

Leave a Reply