“ಪ್ರತಿಭಾ ದಿನಾಚರಣೆ ಮತ್ತು ವಿದ್ಯಾರ್ಥಿ ವೇದಿಕೆ ಉದ್ಘಾಟನಾ ಕಾರ‍್ಯಕ್ರಮ ”

ಉಡುಪಿ: ದೇಶದ ಉಜ್ವಲ ಭವಿಷ್ಯವನ್ನು ರೂಪಿಸಬಲ್ಲ ಯುವ ಪೀಳಿಗೆಗೆ ಉತ್ತಮ ಶೈಕ್ಷಣಿಕ, ಸಾಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಕಲಿಸಿ ಒಬ್ಬ ಯೋಗ್ಯ ಮತ್ತು ಜವಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ಹೊಣೆಗಾರಿಕೆ ಒಂದು ಶಿಕ್ಷಣ ಸಂಸ್ಥೆಯದ್ದಾಗಿದೆ ಎಂದು ಮಾನ್ಯ ಶಾಸಕರು ಶ್ರೀ ಯಶ್‌ಪಾಲ್‌ ಸುವರ್ಣ  ಅಭಿಪ್ರಾಯಪಟ್ಟರು.

ಇವರು ನಗರದ ಪುರಭವನ ಅಜ್ಜರಕಾಡು ಇಲ್ಲಿ ನಡೆದ ಡಾ| ಜಿ ಶಂಕರ್‌ ಸರಕಾರಿ ಮಹಿಳಾ ಪ್ರಥಮದರ್ಜೆ  ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿನ ವಿಂಶತಿ ಉತ್ಸವ, ವಿಂಶತಿ ಲಾಂಛನ ಅನಾವರಣ, ಪ್ರತಿಭಾ ದಿನಾಚರಣೆ ಮತ್ತು ವಿದ್ಯಾರ್ಥಿ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು  ತರಗತಿಗಳ ನಾಲ್ಕು ಗೋಡೆಗಳ ಒಳಗೆ ಕಲಿಯುವ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ.

ಶಿಕ್ಷಣ ಸಂಸ್ಥೆಯ ರ‍್ವತೋಮುಖ ಅಭಿವೃದ್ಧಿಯಲ್ಲಿ ವಿದ್ಯರ‍್ಥಿಗಳ ಪಾತ್ರ ಬಹಳ ಮುಖ್ಯ ಎಂದರು. ಕಾಲೇಜು ವರ‍್ಷಿಕೆ ಸಂಚಿಕೆ ʼಕಲಶʼ ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ವಿಜೇತರು, ನಿವೃತ್ತ ಮುಖ್ಯೋಪಾಧ್ಯಾಯರು ಶ್ರೀ ಮುನಿರಾಜ ರೇಂಜಾಳ,  ವಿದ್ಯಾರ್ಥಿ  ಜೀವನದಲ್ಲಿ ಅವಕಾಶಗಳು ಮತ್ತು ವೇದಿಕೆಗಳು ಬಹಳಷ್ಟು ಒದಗಿ ಬರುತ್ತದೆ.

ಇಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಕಾಲೇಜಿನಲ್ಲಿ ತಮ್ಮ ಹೆಜ್ಜೆ ಗುರುತನ್ನು ಉಳಿಸಿಕೊಳ್ಳಬೇಕು. ವಿದ್ಯರ‍್ಥಿ ವೇದಿಕೆಯ ಚಟುವಟಿಕೆಗಳು ಮತ್ತು ಪ್ರತಿಭಾ ಪ್ರದರ್ಶನದಂತಹ ಕರ‍್ಯಕ್ರಮಗಳು  ವಿದ್ಯಾರ್ಥಿಗಳಿಗೆ ನಾಯಕತ್ವ, ಸಂವಹನ ಕಲೆ, ಸಹಕಾರ ಮತ್ತು ಸಹಬಾಳ್ವೆಯಂತಹ ಉತ್ತಮ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತದೆ ಎಂದರು.

ಈ ಸಂದರ್ಭದಲ್ಲಿ  ೨೦೨೩-೨೪ನೇ ಶೈಕ್ಷಣಿಕ ಸಾಲಿನ ತರಗತಿ ಮತ್ತು ಕಾಲೇಜು ಪ್ರತಿನಿಧಿಗಳಿಗೆ ಕಾಲೇಜಿನ  ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ ವಾಣಿ ಆರ್‌ ಬಲ್ಲಾಳ್‌ ಪ್ರಮಾಣ ವಚನವನ್ನು ಬೋಧಿಸಿದರು. ೨೦೨೨ನೇ ಸಾಲಿನಲ್ಲಿ ಯಕ್ಷಗಾನ ತರಬೇತಿಯನ್ನು ಪಡೆದುಕೊಂಡಿರುವ ಕಾಲೇಜು  ವಿದ್ಯಾರ್ಥಿನಿ ಯರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲರು ಪ್ರೊ. ಭಾಸ್ಕರ ಶೆಟ್ಟಿ ಎಸ್‌ ಪ್ರತಿಯೊಬ್ಬ ವಿದ್ಯರ‍್ಥಿಯಲ್ಲಿಯೂ ಒಂದು ವಿಶೇಷ ಪ್ರತಿಭೆ ಇರುತ್ತದೆ. ಇಂತಹ ಪ್ರತಿಭೆಗಳಿಗೆ ಅವಕಾಶವನ್ನು ನೀಡುವಲ್ಲಿ ಸಾಂಸ್ಕೃತಿಕ, ಪ್ರತಿಭಾ ಮತ್ತು ಕ್ರೀಡಾ ವೇದಿಕೆಗಳಿಂದ ಸಾಧ್ಯ. ಪಠ್ಯ ಚಟುವಟಿಕೆಯಿಂದ ಜ್ಞಾನದ ವಿಕಸನವಾದರೆ ಪಠ್ಯೇತರ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು.

ಕಾರ‍್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು  ಲಕ್ಷ್ಮೀಗುರುರಾಜ್‌, ಶ್ರೀ ಸೋಜನ್‌ ಕೆ.ಜಿ ಸಂಚಾಲಕರು ಐಕ್ಯೂಎಸಿ, ಪ್ರೊ. ಶ್ರೀಧರ ಪ್ರಸಾದ್‌ ಕೆ ಡೀನ್‌ ವಿಜ್ಞಾನ ವಿಭಾಗ, ಶ್ರೀಮತಿ ಗೌರಿ ಎಸ್‌ ಭಟ್‌ ಡೀನ್‌ ವಾಣಿಜ್ಯ ವಿಭಾಗ, ಡಾ. ರಾಮಚಂದ್ರ ಪಾಟ್ಕರ್‌ ದೈಹಿಕ ಶಿಕ್ಷಣ ನಿರ್ದೇಶಕರು, ಚೈತ್ರ ಕೆ.ಸಿ ವಿದ್ಯರ‍್ಥಿ ಸಂಘದ ನಾಯಕಿ, ದಿವ್ಯಾ ಸಾಂಸ್ಕೃತಿಕ ಕಾರ್ಯದರ್ಶಿ , ದಿಶಾ ಹೆಗ್ಡೆ ಪಿ.ಜಿ  ವಿದ್ಯಾರ್ಥಿ  ಪ್ರತಿನಿಧಿ ಸುನೀತಾ , ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ
ಡಾ. ಪಿ ಬಿ ಪ್ರಸನ್ನ ಕಾರ‍್ಯಕ್ರಮ ನಿರೂಪಿಸಿದರು.

ರಾಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರು ಶ್ರೀ ಮಂಜುನಾಥ ವಂದಿಸಿದರು.  ಮುಖ್ಯ ಸಾಂಸ್ಕೃತಿ ಪ್ರತಿನಿಧಿ ಮತ್ತು ರ‍್ಷಿತಾ ಸಾಲ್ಯಾನ್‌ ಮುಖ್ಯ ಕ್ರೀಡಾ ಪ್ರತಿನಿಧಿ ಉಪಸ್ಥಿತರಿದ್ದರು. ಪ್ರೊ. ನಿಕೇತನ ಡೀನ್‌ ಕಲಾ ವಿಭಾಗ ಅತಿಥಿಗಳನ್ನು ಸ್ವಾಗತಿಸಿದರು

 
 
 
 
 
 
 
 
 
 
 

Leave a Reply