ಭಕ್ತಿಯಿಂದ ಶ್ರೀರಾಮನನ್ನು ಒಲಿಸಿಕೊಳ್ಳಬೇಕು- ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು

ರಾಮಾಯಣದ ಅಧ್ಯಯನವನ್ನು ಮಾಡಿ ಶ್ರೀರಾಮನ ಜೀವನವನ್ನು ಇಲ್ಲಿ ಕಂಡರೆ ಶ್ರೀರಾಮನು ಆಡಳಿತವನ್ನು ಮಾಡುತ್ತಿದ್ದಾಗ ಪ್ರತಿಯೊಬ್ಬರ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದ. ಕಷ್ಟಸುಖಗಳಿಗೆ ಮನಃಪೂರ್ವಕವಾಗಿ ಸ್ಪಂದಿಸುತ್ತಿದ್ದ. ಉತ್ಕ್ರುಷ್ಟವಾಗಿ ರಾಜ್ಯಭಾರವನ್ನು ಮಾಡಿದ್ದ. ರಾಮಾಯಣವನ್ನು ಅವಲೋಕಿಸಿದಾಗ ಸ್ತ್ರೀಯರ ಕುರಿತು ವಿಶೇಷ ವಿಚಾರಗಳು ಬರುತ್ತವೆ. 
ಸಹಧರ್ಮಚಾರಿಣಿಯಾಗಿ ಸೀತೆ ರಾಮನ ಸೇವೆಯನ್ನು ಮಾಡುತ್ತೇನೆ ಎಂದು ತಾನೇ ಕೇಳಿಕೊಂಡು ರಾಮನೊಂದಿಗೆ ವನವಾಸದಲ್ಲಿ ಇರುವಳು. ಪತಿ ಮತ್ತು ಪತ್ನಿಯರ ಸಂಬ೦ಧದ ಬಗ್ಗೆ ತಿಳಿಸಿದ್ದಾರೆ. ಶ್ರೀರಾಮ ಎಂಬ ಪದಪ್ರಯೋಗವೇ ನಮಗೆ ಸಂತೋಷವನ್ನು೦ಟು ಮಾಡುವುದು. ರಾಮಾಯಣದಲ್ಲಿ ಬಂದಿರುವ ಭಗವಂತನಾದ ಶ್ರೀರಾಮನ ಆದರ್ಶವನ್ನು ಸರಿಯಾಗಿ ಅಧ್ಯಯನ ಮಾಡಿ, ಎಲ್ಲರೂ ಅಳವಡಿಸಿಕೊಳ್ಳಬೇಕು.
 ಹಾಗೆಯೇ ಶ್ರೀರಾಮನನ್ನು ಭಕ್ತಿಯಿಂದ ಆರಾಧಿಸಿ ಅವನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಉಡುಪಿ ಶ್ರೀಅದಮಾರು ಮಠ ಶಿಕ್ಷಣಮಂಡಳಿಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ  ವಿಭಾಗ ಹಾಗೂ ಪ್ರಜ್ಞಾಮಂಥನದ ವತಿಯಿಂದ ನಡೆದ ಶ್ರೀರಾಮಾಯಣದಲ್ಲಿ ಜೀವನಮೌಲ್ಯಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಾದಿಸಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಆದಿಚುಂಚನಗಿರಿಯ ಕಾಲಭೈರವೇಶ್ವರ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ವಿದ್ವಾನ್ ಡಾ. ಮಧುಸೂದನ ಅಡಿಗರು ತಮ್ಮ ಉಪನ್ಯಾಸವನ್ನು ಮಂಡಿಸುತ್ತಾ ಶ್ರೀರಾಮಾಯಣದ ಎಲ್ಲಾ ಪಾತ್ರಗಳೂ, ಕಥಾಭಾಗಗಳೂ, ಘಟನೆಗಳೂ ಒಂದಲ್ಲೊ೦ದು ರೀತಿಯಲ್ಲಿ ಮೌಲ್ಯಯುತವಾಗಿವೆ. ಶ್ರೀರಾಮನಲ್ಲಿ ಕಂಡುಬರುವ ಸಹನೆ, ತ್ಯಾಗ ಹಾಗೂ ಧೃಡತೆ ಇವುಗಳನ್ನು ತಿಳಿದುಕೊಂಡಾಗ ಅದರ ಮೌಲ್ಯವು ತಿಳಿಯುತ್ತದೆ. ಅದೇ ರೀತಿ ಭರತನಲ್ಲಿ ಅಪರಿಗ್ರಹ ಗುಣವನ್ನು ಕಾಣಲು ಸಾಧ್ಯ. 
ಇಂತಹ ರಾಮಾಯಣದ ಆದರ್ಶವ್ಯಕ್ತಿಗಳ ಗುಣಗಳನ್ನು ಕಂಡು ಅವರ ಜೀವನದಲ್ಲಿ ಬಂದಿರುವ ಮೌಲ್ಯಗಳನ್ನು ನಮ್ಮಲ್ಲಿ ಸಾಧ್ಯವಿದ್ದಷ್ಟು ಅಳವಡಿಸಿಕೊಳ್ಳಬೇಕೆಂದು ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ ರಾಘವೇಂದ್ರ ಎ. ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಅದಮಾರು ಮಠ ಶಿಕ್ಷಣ ಮಂಡಳಿಯ ಉಡುಪಿ ಇದರ ಆಡಳಿತಾಧಿಕಾರಿಗಳಾದ ಡಾ. ಎ.ಪಿ ಭಟ್ ಹಾಗೂ ಕಾಲೇಜಿನ ಸಂಸ್ಕೃತ  ವಿಭಾಗದ ಮುಖ್ಯಸ್ಥರಾದ ಡಾ. ರಮೇಶ ಟಿ ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು. ಅನುಷಾ ಸಿ.ಎಚ್ ಸ್ವಾಗತಿಸಿದರು. ಕು.ವೈಷ್ಣವೀ ಹಾಗೂ ಕು. ಪ್ರಥ್ವೀ ನಾಯಕ್ ಪ್ರಾರ್ಥಿಸಿದರು. ವಿದ್ಯಾರ್ಥಿ ಗುರುರಾಜ ಭಟ್ ಇವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕು. ಸ್ನೇಹಾ ನಾಯಕ್ ವಂದಿಸಿದರು.
 
 
 
 
 
 
 
 
 
 
 

Leave a Reply