ಉಡುಪಿಯ  ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು – ದ್ವಿತೀಯ ಪಿಯುಸಿಯಲ್ಲಿ ಅದ್ಬುತ ಸಾಧನೆ 

ವಿಜ್ಞಾನ ವಿಭಾಗದಲ್ಲಿ ಜೆಸ್ವಿಟಾ ಡಯಾಸ್ ರಾಜ್ಯಮಟ್ಟದಲ್ಲಿ ದ್ವಿತೀಯ ರ‍್ಯಾಂಕ್
ಒಟ್ಟು ವಿಜ್ಞಾನ ವಿಭಾಗದಲ್ಲಿ ಮೊದಲ ಎರಡು, ವಾಣಿಜ್ಯ ವಿಭಾಗದಲ್ಲಿ ಹದಿನೈದು ರ‍್ಯಾಂಕ್

ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಹಲವಾರು ರ‍್ಯಾಂಕ್ ಗಳೊಂದಿಗೆ ಅತ್ಯುತ್ಕöÈಷ್ಟ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಜೆಸ್ವಿಟಾ ಡಯಾಸ್ (೫೯೫) ದ್ವಿತೀಯ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಪ್ರಜ್ಞ (೫೯೦) ಏಳನೇ ರ‍್ಯಾಂಕ್ ಪಡೆದಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಶ್ರದ್ಧ ಎನ್ ಹೆಗ್ಡೆ (೫೯೩) ಐದನೇ ರ‍್ಯಾಂಕ್, ಕೆ ವರ್ಷಾ ಉಪಾಧ್ಯ (೫೯೨) ಆರನೇ ರ‍್ಯಾಂಕ್, ಸಾಜನ್ ಎಸ್ ಶೆಟ್ಟಿ (೫೯೧), ಸಪ್ನ ಶೆಣೈ (೫೯೧) ಏಳನೇ ರ‍್ಯಾಂಕ್, ಯು.ಅವನಿ ಆಚಾರ್ಯ (೫೯೦), ತುಷಾಂಕ್ ಸಿ ಪೂಜಾರಿ (೫೯೦), ಭುವನ್ ಎಸ್ ಪುತ್ರನ್ (೫೯೦) ಎಂಟನೇ ರ‍್ಯಾಂಕ್, ಜೆಸ್ಸಿಕಾ ಕೊಲಾಕೋ (೫೮೯), ಅಕ್ಷತಾ ಎ ಬಂಗೇರಾ (೫೮೯) ಒಂಬತ್ತನೇ ರ‍್ಯಾಂಕ್, ಸ್ನೇಹಾ (೫೮೮), ಸಿಯಾ ಕೋಟ್ಯಾನ್ (೫೮೮), ಬಿ.ನಾಗೇಂದ್ರ ಶೆಣೈ (೫೮೮), ತೋನ್ಸೆ ಶಶಾಂಕ್ ಕಿಣಿ (೫೮೮), ಪ್ರೀತಿ ಶೆಟ್ಟಿ (೫೮೮) ಹಾಗೂ ಗಗನ್ ಜೆ ಸುವರ್ಣ (೫೮೮) ಹತ್ತನೇ ರ‍್ಯಾಂಕ್ ಪಡೆದಿರುತ್ತಾರೆ.

ಒಟ್ಟು ವಿಜ್ಞಾನ ವಿಭಾಗದಲ್ಲಿ  ೩೪೮  ವಿದ್ಯಾರ್ಥಿಗಳಲ್ಲಿ ೨೨೯ ಮಂದಿ,  ವಾಣಿಜ್ಯ ವಿಭಾಗದಲ್ಲಿ ೨೭೬ ವಿದ್ಯಾರ್ಥಿಗಳಲ್ಲಿ ೧೭೫ ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಗೌರವಾನ್ವಿತ ಕಾರ್ಯದರ್ಶಿ ಡಾ.ಶಶಿಕಿರಣ್ ಉಮಾಕಾಂತ್, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು  ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply