ಕಾಲೇಜುಗಳ ಪುನಾರಂಭಕ್ಕೆ ಎಲ್ಲಾ ಸಿದ್ಧತೆ ನಡೆದಿದೆ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್

ಮೈಸೂರು: ಕಾಲೇಜುಗಳನ್ನು ಪುನಾರಾರಂಭ ಮಾಡಲು ಎಲ್ಲ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಕಾಲೇಜು ಪ್ರಾರಂಭಿಸುವ ಬಗ್ಗೆ ಮೈಸೂರು ವಿವಿಯಿಂದ ಎಸ್‌ಓಪಿ ಪ್ರಕಟ ಮಾಡಲಾಗಿದೆ. ಈ ಸಂಬಂಧ ಮೂರು ಸುತ್ತಿನ ಸಭೆ ನಡೆಸಿದ್ದೇವೆ. ಪ್ರಾಂಶುಪಾಲರಿಗೆ ಮಾರ್ಗಸೂಚಿ ಬಗ್ಗೆ ವಿವರಿಸಿದ್ದೇವೆ. ಮೈಸೂರು ವಿವಿಯಲ್ಲಿ 1.30 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಅಂತಿಮ ತರಗತಿ ವಿದ್ಯಾರ್ಥಿಗಳು 35 ಸಾವಿರಕ್ಕು ಹೆಚ್ಚು ಇದ್ದಾರೆ ಎಂದಿದ್ದಾರೆ.

ಇನ್ನು ಕಾಲೇಜಿಗೆ ಬರುವ ಎಲ್ಲರಿಗೂ ಕೊರೋನಾ ಪರೀಕ್ಷೆ ಕಡ್ಡಾಯ. ಪೋಷಕರಿಂದ ಅನುಮತಿ ಪತ್ರ ಅಗತ್ಯವಾಗಿ ತರಬೇಕು. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡು ವಿಭಾಗದ ಆಯ್ಕೆ ವಿದ್ಯಾರ್ಥಿಗಳಿಗೆ ಬಿಟ್ಟಿದ್ದು. ಕಾಲೇಜಿನಲ್ಲಿ ತರಗತಿಗಳು ಮಾತ್ರ ಇರಲಿವೆ. ಕ್ಯಾಂಟಿನ್ ಅಥವಾ ಲೈಬ್ರರಿ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.

 
 
 
 
 
 
 
 
 
 
 

Leave a Reply