ಉಡುಪಿಯ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಎಂಜಿಎಂ ಕಾಲೇಜಿನ ಪಾತ್ರ ದೊಡ್ಡದಿದೆ~ ಪುತ್ತಿಗೆ ಶ್ರೀ

ಉಡುಪಿ: ಜೀವನದಲ್ಲಿ ಭಗವದ್ಗೀತೆಯ ಸ್ಫೂರ್ತಿಯ ಅಧ್ಯಾಯಗಳನ್ನು ಅಳವಡಿಸಿಕೊಂಡಲ್ಲಿ ಯಶಸ್ಸು ಸಾಧಿಸಬಹುದು ಎಂದು ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು. ಉಡುಪಿಯ ಎಂಜಿಎಂ ಕಾಲೇಜಿನ ನವೀಕೃತ ಮುದ್ದಣ ಮಂಟಪವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಭಗವದ್ಗೀತೆ ಜೀವನದ ಗೈಡ್. ಅದು ನಮಗೆ ಜೀವನವನ್ನು ಹೇಗೆ ಸಾಧಿಸಬೇಕು ಎಂಬುವುದನ್ನು ಹೇಳಿಕೊಡುತ್ತದೆ.

ವಿದ್ಯಾರ್ಥಿಗಳು ಅತಿ ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಮೊಬೈಲ್ ನಿಂದಾಗಿ ನಮ್ಮ ಆಚಾರ ವಿಚಾರ ದೂರವಾಗುತ್ತಿದೆ.‌ ಹೀಗಾಗಿ ಮೊಬೈಲ್ ಬಳಕೆ ಕಡಿಮೆ ಮಾಡಿ ಓದಿನ ಕಡೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು. ಉಡುಪಿಯ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಎಂಜಿಎಂ ಕಾಲೇಜಿನ ಪಾತ್ರ ದೊಡ್ಡದಿದೆ ಎಂದರು.

ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ ಸತೀಶ್ ಯು. ಪೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್. ಎಸ್ ನಾಯ್ಕ್ ಉಪಸ್ಥಿತ ರಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಸ್ವಾಗತಿಸಿದರು. ಪ.ಪೂ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ವಂದಿಸಿದರು. ಕಾಲೇಜಿನ ಉಪನ್ಯಾಸಕಿ ದೀಪಾಲಿ ಕಾಮತ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply