ಉಡುಪಿ ಸಂತೆಕಟ್ಟೆಯಲ್ಲಿ ನೂತನ  IICT ಕಂಪ್ಯೂಟರ್ ತರಬೇತಿ ಕೇಂದ್ರದ ಶುಭಾರಂಭ

ಸೇಕ್ರಡ್ ಹಾರ್ಟ್ ಸಮೂಹ ಶಿಕ್ಷಣ ಸಂಸ್ಥೆಯಿಂದ ನಡೆಸಲ್ಪಡುವ IICT ಕಂಪ್ಯೂಟರ್ ತರಬೇತಿ ಕೇಂದ್ರದ ಹೊಸ ಶಾಖೆಯು ಸಂತೆಕಟ್ಟೆಯ ಜಿ.ಎಸ್.ಜೆ.ಗ್ಯಾಲಕ್ಸಿ ಕಾಂಪ್ಲೆಕ್ಸ್ನ ಮೊದಲನೇ ಮಹಡಿಯಲ್ಲಿ 30 ಜುಲೈ 2021ರಂದು ಉದ್ಘಾಟನೆಗೊಂಡಿತು. 
ಶಿಕ್ಷಣ ಸಂಸ್ಥೆಯ ಎಂ.ಡಿ ಹಾಗೂ ಸಿ.ಇ.ಒ ಆದ ಶ್ರೀಯುತ ಕೆನಡಿ ಡಿ’ಸೋಜಾರವರು ಸಂಸ್ಥೆಯನ್ನು ಉದ್ಘಾಟಿಸಿ ದರು. ಆಗಮಿಸಿದ ಸರ್ವರಿಗೂ ಸಂಸ್ಥೆಯ ಮಾಲೀಕ ಶ್ರೀಯುತ ಜೋಸೆಫ್ ಅನಿಲ್ ಕೊರೆಯರವರು ಸ್ವಾಗತ ವನ್ನು ಬಯಸಿದರು. ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ಫಾ. ಸ್ಟೀವನ್ ಫೆರ್ನಾಂಡಿಸ್‌ರವರು ಆಶೀರ್ವಚನವನ್ನು ನೆರವೇರಿಸಿದರು. 
ಉಡುಪಿ ಧರ್ಮಕ್ಷೇತ್ರದ ದಿವ್ಯಜ್ಯೋತಿ ಕೇಂದ್ರದ ನಿರ್ದೇಶಕ ಫಾ. ಸ್ಟೀವನ್ ಡಿಸೋಜಾರವರು ಹಾಜರಿದ್ದು ಸಂಸ್ಥೆಯ ಬಗ್ಗೆ ಹಿತ ನುಡಿದರು. ದೀಪವನ್ನು ಬೆಳಗಿಸುವುದರ ಮೂಲಕ ಕಾರ‍್ಯಕ್ರಮವನ್ನು ಪ್ರಾರಂಭಿಸಲಾಯಿತು. ಮುಖ್ಯ ಅತಿಥಿ  ವಲೇರಿಯನ್ ಸಲ್ಡಾನ್ಹರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯಾನ್ಸಿ ಕೊರಯವರು ಕಾರ‍್ಯಕ್ರಮ ನಿರೂಪಿಸಿದರು. 
ಶುಭಾರಂಭದ ಪ್ರಯುಕ್ತವಾಗಿ ಎಲ್ಲಾ ವೃತ್ತಿ ಆಧಾರಿತ ಕೋರ್ಸುಗಳನ್ನು ೨೫% ಶುಲ್ಕ ರಿಯಾಯಿತಿಯಲ್ಲಿ ನೀಡುವುದರ ಜೊತೆಗೆ ಉಚಿತವಾಗಿ ಇಂಟರ್‌ವ್ಯೂವ್ ಹಾಗೂ ಸಾಫ್ಟ್ಸ್ಕಿಲ್ಸ್ ತರಬೇತಿಗಳನ್ನು ನೀಡಲಾಗುವುದು. IICT ಕಂಪ್ಯೂಟರ್ ಕೇಂದ್ರವು ಭಾರತ ಸರ್ಕಾರದೊಂದಿಗೆ ನೋಂದಾಣಿಸಲ್ಪಟ್ಟಿದ್ದು ISO 9001:2015 ಅಂತ ರಾಷ್ಟ್ರೀಯ  ಗುಣಮಟ್ಟದ ಪ್ರಮಾಣಿಕೃತವನ್ನು ಹೊಂದಿದೆ.  
ಕೇಂದ್ರದಲ್ಲಿ ಪ್ರಮುಖವಾಗಿ ಆಫೀಸ್ ಅಪ್ಲಿಕೇಶನ್ಸ್ ಟೈಪಿಂಗ್, ನುಡಿ, ಇಂಡಿಯನ್ ಹಾಗು ಇಂಟರ್ ನ್ಯಾಶನಲ್ ಅಕೌಂಟಿಂಗ್ / ಟ್ಯಾಲಿ-ಜಿಎಸ್‌ಟಿ/ ವೆಬ್ & ಗ್ರಾಫಿಕ್ ಡಿಸೈನಿಂಗ್/ ಇ ಆಫೀಸ್ ಮ್ಯಾನೇಜ್‌ಮೆಂಟ್ /ಕಂಪ್ಯೂ ಟರ್ ಟೀಚರ್ ಟ್ರೈನಿಂಗ್ / ಸಾಫ್ಟ್ವೇರ್ ಇಂಜಿನಿಯರಿಂಗ್/  ಅನಿಮೇಶನ್ ಹಾಗೂ ಅಲ್ಪಾವಧಿಯ  VB, C, C++, Java, Python,Oracle, SAP ತರಬೇತಿಗಳನ್ನು ನೀಡಲಾಗುತ್ತದೆ.
IICT ಕೇಂದ್ರಗಳಲ್ಲಿ ಕಂಪ್ಯೂಟರ್ ತರಬೇತಿಯ ಜೊತೆಗೆ ವಿದ್ಯಾರ್ಥಿಗಳ  ಸಮಗ್ರ ಬೆಳವಣಿಗೆಯ ಉದ್ದೇಶದಿಂದ ವ್ಯಕ್ತಿತ್ವ ವಿಕಸನ, ಸಂವಹನ, ಉದ್ಯೋಗ ಮಾಹಿತಿ ಸಮಯ ಒತ್ತಡ ನಿರ್ವಹಣೆ ಮತ್ತು ಕೇರಿಯರ್ ಗೈಡೆನ್ಸ್ ಸೆಮಿನಾರ್‌ಗಳನ್ನು ತಜ್ಞ ವ್ಯಕ್ತಿಗಳಿಂದ ನಡೆಸಲಾಗುವುದು. ಈ ಎಲ್ಲಾ ಕೌಶಲ್ಯಗಳನ್ನು ಪಡೆದ ವಿದ್ಯಾರ್ಥಿಗಳನ್ನು ಉದ್ಯೋಗ ಕ್ಕಾಗಿ ಸಂಪೂರ್ಣವಾಗಿ ಸಜ್ಜುಗೊಳಿಸಿ ಉದ್ಯೋಗ ಮಾಹಿತಿ ಕೇಂದ್ರಗಳ ಮೂಲಕ ಅರ್ಹ ವಿದ್ಯಾರ್ಥಿ ಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುವುದು.
ಪ್ರಥಮ ಬ್ಯಾಚ್‌ನ ದಾಖಲಾತಿಗಳು ನಡೆಯುತ್ತಿದ್ದು ಸಂಸ್ಥೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯ ಬಹುದು ಅಥವಾ www.iicteducation.com ತಾಣವನ್ನು ಸಂಪರ್ಕಿಸಬಹುದು. 
 
 
 
 
 
 
 
 
 
 
 

Leave a Reply