ಕಾರ್ಕಳ : ಎಂ. ಪಿ ಎಂ ಕಾಲೇಜಿನಲ್ಲಿ ಉಚಿತ ಆರ್ಥಿಕ ಶಿಕ್ಷಣ ಮಾಹಿತಿ ಕಾರ್ಯಾಗಾರ

ಕಾರ್ಕಳ : ವಿದ್ಯಾರ್ಥಿಗಳು ಸಿಕ್ಕಂತಹ ಅವಕಾಶಗಳನ್ನು ಪರಿಪೂರ್ಣವಾಗಿ ಗ್ರಹಿಸಿಕೊಂಡು ಸ್ಪರ್ಧಾತ್ಮಕ ಕಾರ್ಪೊರೇಟ್ ಜಗತ್ತಿಗೆ ತಯಾರಾಗಬೇಕೆಂದು ಸಂಪನ್ಮೂಲ ವ್ಯಕ್ತಿ ವಿನೋದ್ ತಂತ್ರಿ ಹೇಳಿದರು.

ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು , ಕಾರ್ಕಳ ಇಲ್ಲಿ ಏನ್.ಎಸ್. ಐ. ಎಂ ಹಾಗೂ ಕೋಟಕ್ ಸೆಕ್ಯುರಿಟೀಸ್ ಇವರ ಪ್ರಯೋಜಕತ್ವದೊಂದಿಗೆ ನಾಲೆಜ್ ಬೆಲ್ ಇದರ ಸಹಭಾಗಿತ್ವದಲ್ಲಿ “ಕೋನ ಕೋನ ಮೇ ಶಿಕ್ಷ ” ಎಂಬ 10 ಗಂಟೆಗಳ ಉಚಿತ ಆರ್ಥಿಕ ಶಿಕ್ಷಣದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀವರ್ಮ ಅಜ್ರಿ ಎಂ  ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಹಣಕಾಸಿನ ಹೂಡಿಕೆ ಹಾಗೂ ಮಹತ್ವವನ್ನು ತಿಳಿಸಿದರು. ಐ. ಕ್ಯೂ.ಎ.ಸಿ ಸಂಚಾಲಕಿ ಹಾಗೂ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನದ ಮುಖ್ಯಸ್ಥೆ ಆಗಿರುವಂತಹ ಪ್ರೊ. ಜ್ಯೋತಿ ಎಲ್ ಜನ್ನೆ ಕಾರ್ಯಕ್ರಮವನ್ನು ಉದ್ಧೇಶಿಸಿ ಹಿತ ನುಡಿಗಳನ್ನಾಡಿದರು. 

ಕಾಲೇಜಿನ ವಿದ್ಯಾರ್ಥಿನಿ ಸೌಭಾಗ್ಯ ನಾಯಕ್ ಪ್ರಾರ್ಥನೆ ಮಾಡಿದರು. ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಚಾಲಕ ಪ್ರೊ. ವಿದ್ಯಾಧರ ಹೆಗ್ಡೆ ಎಸ್ ಸ್ವಾಗತಿಸಿ,ಮಂಜುನಾಥ ಬಿ ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ನೀಡಿದರು. ಕಾರ್ಯಕ್ರಮದ ಸಂಯೋಜಕಿ ಹಾಗೂ ಉದ್ಯೋಗ ಮತ್ತು ಮಾಹಿತಿ ಕೋಶದ ಸಂಚಾಲಕಿ ಪ್ರೊ.ಮೈತ್ರಿ ಬಿ ವಂದಿಸಿ, ವಿದ್ಯಾರ್ಥಿ ರ್ಷಿತ್ ರಾವ್ ನಿರೂಪಿಸಿದರು .

 
 
 
 
 
 
 
 
 
 
 

Leave a Reply