ಪರಿಸರ ಸ್ವಚ್ಚತೆ, ತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು  ಕೊಯ್ಲು ಕುರಿತ ‌ಮಾಹಿತಿ ಕಾರ್ಯಾಗಾರ

ಕರ್ನಾಟಕ ಸರ್ಕಾರ ಪೌರಾಡಳಿತ ನಿರ್ದೇಶನಾಲಯ ಮತ್ತು ಜಿಲ್ಲಾಡಳಿತ ಉಡುಪಿ, ನಗರಸಭೆ ಉಡುಪಿ ಇದರ ಆಶ್ರಯದಲ್ಲಿ ಡಾ.ಜಿ ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಪರಿಸರ ಸ್ವಚ್ಚತೆ, ತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು  ಕೊಯ್ಲು ಕುರಿತ ‌ಮಾಹಿತಿ ಕಾರ್ಯಾಗಾರ ಕಾಲೇಜಿನ ಎ ವಿ ಸಭಾಂಗಣದಲ್ಲಿ ನಡೆಯಿತು.

ಪೌರಾಯುಕ್ತ ಶ್ರೀ ರಾಯಪ್ಪ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ‌, ಮಾತನಾಡಿ  ತ್ಯಾಜ್ಯ ನಿರ್ವಹಣೆಯ ವಿಧಾನಗಳ  ಕುರಿತು ವಿವರಿಸಿದರು. ನಗರಸಭಾ ಪರಿಸರ ಅಭಿಯಂತರರಾದ ಶ್ರೀಮತಿ ಸ್ನೇಹ ಪರಿಸರ ಸ್ವಚ್ಛತೆ ಹಾಗೂ ವಿದ್ಯಾರ್ಥಿನಿಯರು ‌ಋತುಚಕ್ರದ ಸಂದರ್ಭದಲ್ಲಿ ಅನುಸರಿದಬೇಕಾದ ಸ್ವಚ್ಚತಾ ವಿಷಯಗಳ ಬಗ್ಗೆ ಮಾತನಾಡಿದರು. ಜಲಸಂರಕ್ಷಣೆ ಹಾಗೂ ಮಳೆ ನೀರುಕೊಯ್ಲಿನ ಖ್ಯಾತ ರಾಜ್ಯಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರರಾದ ಶ್ರೀ. ಜೋಸೆಫ್ ಜಿ ಎಂ ರೆಬೆಲ್ಲೋ ನಮ್ಮ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಕೊರತೆಯನ್ನು ನೀಗಲು ಎಲ್ಲರೂ ಕೈಗೊಳ್ಳಲೇಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಕಾಲೇಜಿನ‌ ಪ್ರಾಂಶುಪಾಲರಾದ ಪ್ರೊ ಭಾಸ್ಕರ ಶೆಟ್ಟಿ ‌ಎಸ್ ಅಧ್ಯಕ್ಷತೆ ವಹಿಸಿದ್ದರು. ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಪ್ರೊ. ನಿಕೇತನ‌ ಪ್ರಸ್ತಾವನೆಗೈದು ಸ್ವಾಗತಿಸಿದರು. ಶ್ರೀಮತಿ‌ ವಿದ್ಯಾ ಡಿ‌ ವಂದಿಸಿದರು. ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಾಜೇಂದ್ರ ಕೆ.,‌ ಕಾರ್ಯಕ್ರಮ ನಿರೂಪಿಸಿದರು.

ಸ್ವಯಂ ಸೇವಕರ ಎನ್ಎಸ್ಎಸ್ ಗೀತೆಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಶ್ರೀ. ಸೋಜನ್ ಕೆ.ಜಿ, ಕಾಲೇಜಿನ ಪ್ರಾಧ್ಯಾಪಕರು ಹಾಗೂ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಯುತ ಮನೋಹನ್, ಶ್ರೀಮತಿ ಶಶಿರೇಖಾ ಹಾಗೂ ಕಾಲೇಜಿನ ಎನ್ಎಸ್ ಎಸ್ ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು. ಕಾರ್ಯಗಾರದ ವಿವಿಧ ಅಧಿವೇಶನಗಳ ಅತಿಥಿಗಳನ್ನು ಸ್ವಯಂ ಸೇವಕರಾದ ಕು.ಅಂಕಿತಾ, ಕು. ಮಿತ್ರಾ, ಕು. ಸಿಂಚನಾ ಸ್ವಾಗತಿಸಿದರು. ಕು. ಪ್ರೀತಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply