ವಸಂತ ವೇದ ಶಿಬಿರದ ಸಮಾರೋಪ ಸಮಾರಂಭ

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ವತಿಯಿಂದ, ಕೂಟ ಮಹಾಜಗತ್ತು (ರಿ)ಸಾಲಿಗ್ರಾಮ ಅಂಗ ಸಂಸ್ಥೆಯ ಸಹಕಾರದೊಂದಿಗೆ ಹಮ್ಮಿಕೊಂಡಿರುವ 23ನೇ ವರ್ಷದ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭ ಶ್ರೀ ಗುರುನರಸಿಂಹ ದೇವಸ್ಥಾನದ ವಠಾರದಲ್ಲಿ ದಿನಾಂಕ 7/5/23 ರ ಸಂಜೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಡಾ। ಕೆ. ಎಸ್ . ಕಾರಂತರ ಅಧ್ಯಕ್ಷತೆಯಲ್ಲಿ ಜರಗಿತು.

ಸಮಾರಂಭದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀ ಲಕ್ಷ್ಮಿನಾರಾಯಣ ತುಂಗ , ಕೂಟಮಹಾಜಗತ್ತು ಕೇಂದ್ರ ಸಂಸ್ಥೆಯ ಮಾಜಿ ಉಪಾಧ್ಯಕ್ಷ ,ಶ್ರೀ ಕೆ.ತಾರಾನಾಥ ಹೊಳ್ಳ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀ ಶ್ರೀಪತಿ ಅಧಿಕಾರಿ ಹಾಗೂ ಶಿಬಿರದ ಮುಖ್ಯ ಗುರುಗಳಾದ ಶ್ರೀ ವಾದಿರಾಜ ಐತಾಳರು ಉಪಸ್ಥಿತರಿದ್ದರು.

ಶಿಬಿರಾರ್ಥಿಗಳಲ್ಲಿ ಕೆಲವರು ಮಾತಾಡಿ ಶಿಬಿರದ ವ್ಯವಸ್ಥೆಯಬಗ್ಗೆ ಶ್ಲಾಘಿಸಿದರು. ಕೋಶಾಧಿಕಾರಿ ಪರಶುರಾಮ ಭಟ್ಟರು, ದೇವಳದ ಗಣೇಶ ಭಟ್ಟ, ವ್ಯವಸ್ಥಾಪಕ ಶ್ರೀ ನಾಗರಾಜ ಹಂದೆ. ಕೂ ಮ ಜ ಸಾಲಿಗ್ರಾಮ ಅಂಗಸಂಸ್ಥೆಯ ಚಿದಾನಂದ ತುಂಗ, ಕೇಂದ್ರ ಸಂಸ್ಥೆಯ ಮಾಜಿ ಕಾರ್ಯದರ್ಶಿ ಶ್ರೀ ಮಂಜುನಾಥ ಉಪಾಧ್ಯ ಇವರೆಲ್ಲ ಶಿಬಿರಕ್ಕೆ ಸಹಕರಿಸಿದರು.

350 ಕ್ಕೂ ಹೆಚ್ಚು ವಿಪ್ರ ವಟುಗಳು ವಸಂತ ವೇದ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಶಿಬಿರದ ಗುರುಗಳನ್ನು ಸಭೆಯಲ್ಲಿ ಗೌರವಿಸ ಲಾಯಿತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಔಪಚಾರಿಕ ಶಿಕ್ಷಣವು ತನ್ನದೇ ಆದ ಮಿತಿಯನ್ನು ಹೊಂದಿದ್ದು, ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಕೌಶಲಾಭಿವೃದ್ದಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ವಸಂತ ವೇದ ಶಿಬಿರವು ಚಿತ್ತ ಶುದ್ಧಿ, ಭಾವ ಶುದ್ಧಿ ಮತ್ತು ಭಾಷಾ ಶುದ್ದಿಯನ್ನು ಸಿದ್ಧಿಸುವ ಭೂಮಿಕೆಯಾಗಿದೆ ಎಂದು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶ್ರೀ ದೇವಳದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗರು ಮಾತನಾಡುತ್ತ, “ಅಧ್ಯಾಪಕನಾಗಿರುವ ನನ್ನ ಪ್ರಾಮಾಣಿಕ ಅನಿಸಿಕೆಯೇನಂದರೆ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಶಿಬಿರಗಳು ಆವಶ್ಯಕ” ಎಂದರು. ಕೊನೆಯಲ್ಲಿ ಶ್ರೀ ಶ್ರೀಪತಿ ಅಧಿಕಾರಿ ವಂದಿಸಿದರು. ಶ್ರೀ ಅಕಿಲೇಶ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply