“ಬಲೇ ತುಳು ಲಿಪಿಟ್ ಪುದರ್ ಬರಲೆ ಇನಾಮು ಗೆಂದ್ ಲೆ”-400 ಸ್ಪರ್ಧಾಳುಗಳು

ಉಡುಪಿ: ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಜೈ ತುಳುನಾಡ್(ರಿ) ಸಂಘಟನೆ ಉಡುಪಿ ಘಟಕ ಹಾಗೂ ಕೊಡವೂರು ಹಳೆವಿದ್ಯಾರ್ಥಿ ಸಂಘ ಮತ್ತು ಯುವಕ ಸಂಘದ ಸಂಯುಕ್ತ  ಆಶ್ರಯದಲ್ಲಿ ಜ. 30 ರಂದು ಬೆಳಿಗ್ಗೆ 11ರಿಂದ 6:30ರ ತನಕ ಶ್ರೀ ದೇಗುಲದ ವಠಾರದಲ್ಲಿ “ಬಲೇ ತುಳು ಲಿಪಿಟ್ ಪುದರ್ ಬರಲೆ ಇನಾಮು ಗೆಂದ್ ಲೆ “ತುಳು ಲಿಪಿಯಲ್ಲಿ ಹೆಸರು ಬರೆಯುವ ಸ್ಪರ್ಧೆ ನಡೆಯಿತು.

ಈ ಸ್ಪರ್ಧೆಯಲ್ಲಿ 400 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಮೂರು ಅದೃಷ್ಟಶಾಲಿಯರಿಗೆ ಕೊಡವೂರಿನಲ್ಲಿ ನಡೆದ “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಕ್ರಮದಲ್ಲಿ ತುಳು ಲಿಪಿ ಕಲಿತು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸುವ ಕಾರ್ಯಕ್ರಮ ನಡೆಯಲಿದ್ದು ವಿಜೇತರಿಗೆ ಬಹುಮಾನವನ್ನು ನೀಡುವುದಾಗಿ ಜೈ ತುಳುನಾಡು ಸಂಘಟನೆಯ ತುಳು ಲಿಪಿ ಕಮಿಟಿಯ ಸದಸ್ಯ ಶರತ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದರು.

 ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮುಖ್ಯಸ್ಥರು ಪ್ರಕಾಶ್ ಜಿ ಕೊಡವೂರು, ರಾಮ ಸೇರಿಗಾರ್ ಅಯ್ಯಪ್ಪ ಭಕ್ತವೃಂದ, ಮಧುಕರ ಪೂಜಾರಿ, ಸತೀಶ್ ಕೊಡವೂರು, ಪ್ರಭಾತ್ ಕೊಡವೂರು, ತುಳು ಲಿಪಿ ಶಿಕ್ಷಕರಾದ ರಾಜೇಶ್ ತುಳುವೆ, ಅಕ್ಷತಾ ಕುಲಾಲ್, ಸ್ವಾತಿ ಸುವರ್ಣ ಹಾಗೂ ಸುಪ್ರಿಯ ಅಖಿಲೇಶ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply