ಭಾಷೆಗಳ ದಂಗಲ್ ನಡುವೆ ಗನ್ ತೋರಿಸಿದ ರಾಜ್ ಸೌಂಡ್ಸ್ ಆಂಡ್ ಲೈಟ್ಸ್~  ಸುರೇಶ್ ರಾವ್ ಕೊಕ್ಕಡ

ಆ ಭಾಷೆಯೊ? ಈ ಭಾಷೆಯೊ? ಎಲ್ಲ ಭಾಷೆಗಳಿಗೂ ತನ್ನದೇ ಗತ್ತು ಇದೆ… ಎಂದು ತೋರಿಸಿದ “ರಾಜ್ ಸೌಂಡ್ಸ್ ಆಂಡ್ ಲೈಟ್ಸ್”.  ರಾಷ್ಟ್ರೀಯ ಭಾಷೆಯ ಗುಲ್ಲಿನ ನಡುವೆ ದಕ್ಷಿಣ ಭಾರತ ಮಾತ್ರವಲ್ಲ ಪಂಜಾಬಿ, ಭೋಜ್ ಪುರಿ ಸಿನಿಮಾಗಳು ಕೂಡ  ಬಾಲಿವುಡ್ ಸಿನಿಮಾರಂಗಕ್ಕೆ ಸಡ್ಡು ಹೊಡೆದಿವೆ.
ಭರಪೂರ ಮನೋರಂಜನೆ ನೀಡುತ್ತಿದೆ ಈಗ ತುಳುನಾಡಿನಾದ್ಯಂತ! ಅಲ್ಲದೆ ವಿಶ್ವದಾದ್ಯಂತ ಸೌಂಡ್ ಮಾಡುತ್ತಿದೆ ತುಳು ಸಿನಿಮಾ “ರಾಜ್ ಸೌಂಡ್ಸ್”. ನಾನೊಬ್ಬ ಕಲಾಭಿಮಾನಿಯಾಗಿ ಹೇಳುವುದು ನೀವೆಲ್ಲರು ತಪ್ಪದೆ ಫ್ರೀ ಮಾಡಿಕೊಂಡು ಈ ಸಿನಿಮಾ ನೋಡಲೇಬೇಕು. ಮನೋರಂಜನೆಗೆ ಮನೋರಂಜನೆ ಇದೆ.
ಹಾಗೆ ಒಂದು ಸಿನಿಮಾದಲ್ಲಿ ಇರಬೇಕಾಗಿರುವುದು ಎಲ್ಲವೂ ಇದೆ. ಅದೇ ರೀತಿ ಇಂತಹ ಪ್ರಯತ್ನಕ್ಕೆ ಮತ್ತು ನಮ್ಮ ನಾಡಿನ ಭಾಷಾ ಸಂಸ್ಕೃತಿಯನ್ನು ಪೋಷಿಸುವ ಕಲಾವಿದರನ್ನು ಪ್ರೋತ್ಸಾಹಿಸದಿದ್ದರೆ ನಮ್ಮ ಮಾತೃಭಾಷೆಗೆ ದೊರಕಬೇಕಾದ ಸರಕಾರಿ ಮಾನ್ಯತೆ, ಗೌರವ ವಿಳಂಬ ಆಗಬಹುದು.
ಈ ಪಿಕ್ಚರ್ ಅತ್ಯುತ್ತಮ ಪ್ರಯತ್ನ. ಈ ಚಿತ್ರ ರೆಡಿಯಾಗುವ ಮೊದಲೇ ನನಗೆ ಗೊತ್ತಾಗಿದ್ದರೆ ಕನಿಷ್ಟ ನಾಲ್ಕೈದು ಭಾಷೆಗಳಲ್ಲಿ ರಿಲೀಸ್ ಮಾಡಬಹುದಾಗಿತ್ತು. ಟೀಂ ರಾಜ್ ಸೌಂಡ್ಸ್  ತುಳು ಭಾಷೆಯ ಪ್ರೀತಿಯಿಂದ ಮಾತ್ರ್ ಭಾಷೆಯಲ್ಲಿ ಮಾತ್ರ ರಿಲೀಸ್ ಮಾಡಿದ್ದಾರೆ. ಆದುದರಿಂದ  ಇವರನ್ನು ಪ್ರೊತ್ಸಾಹಿಸುವ ಹೊಣೆಗಾರಿಕೆ ತುಳು ನಾಡಿನ ಹಾಗೂ ಕಡಲಿನಾಚೆಯ ಪ್ರತಿಯೊಬ್ಬರಿಗು ಇದೆ.
ಪ್ರತಿಯೊಬ್ಬರು ನೊಡಲೇ ಬೇಕಾದ ಸಿನಿಮಾ # ರಾಜ್ ಸೌಂಡ್ಸ್ ಆಂಡ್ ಲೈಟ್ಸ್. ಕಾರ್ಕಳ, ಪುತ್ತೂರು, ಮೂಡಬಿದಿರೆ,ಸುಳ್ಯ ಇಂತಹ ಸ್ಥಳಗಳಲ್ಲು ಚಿತ್ರ ಪ್ರದರ್ಶನ ನಡೆಯುತ್ತಿದೆ. ಸಿನಿಮಾ ನೋಡಿದವರು ಕಮೆಂಟ್ ಮಾಡಿ. ನಮ್ಮ ಕಲಾವಿದರನ್ನು ಪ್ರೊತ್ಸಾಹಿಸಿ. ತುಳು ಭಾಷೆ ಗೆಲ್ಗೆ.
 
 ~ ಸುರೇಶ್ ರಾವ್ ಕೊಕ್ಕಡ, ಟೈಂ & ಟೈಡ್

Leave a Reply