ಉಡುಪಿಯ ಪೊಲೀಸ್ ಮಾಧವ ಅನು ಕೋಟ್ಯಾನ್ ತನ್ನ ಹಾಡುಗಾರಿಕೆಯಿಂದ ಸಂಗೀತ ಪ್ರಿಯರ ಮನಸ್ಸು ಉಡೀಸ್

ಸಾಧಿಸಬೇಕು ಎನ್ನುವ ಮನಸ್ಸು ಇದ್ದರೆ ಏನು ಬೇಕಾದರು  ಸಾಧಿಸಲು  ಸಾಧ್ಯ.  ಸಾಧನೆ ಹಾದಿಯಲ್ಲಿ ನಡೆಯುತ್ತಿರುವವರು  ಉಡುಪಿಯ ಪ್ರತಿಭೆ ಮಾದವ ಅನು ಕೋಟ್ಯಾನ್. ಕೆಲಸದಲ್ಲಿ ಎಷ್ಟು ನಿಷ್ಠಾವಂತ ಅಧಿಕಾರಿ ಆದರೂ ಅಷ್ಟೇ ಆಸಕ್ತಿ ಸಂಗೀತದಲ್ಲಿ.
ನರಸಿಂಹ ಸಾಲಿಯಾನ್ ಭಾಗಿ ಕೋಟ್ಯಾನ್ ದಂಪತಿಗಳ ಮಗ ಮಾಧವ್ ಅನು  ಕೋಟ್ಯಾನ್ ವೃತ್ತಿಯಲ್ಲಿ  ಪೊಲೀಸ್ ಅಧಿಕಾರಿ ಆಗಿರುವ ಇವರು ಬಿಡುವು ಸಿಕ್ಕಾಗ ಸಮಯವನ್ನು ಸರಿ ಯಾಗಿ ಉಪಯೋಗಿಸಿಕೊಂಡು ಒಳ್ಳೆಯ ಹಾಡುಗಾರ ಎಂದೆಣಿಸಿದ್ದಾರೆ  

ಈ ಪ್ರಯತ್ನದಿಂದ  ತಾನೇ ಸಾಹಿತ್ಯ ಬರೆದ  ನಿನ್ನ  ಪ್ರೀತಿದ  ಮದಿಪು  ಕೊರುವನ ಎಂಬ ಹಾಡುನ್ನು ತಾನೇ ಹಾಡಿ ತನ್ನಲ್ಲು ಅರಳುವ ಪ್ರತಿಭೆ ಇದೆ ಎಂದು ತೋರಿಸಿದ್ದಾರೆ. ಹಾಡು ವುದೆಂದರೆ ಇವರಿಗೆ ಪಂಚ ಪ್ರಾಣ.

ಹಾಡಿನೊಂದಿಗೆ ಸಾಹಿತ್ಯದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಕ್ರಿಕೆಟ್, ವಾಲಿಬಾಲ್ ಇವರ ಹವ್ಯಾಸ.      

ಪೊಲೀಸ್ ಇಲಾಖೆ ಉಡುಪಿ (ಎ ಎಸ್ ಸಿ ತಂಡ ವಿರೋಧಿ ವಿಧ್ವಂಸಕ ಪರಿಶೀಲನಾ ತಂಡ , ಶಸ್ತ್ರಾಸ್ತ್ರ ತಂತ್ರಗಳು ಮತ್ತು   ನಕ್ಷೆ ಓದುವಿಕೆ, ಪಿ ಎಸ್ ಒ (ವೈಯಕ್ತಿಕ ಭದ್ರತಾ ಅಧಿಕಾರಿ ) ಕರ್ತವ್ಯ  ಕೆಲವು ವಿ ಐ ಪಿ , ವಿ ವಿ ಐ ಪಿ ಯೊಂದಿಗೆ ಪ್ರಹ್ಲಾದ್ ದಾಮೋದರ್ (ಮೋದಿಜಿ ಸಹೋದರ) ರನ್ನು ಒಳಗೊಡಂತೆ ತರಬೇತಿ ಪಡೆದು ಕಾರ್ಯ ನಿರ್ವಹಿಸಿರುತ್ತಾರೆ.

 
ಅವರ ಈ ಸಾಧನೆಗೆ ಅವರ ಮನೆಯರು ಮತ್ತು  ಧರ್ಮಪತ್ನಿ  ಮಲ್ಲಿಕಾ (ಲೋಕಾಯುಕ್ತ ಪೊಲೀಸ್ ವಿಂಗ್ ಉಡುಪಿ) ಇವರ ಸಂಪೂರ್ಣ ಪ್ರೋತ್ಸಾಹ ಮತ್ತು ಸಹಕಾರವಿದೆ.   ಹಾಗೆಯೇ ಇವರ ವೃತ್ತಿ  ಜೀವನಕ್ಕೆ ಅಣ್ಣ ಯಾದವ್  ಕೋಟ್ಯಾನ್ ಇವರ ಬೆನ್ನ ಹಿಂದೆ ಇದ್ದಾರೆ.  
ಈ ಬಾರಿ ಇನ್ನೊಂದು ಸಾಹಸಕ್ಕೆ ಮಾಧವ್ ಕೈ ಹಾಕಿದ್ದಾರೆ. ತಾನು ದುಡಿಯುವ, ತನ್ನ ತುತ್ತು ಅನ್ನಕ್ಕೆ ಆಧಾರವಾಗಿರುವ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಒಂದು ಹಾಡನ್ನು ಹಾಡಿದ್ದಾರೆ.
ಭಾರಿ ವೈರಲ್ ಆಗುತ್ತಿರುವ ಈ ಹಾಡು ಮಾಧವ್ ಅನು ಕೊಟ್ಯಾನ್ ಅವರ ಸಂಗೀತ ಲೋಕಕ್ಕೆ ಒಂದು ಹೆಗ್ಗುರತಾಗಿಲಿ ಎಂದು ಟೀಮ್ karavalixpress ಶುಭ ಹಾರೈ ಸುತ್ತದೆ . 
     
 
 
 
 
 
 
 
 
 
 
 

Leave a Reply