ನೃತ್ಯನಿಕೇತನ ಕೊಡವೂರು ನೇತೃತ್ವದಲ್ಲಿ “ಕೃಷ್ಣಪ್ರೇಮ” ಪ್ರಶಸ್ತಿ ಪ್ರದಾನ

ನೃತ್ಯನಿಕೇತನ ಕೊಡವೂರು ನೇತೃತ್ವದಲ್ಲಿ ಪ್ರಾಯೋಜಿಸಲ್ಪಡುತ್ತಿರುವ ದಿವಂಗತ ಕೆ. ಕೃಷ್ಣಮೂರ್ತಿ ರಾಯರ ಹೆಸರಿನಲ್ಲಿ ನೀಡುತ್ತಿ ರುವ “ಕೃಷ್ಣಪ್ರೇಮ” ಪ್ರಶಸ್ತಿ 2020 ನ್ನು ಕಲೆಯ ಬೇರೆ ಬೇರೆ ಪ್ರಕಾರಗಳಲ್ಲಿ ತೊಡಗಿಸಿಕೊಂಡ ನಾಲ್ವರು ಸಾಧಕರಿಗೆ ನೀಡುವು ದೆಂದು ತೀರ್ಮಾನಿಸಲಾಗಿದೆ.    ನೃತ್ಯ ಕ್ಷೇತ್ರದಲ್ಲಿ ಕಳೆದ ಐವತ್ತು ವರುಷಗಳಿಂದ ತನ್ನನ್ನು ತೊಡಗಿಸಿಕೊಂಡು ನೃತ್ಯಕಲಾವಿದೆಯಾಗಿ,​ ​ಕಲಾವಿಮರ್ಷಕಿಯಾಗಿ ಬಹಳಷ್ಟು ಸಾಧನೆ ಮಾಡಿರುವ ವಿದುಷಿ ಪ್ರತಿಭಾ ಎಲ್ ಸಾಮಗ.ಸಂಗೀತವನ್ನೇ ಉಸಿರಾಗಿಸಿಕೊಂಡಿರುವ ಈ ಎಂಭತ್ತನೆಯ ವಯಸ್ಸಿನಲ್ಲೂ ಮಕ್ಕಳಿಗೆ ಪಿಟೀಲು ಶಿಕ್ಷಣವನ್ನು ನೀಡುತ್ತಿರುವ ಮತ್ತು ಪ್ರಸಿದ್ಧ ಸಂಗೀತ ಕಲಾವಿದರುಗಳಿಗೆ ಪಿಟೀಲು ಸಾಥ್ ನೀಡಿರುವ ,ಇಂದೂ ನೀಡುತ್ತಿರುವ ಉಡುಪಿಯ ಹಿರಿಯ ಪಿಟೀಲು ವಾದಕಿ ವಿದುಷಿ ವಸಂತಿರಾಮಭಟ್. ಕೊಡವೂರಿನ ಶ್ರೀ ಶಂಕರನಾರಾಯಣ ನಾಟಕಮಂಡಳಿಯ ಮುಖಾಂತರ ಅನೇಕ ಪೌರಾಣಿಕ ನಾಟಕಗಳಲ್ಲಿ ಪಾತ್ರನಿರ್ವಹಿಸಿ ಉಡುಪಿಯ ರಂಗಭೂಮಿಯ ಕಲಾವಿದರಾಗಿ, ಸುಮನ​ಸಾ ಕೊಡವೂರು ತಂಡದ ಪ್ರಧಾನ ನಟನಾಗಿ ,ಇದರೊಂದಿಗೆ ಅನೇಕ ಧಾರಾವಾಹಿ, ಮತ್ತು ಚಲನಚಿತ್ರಗಳಲ್ಲೂ ನಟನಾಗಿ ಪ್ರಸಿದ್ಧಿಯನ್ನು ಪಡೆದಿರುವ ಹಿರಿಯ ರಂಗನಟ ಎಂ.ಎಸ್.ಭಟ್.ಕಳೆದ ಐವತ್ತು ವರುಷಗಳಲ್ಲಿ ಉಡುಪಿಯಲ್ಲಿ ವರ್ಣಾಲಂಕಾರ ಮತ್ತು ವಸ್ತ್ರಾಲಂಕಾರ ವ್ಯವಹಾರವನ್ನು ಭಾಷಾ ಆರ್ಟ್ಸ್ ಸಂಸ್ಥೆಯ ಮುಖಾಂತರ ನಡೆಸಿಕೊಂಡು ಬರುತ್ತಿರುವ, ತಂದೆ ಭಾಷಾ ಸಾಹೇಬರಿಂದ ಆರಂಭವಾದ  ಸಂಸ್ಥೆಯನ್ನು ಯಶಸ್ಸಿನ ಉತ್ತುಂಗ ಕ್ಕೇರಿಸಿದ ವರ್ಣಾಲಂಕಾರ ಮತ್ತು ವಸ್ತ್ರಾಲಂಕಾರ ಕಲಾವಿದರಾದ ಶ್ರೀ ಸುಹೇಲ್.

ಈ ನಾಲ್ವರಿಗೆ ಪ್ರಶಸ್ತಿ  ನೀಡುವುದೆಂದು ಆಯ್ಕೆ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.​ ​ನವೆಂಬರ್ ಹತ್ತೊಂಭತ್ತನೇ ಗುರುವಾರದಂದು ಕೊಡವೂರಿನ ವಿಪ್ರಶ್ರೀ ಸಭಾಭವನದಲ್ಲಿ ಸಂಜೆ 6-30 ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ​. ​ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ|ಎಂ.ಎಲ್ ಸಾಮಗರು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದನಾ ನುಡಿಯನ್ನಾಡಲಿದ್ದಾರೆ.​ ​ಹಿರಿಯ ಉದ್ಯಮಿ ವಿಶ್ವನಾಥ ಶೆಣೈ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ  ಅತಿಥಿಗಳಾಗಿ ಭಾಗವಹಿಸಲಿದ್ದಾರೆ.​ 
 
ಪ್ರಶಸ್ತಿ ಪ್ರದಾನದ ನಂತರ ನೃತ್ಯನಿಕೇತನ ಕೊಡವೂರು ಕಲಾವಿದರಿಂದ ” ನೃತ್ಯ ಅಂತ್ಯಾಕ್ಷರಿ” ಕಾರ್ಯಕ್ರಮ ನಡೆಯಲಿದೆ ಎಂದು ವಿದ್ವಾನ್ ಸುಧೀರ್ ರಾವ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.​​
 
 
 
 
 
 
 
 
 
 
 

Leave a Reply