ನಾಳೆ ಡಿಸೆಂಬರ್ 24ರಂದು ಗುಬಿ೯ ಚಲನಚಿತ್ರ ಬಿಡುಗಡೆ

  •  ಕನ್ನಡ ಚಲನಚಿತ್ರ ‘ಗುಬಿ೯’ ಇದೇ ಬರುವ ಡಿಸೆಂಬರ್ 24ರಿಂದ ವಿಶ್ವಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಚಲನಚಿತ್ರದ ನಿರ್ದೇಶಕ ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕರಾದ ಕೃಷ್ಣಪ್ಪ ಉಪ್ಪೂರು.
  • ಈ ಚಿತ್ರ ಕಲಾತ್ಮಕವಾಗಿ ಮೂಡಿಬಂದಿದ್ದು ,ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗದ ಹೆಣ್ಣಿನ ಬದುಕಿನ ಸುತ್ತ ಹೆಣೆದ ಕಥೆಯಾಗಿದೆ. ಉಡುಪಿ ಹಾಗೂ ಚಿಕ್ಕಮಂಗಳೂರಿನ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರವು ಚಿತ್ರೀಕರಣಗೊಂಡಿದೆ”
  • ಗುಬಿ೯’ ಕನ್ನಡ ಚಲನಚಿತ್ರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕರಾವಳಿ ಪ್ರದೇಶಗಳ ಕಾಡಿನಂಚಿನಲ್ಲಿ ವಾಸಿಸುತ್ತಿರುವ ಗುಡ್ಡಗಾಡು ಜನಾಂಗದವರ ಬದುಕು ಮತ್ತು ಬವಣೆಗಳ ಸುತ್ತ ಹೆಣೆಯಲಾಗಿದೆ, ಶತಮಾನಗಳಿಂದ ಈ ಬಡಪಾಯಿ ಜನಾಂಗದವರನ್ನು ಮೇಲ್ವರ್ಗದವರು ಹೇಗೆ ಶೋಷಣೆ ಮಾಡುತ್ತ ಅವರ ಬದುಕಿನೊಂದಿಗೆ ಚೆಲ್ಲಾಟ ವಾಡುತ್ತಾರೆ ಎಂಬುದನ್ನು ಗುಬಿ೯ ಅನ್ನುವ ಕಿಶೋರಿಯ ಸುತ್ತ ಚಿತ್ರೀಕರಿಸಲಾಗಿದೆ.
  • ಬದುಕಿನ ಬೆಲೆಯನ್ನೇ ಅರ್ಥೈಸಲಾಗದ ಮುಗ್ಧ ಹುಡುಗಿ ಮೇಲ್ವರ್ಗದವರ ಶೋಷಣೆಯ ನಡುವೆ ಯಾವ ಸ್ಥಿತಿ ಮುಟ್ಟುತ್ತಾಳೆ ಎಂಬ ಕುತೂಹಲ ದೊಂದಿಗೆ ಮುಂದುವರೆದು ಕೊನೆಗೆ ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸುತ್ತದೆ.
  • ಈ ಚಿತ್ರವನ್ನು ಸಾಮಾಜಿಕ ಕಳಕಳಿಯಿಂದ ಮಾರ್ಮಿಕವಾಗಿ ಚಿತ್ರೀಕರಿಸಿ ಬಡವರ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ ಎಂದು ಚಲನಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು ತಿಳಿಸಿದ್ದಾರೆ.
  • ನಿರ್ಮಾಪಕರಾಗಿ ಮೀರಾ ಕೆ. ಉಪ್ಪೂರು, ಕಲೆ ಜೀವನ್ ರಾಂ ಸುಳ್ಯ, ಛಾಯಾಗ್ರಹಣ ವೀನಸ್ ಮೂರ್ತಿ, ಸಂಕಲನ ಕೆ. ಎಂ ಪ್ರಕಾಶ್, ನೃತ್ಯದಲ್ಲಿ ಹರಿಣಿ ಮದನ್, ಸಹನಿರ್ದೇಶನ ರವಿರಾಜ್ ಹೆಚ್ ಪಿ ನೀಡಿದ್ದು , ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಗೀತ ರಚನೆಗೆ ವಿವೇಕ್ ಚಕ್ರವರ್ತಿ ಸಂಗೀತ ನೀಡಿದ್ದಾರೆ.
  • ಖ್ಯಾತ ರಂಗಭೂಮಿ ಕಲಾವಿದರಾದ ಕೀರ್ತಿರಾಜ್, ಮಂಡ್ಯ ರಮೇಶ್, ಜೀವನ್ ರಾಂ ಸುಳ್ಯ, ಅಶ್ವಿತಾ, ಸುನಿಲ್ ,ರವಿರಾಜ್ ಹೆಚ್ ಪಿ, ರೇವತಿ ನಾಡಿಗೇರ್, ರಂಜಿತಾ ಶೆಟ್ ಅನಿರುದ್ಧ್ ಪಣಿಯಾಡಿ ಮತ್ತಿತರರು ಮುಖ್ಯ ಭೂಮಿಕೆಯಲ್ಲಿದ್ದಾರೆ.
 
 
 
 
 
 
 
 
 
 
 

Leave a Reply