ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಕ್ತದಾನ ಶಿಬಿರ

ಮಾರ್ಚ್ ತಾರೀಕು 8ರಂದು ಉಡುಪಿಯ ರೆಡ್ ಕ್ರಾಸ್ ಭವನದಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಕರ್ನಾಟಕ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಸರ್ವಿಸಸ್ ಅಸೋಸಿಯೇಷನ್, ಕೇರಳ ಕಲ್ಚರಲ್ ಮತ್ತು ಸೋಶಿಯಲ್ ಸೆಂಟರ್ ಉಡುಪಿ, ಎಲೆಕ್ಟ್ರಾನಿಕ್ಸ್ ಟೆಕ್ನಿಷಿಯನ್ ವೆಲ್ಫೇರ್ ಅಸೋಸಿಯೇಷನ್ ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರುಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಮಾಜಿ ಜಿಲ್ಲಾ ಗವರ್ನರ್ ಲಯನ್ ಬಸ್ರೂರು ರಾಜೀವ್ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ರಕ್ತದಾನದ ಅವಶ್ಯಕತೆ ಹಾಗೂ ಸಮಾಜಕ್ಕೆ ಮಾಡುವ ಉಪಕಾರ ಎತ್ತಿ ತೋರಿಸುವಂತಿದೆ ಎಂದು ಎಲ್ಲಾ ರಕ್ತದಾನಿಗಳಿಗೆ ಕರೆ ನೀಡಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿಯ ಪ್ರತಿಷ್ಠಿತ ಸೆಷನ್ಸ್ ಕೋರ್ಟಿನ ವಕೀಲರಾದ ಶ್ರೀಮತಿ ಬಿಂದು ತಂಕಪ್ಪನ್ ಇವರನ್ನು ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೀಮತಿ ಬಿಂದು ತಂಕಪ್ಪನ್ ಇಂದು ಮಹಿಳಾ ದಿನಾಚರಣೆಯ ದಿನ ಮಹಿಳೆಯರನ್ನು ಗೌರವಿಸುವುದು, ಸತ್ಕರಿಸುವುದು ನಮ್ಮೆಲ್ಲರ ಕರ್ತವ್ಯ ಅದನ್ನು ಲಯನ್ಸ್ ಕ್ಲಬ್ ಮಾಡಿರುತ್ತಾರೆ ಎಂದು ತಿಳಿಸಿದರು. ಕರ್ನಾಟಕ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಸರ್ವಿಸಸ್ ಅಧ್ಯಕ್ಷರಾದ ಲಯನ್ ಬಿನೇಶ್ ವಿ.ಸಿ. ಒಂದು ವರ್ಷದ ಮೊದಲು ಅಪಘಾತದಲ್ಲಿ ತೀರಿ ಹೋದ ಅವರ ಅಸೋಸಿಯೇಷನ್ ಸಂಸ್ಥಾಪಕ ಕಮಿಟಿಯ ಸದಸ್ಯರಾದ ದಿವಂಗತ ಕುಮಾರಸ್ವಾಮಿ ಅವರ ಸವಿನೆನಪು ಮಾಡಲು ಇಂದು ರಕ್ತದಾನ ಶಿಬಿರದ ಮುಖಾಂತರ ಅವರಿಗೆ ಶ್ರದ್ಧಾಂಜಲಿ ತಲುಪಿಸುವ ಕಾರ್ಯವನ್ನು ಮಾಡುವರೆ ಪ್ರಯತ್ನಿಸಿದ್ದೇವೆ ಎಂದು ಸಭೆಯಲ್ಲಿ ತಿಳಿಸಿದರು. ವೇದಿಕೆಯ ಮೇಲೆ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರದ ಅಧ್ಯಕ್ಷರಾದ ಶ್ರೀ ಜಯಕರ್ ಶೆಟ್ಟಿ, ಕೇರಳ ಕಲ್ಚರಲ್ ಮತ್ತು ಸೋಶಿಯಲ್ ಸೆಂಟರ್ ಅಧ್ಯಕ್ಷರಾದ ಲಯನ್ ಸುಗುಣ ಕುಮಾರ್, ಎಲೆಕ್ಟ್ರಾನಿಕ್ಸ್ ಟೆಕ್ನಿಷಿಯನ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಮನೋಹರ್ ಶಾಸ್ತ್ರಿ, ಲಯನ್ಸ್ ಪ್ರಾಂತ್ಯ ಅಧ್ಯಕ್ಷರಾದ ಲಯನ್ ಹರಿಪ್ರಸಾದ್ ರೈ, ಹಾಗೂ ಶ್ರೀಮತಿ ಬಿಂದು ತಂಕಪ್ಪನ್ ಇದ್ದರು. ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಅಧ್ಯಕ್ಷರಾದ ಲಯನ್ ಉಮೇಶ್ ನಾಯಕ್ ಸ್ವಾಗತಿಸಿ, ಕೊನೆಯಲ್ಲಿ ಶೈನಿ ಸತ್ಯಭಾಮ ಧನ್ಯವಾದ ಸಮರ್ಪಣೆ ಮಾಡಿದರು.
ಗಾಯತ್ರಿ ಗಣೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply