Janardhan Kodavoor/ Team KaravaliXpress
26 C
Udupi
Sunday, March 7, 2021

​ತೆಂಕನಿಡಿಯೂರು ​ಕಾಳಿಕಾಂಬಾ ಭಜನಾ ಸಂಘದ ನೂತನ ಭೋಜನ​ ​ಗ್ರಹ ​ಹಾಗು ಅಡುಗೆ ಶಾಲೆ ​ಲೋಕಾರ್ಪಣೆ.  

ಒಗ್ಗಟ್ಟಿನಲ್ಲಿ ಕೆಲಸ ಮಾಡಿದಾಗ ಯಶಸ್ಸು ಖಂಡಿತ. ಸಂಘಟನೆಯೊಂದಿಗೆ ನಾವು ಸೇರಿಕೊಂಡು ಕೆಲಸ ಕಾರ್ಯ ಮಾಡಿದರೆ, ಸಂಘಟನೆ​ಯೊಂದಿಗೆ ನಾವು ಕೂಡಾ ಬೆಳೆಯುತ್ತೇವೆ ಎಂದು ನಿವೃತ್ತ ಶಿಕ್ಷಕ ಚಂದ್ರಶೇಖರ ಆಚಾರ್ಯ ಅಭಿಪ್ರಾಯ ಪಟ್ಟರು.

ಅವರು ಭಾನುವಾರದಂದು ಕಾಳಿಕಾಂಬಾ ಭಜನಾ ಸಂಘದ ನೂತನ ಭೋಜನ ಗ್ರಹವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅತ್ಯಂತ ಅವಶ್ಯವಾದ ಈ ಸಭಾಗ್ರಹ ದಾನಿಗಳ ನೆರವಿನಿಂದ ಭವ್ಯವಾಗಿ ಮೂಡಿ ಬಂದಿದೆ ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ವಾಸುದೇವ ಆಚಾರ್ಯ ಹಾಗು  ವರದ ದಂಪತಿಗಳನ್ನು ಅಭಿನಂದಿ ಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ದನ್ ಕೊಡವೂರು, ಕೆ ಎಂ ಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ ,ಶ್ರೀಮತಿ ರತ್ನಾವತಿ ಜೆ ಬೈಕಾಡಿ, ಅಧ್ಯಕ್ಷ ಟಿ. ಕೃಷ್ಣ ಆಚಾರ್ಯ, ಅಪ್ಪಿ ಶಿವಯ್ಯ ಆಚಾರ್ಯ, ವಾರಿಜ ಎಂ ಆಚಾರ್ಯ ಉಪಸ್ಥಿತರಿದ್ದರು.    ಉಮೇಶ್ ಜೆ ಕಾರ್ಯಕ್ರಮವನ್ನು ನಿರೂಪಿಸಿದರು. ಮಾಧವ ಕೆ ಆಚಾರ್ಯ ಸ್ವಾಗತಿಸಿದರು. ನಿವೃತ್ತ ತಹಶೀಲ್ದಾರ ಮುರಳಿಧರ್ ಆಚಾರ್ಯ ವಂದನಾರ್ಪಣೆಗೈದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕೊಡವೂರು ಗರಡಿಮಜಲಿ ನಲ್ಲಿ ಐಸಿರಿ ಸೂಪರ್ ಸ್ಟೋರ್ ಶುಭಾರಂಭ

ಕೊಡವೂರು ಗರಡಿ ಮಜಲಿನ ಆಸುಪಾಸಿನ ಜನತೆಗೆ ಶುಭ ಸುದ್ಧಿ. ದಿನ ಬಳಕೆಯ ಗ್ರಹೋಪಯೋಗಿ  ವಸ್ತುಗಳ ಪರಿಶುದ್ಧ ಹಾಗು ಪರಿಪೂರ್ಣ ಭಂಡಾರ " ಐ ಸಿರಿ ಸೂಪರ್ ಸ್ಟೋರ್" ಇದೀಗ ನಿಮ್ಮೂರಿನಲ್ಲಿ.. ಸ್ನೇಹಮಯಿ ಸೇವೆಯೊಂದಿಗೆ, ಆಕರ್ಷಕ ದರದೊಂದಿಗೆ,...

ಡಾ| ಮೋಹನ್ ಆಳ್ವ ಮಡಿಲಿಗೆ  ‘ವಿಶ್ವ ಪ್ರಭಾ’ ಪುರಸ್ಕಾರ

ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಂದ ಉದ್ಘಾಟನೆಗೊಂಡ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ ಸಾಹಿತ್ಯ, ಸಂಗೀತ, ಚಿತ್ರಕಲೆ, ಸಾಕ್ಷಾಚಿತ್ರ , ನಾಟಕ, ನೃತ್ಯ, ಲಲಿತ ಕಲೆಗಳು ಹೀಗೆ ಯುವಪೀಳಿಗೆಯ ಹೃದಯದಲ್ಲಿ ಸೌಂದರ್ಯ ಪ್ರಜ್ಞೆ...

ಬನ್ನಂಜೆ ಶ್ರೀ ಶನಿಕ್ಷೇತ್ರದಲ್ಲಿ ವಾರ್ಷಿಕ ಶನೈಶ್ವರ ಉತ್ಸವ ಸಂಪನ್ನ

ಉಡುಪಿ ​: ​ ಬನ್ನಂಜೆ ಗರಡಿ ರಸ್ತೆ  ಶ್ರೀ ಶನಿಕ್ಷೇತ್ರ ಬನ್ನಂಜೆ ಮಠದ ಕರ್ನಾಟಕದ ಅತೀ ದೊಡ್ಡ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ಮೂರ್ತಿ ಸನ್ನಿಧಾನದಲ್ಲಿ  ವಾರ್ಷಿಕ ಶನೈಶ್ವರ ಉತ್ಸವವು...

  ನವೀನ್ ಕೆ.ಶೆಟ್ಟಿಬೆಟ್ಟು​ರವರ “ಅನಾವರಣ​”​ ​ಕೃತಿ ಲೋಕಾರ್ಪಣೆ 

ಉಡುಪಿ :- ಇತ್ತೀಚೆಗಿನ ದಿನಗಳಲ್ಲಿ ಬರೆಯುವ ಮನೋಭಾವನೆ ಕಡಿಮೆಯಾಗುತ್ತಿದೆ ಇದು ಸರಿಯಲ್ಲ ಬರೆಯುವಿಕೆ ಮತ್ತು ಓದುವಿಕೆಯು ಮನುಷ್ಯನನ್ನು ಒತ್ತಡಗಳಿಂದ ದೂರ ಮಾಡಬಲ್ಲದು ಎಂದು ಬಡಗಬೆಟ್ಟು ಕ್ರೆ.ಕೋ. ಸೋಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ...

ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನದ  ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಷಷ್ಟ್ಯಬ್ಧ ಸಂಭ್ರಮದ ಆಚರಣೆ

ಉಡುಪಿ: ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನಮ್, ಶ್ರೀಗಳ ಷಷ್ಟ್ಯಬ್ಧ ಸಂಭ್ರಮದ ಆಚರಣೆಯ ಪ್ರಯುಕ್ತ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಉಡುಪಿಯಲ್ಲಿ ಕೂಡಾ ಷಷ್ಟ್ಯಬ್ಧ ಸಮಿತಿ ರಚಿಸಲಾಗಿದೆ.  ಉಡುಪಿ...
error: Content is protected !!