ವಿಪ್ರ ಸಂಪದ ಪೂನರೂರು ವತಿಯಿಂದ ಆಹಾರ ಕಿಟ್ ಮತ್ತು ವೈದ್ಯಕೀಯ ಕಿಟ್ ವಿತರಣೆ

ಮಂಗಳೂರು: ಕೊರೋನಾ ವಿಪತ್ತಿನ ಸಮಯ ತೊಂದರೆಗೆ ಒಳಗಾಗಿರುವ ಬ್ರಾಹ್ಮಣ ಸಮುದಾಯದ ಕುಟುಂಬಗಳಿಗೆ ಆಹಾರಧಾನ್ಯ ಮತ್ತು ವೈದ್ಯಕೀಯ ಕಿಟ್ ಗಳನ್ನು ವಿತರಿಸುವ ಮೂಲಕ ‘ವಿಪ್ರ ಸಂಪದ ಪುನರೂರು’ ನೆರವಿನ ಹಸ್ತ ಚಾಚಿದೆ.

ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಬದುಕುವ, ಅಂದು ದುಡಿದು ಅಂದೇ ತಿನ್ನುವ ಅನಿವಾರ್ಯತೆಯಲ್ಲಿರುವ ಹಲವಾರು ಕುಟುಂಬಗಳಿಗೆ ಸ್ವಲ್ಪ ದಿನವಾದರೂ ಹಸಿವನ್ನು ನೀಗಿಸಲು ಈ ಲಾಕ್ ಡೌನ್ ಸಂದರ್ಭದಲ್ಲಿ ವಿಪ್ರ ಸಂಪದ ಪುನರೂರು ಆಯೋಜಿಸಿರುವ ಈ ಕಾರ್ಯವು ಶ್ಲಾಘನೀಯ ಎಂದು ಕಾ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.ವಿಪ್ರ ಸಂಪದ ಪುನರೂರು ವತಿಯಿಂದ ಸಂಸ್ಥೆಯ ವ್ಯಾಪ್ತಿಗೆ ಬರುವ 220 ಬ್ರಾಹ್ಮಣ ಕುಟುಂಬಗಳಿಗೆ 1.5 ಲಕ್ಷ ಮೌಲ್ಯದ ಆಹಾರ ಕಿಟ್ ಮತ್ತು ವೈದ್ಯಕೀಯ ಕಿಟ್ ವಿತರಾಣಾ ಕಾರ್ಯಕ್ರಮಕ್ಕೆ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಚಾಲನೆ ನೀಡಿ ಮಾತನಾಡಿದರು.

ವಿಪ್ರ ಸಂಪದದ ಅಧ್ಯಕ್ಷ ಜನಕರಾಜ್ ರಾವ್,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್, ಕೋಶಾಧಿಕಾರಿ ಅವಿನಾಶ್ ರಾವ್, ಪ್ರಮುಖ ಪಠೇಲ್ ವಾಸುದೇವ ರಾವ್,ಹರಿದಾಸ್ ಭಟ್ ತೋಕೂರು,ಸುರೇಶ ರಾವ್ ನೀರಳಿಕೆ, ಸುಧಾಕರ ರಾವ್,ಶಿವಪ್ರಸಾದ್ ಭಟ್,ಕಾಶೀ ವಿಶ್ವನಾಥ ರಾವ್,ರಾಘವೇಂದ್ರ ರಾವ್,ವಿಶ್ವನಾಥ ರಾವ್,ದೇವಪ್ರಸಾದ್ ಪುನರೂರು, ಗೋಪೀನಾಥ ರಾವ್,ಜಯಲಕ್ಷ್ಮಿ ರಾವ್,ಮುರಳೀಧರ,ಶಶಾಂಕ್ ಮುಚಿಂತಯ, ಚೇತನ್, ಅರವಿಂದ, ಸೂರಜ್,ಶ್ರೀಶ, ಲಕ್ಷ್ಮೀಶ ಆಚಾರ್,ವೆಂಕಟೇಶ, ಶ್ರೀನಾಥ, ಅಭಿಷೇಕ್ ಹಾಗೂ ವಿಪ್ರ ಸಂಪದ ಪುನರೂರಿನ ಸರ್ವ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply