ಬನ್ನಂಜೆ ಹಾಗೂ ಶಿರಿಬೀಡು ವಾರ್ಡ್ ಗಳ ಕೋವಿಡ್ ಹೆಲ್ಪ್ ಡೆಸ್ಕ್ ರಚನೆ

ಉಡುಪಿ: ನಗರದ ಬನ್ನಂಜೆ ಹಾಗೂ ಶಿರಿಬೀಡು ವಾರ್ಡ್ ಗಳ ಕೋವಿಡ್ ಹೆಲ್ಪ್ ಡೆಸ್ಕ್ ರಚಿಸಲಾಯಿತು.ಉಡುಪಿಯ ಸರಸ್ಪತಿ ಶಾಲೆಯಲ್ಲಿ ಇಂದು ಮೂಡನಿಡಂಬೂರು ವ್ಯಾಪ್ತಿಯ ಶಿರಬೀಡು ನಗರ ಸಭಾ ಸದಸ್ಯ ಟಿ ಜಿ ಹೆಗಡೆ ,ಬನ್ನಂಜೆ ವಾರ್ಡ್ ಸದಸ್ಯೆ ಸವಿತಾ ಹರೀಶ್ ರಾಮ್ ನೇತೃತ್ವದಲ್ಲಿ ವಿವಿಧ ಸಮಿತಿ ರಚನೆ ಮಾಡಲಾಯಿತು.

ಉಡುಪಿ ನಗರ ಠಾಣೆಯ ಎ.ಎಸ್.ಐ. ಶಶಿಧರ್ ಮಾತನಾಡಿ ಕೋವಿಡ್ ರೋಗ ಮುಕ್ತ ವಾರ್ಡ್ ಮಾಡಲು ಸರ್ವರ ಸಹಕಾರ ಮುಖ್ಯ.ಇಲಾಖೆ ವತಿಯಿಂದ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.

ಶಿರಿಬೀಡು ನಗರ ಸಭಾ ಸದಸ್ಯ ಟಿ ಜಿ ಹೆಗಡೆ ಮಾತನಾಡಿ ಆಶಾ ಕಾರ್ಯಕರ್ತರ ಸಮಸ್ಯೆ , ಕೋವಿಡ್ ಪಾಸಿಟಿವ್ ಇರುವ ಮನೆ/ಫ್ಲಾಟ್ ಗಳನ್ನೂ ಸೀಲ್ ಡೌನ್ ಬಗ್ಗೆ ತೀರ್ಮಾನಿಸಲಾಯಿತು. ವೇದಿಕೆಯಲ್ಲಿ ಸುರೇಶ ಶೇರಿಗಾರ,ಮಹೇಶ್ ಪೂಜಾರಿ,ಉದಯ ಮಠದಬೆಟ್ಟು ,ಹರೀಶ್ ರಾಮ್, ವಿವಿಧ ಇಲಾಖೆಯ ಸಿಬ್ಬಂದಿ, ವಾರ್ಡ್ ಸಮಿತಿ ಸದಸ್ಯರು ಉಪಸ್ಥರಿದ್ದರು.

 
 
 
 
 
 
 
 
 
 
 

Leave a Reply