ತುಳುಭಾಷೆಯ ಅಮೂಲಾಗ್ರ ಬೆಳವಣಿಗೆಗೆ ತುಳು ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಬೇಕು- ಬಿ.ಪುಂಡಲಿಕ ಮರಾಠೆ

ಉಡುಪಿ: ತುಳು ಭಾಷೆಯ ಅಮೂಲಾಗ್ರ ಬೆಳವಣಿಗೆಗೆ ತುಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವ ಅನಿವಾರ್ಯತೆಯಿದೆ. ಈ ದಿಸೆಯಲ್ಲಿ ತುಳು ಸಾಹಿತ್ಯ ಗ್ರಂಥಗಳ ಪ್ರಕಟನೆ ಹೆಚ್ಚು ಹೆಚ್ಚು ಆಗಬೇಕಿದೆ ಎಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ತಿಳಿಸಿದ್ದಾರೆ.

ತುಳುಕೂಟ ಉಡುಪಿ (ರಿ.) ನೇತೃತ್ವದಲ್ಲಿ ಹಿರಿಯ ಕವಿ ದಿ.ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾಥ ತುಳು ಭಾವಗೀತೆ ಸ್ಫರ್ಧೆಯನ್ನು ಭಾನುವಾರ ಉಡುಪಿ ಎಂ.ಜಿ.ಎಂ ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ತುಳುಕೂಟ ಹಾಗೂ ತುಳು ಸಾಹಿತ್ಯ ಅಕಾಡೆಮಿಗಳು ತುಳು ಬರಹಗಾರರಿಗೆ ಹೆಚ್ಚಿನ ಪ್ರೋತ್ಸಾಹ ಅನುದಾನ ಒದಗಿಸಬೇಕು ಎಂದರು.

ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ ಭಾಸ್ಕರ ಶೆಟ್ಟಿ ತುಳುಕೂಟದ ಸದಸ್ಯ ಪ್ರಕಾಶ್ ಸುವರ್ಣ ಕಟಪಾಡಿ ಬರೆದ ತುಳು ಭಕ್ತಿ ಮತ್ತು ಭಾವಗೀತೆ ಕೃತಿ ‘ಬೊಲ್ಪು’ ಬಿಡುಗಡೆ ಮಾಡಿ ಮಾತನಾಡಿ, ಆದಿ ದ್ರಾವಿಡ ಭಾಷೆ ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಕಾರ್ಯಕ್ಕೆ ವೇಗ ದೊರೆಯಬೇಕಿದ್ದು, ಈ ನಿಟ್ಟಿನಲ್ಲಿ ತುಳು ಕೃತಿಗಳ ಸಂಖ್ಯೆಯೂ ಹೆಚ್ಚಾಗಬೇಕಿದೆ ಎಂದರು.

ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿದ್ದರು.‌ಹಿರಿಯ ಸಾಹಿತಿ ವಸಂತ ಎನ್.ಶೆಟ್ಟಿ ಚೊಕ್ಕಾಡಿ, ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ಮುಖ್ಯಸ್ಥ ಹಫೀಜ್ ರೆಹಮಾನ್, ಆಕಾಶವಾಣಿ ಕಲಾವಿದೆ ಭಾರತಿ ಟಿ.ಕೆ. ಉಡುಪಿ, ಕಿನ್ನಿಮೂಲ್ಕಿ ಆಲ್‌ರಾಯನ್ ಬಯೋ ಸೈಕಲ್ಸ್ ಮಾಲಕ ಮಹಮ್ಮದ್ ಆರೀಫ್ ಮುಖ್ಯ ಭಾಗವಹಿಸಿದ್ದರು.

ಸಂಗೀತ ಕಲಾವಿದರಾದ ಶಂಕರದಾಸ್ ಚೇಂಡ್ಕಳ, ಭಾಗ್ಯಲಕ್ಷ್ಮಿ ಉಪ್ಪೂರು,  ರೋಹಿತ್ ಕುಮಾರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತುಳುಕೂಟದ ಪದಾಧಿಕಾರಿಗಳಾದ ಮಹಮ್ಮದ್ ಮೌಲಾ, ಮೋಹನ್ ಶೆಟ್ಟಿ, ಎಂ.ಜಿ.ಚೈತನ್ಯ, ಪ್ರಭಾಕರ ಭಂಡಾರಿ ಉಪಸ್ಥಿತರಿದ್ದರು. 

ಕಾರ್ಯಕ್ರಮ ಸಂಚಾಲಕ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿದರು. ಉಪನ್ಯಾಸಕ ದಯಾನಂದ ಡಿ, ಸಾಹಿತಿ ದಯಾನಂದ ಕೆ.ಶೆಟ್ಟಿ ದೆಂದೂರು ಕಾರ್ಯಕ್ರಮ ನಿರೂಪಿಸಿದರು. ತುಳುಕೂಟದ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ವಂದಿಸಿದರು.

ಫಲಿತಾಂಶ: ಜೂನಿಯರ್ ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ ಅಮೃತಾ ಜಿ ಉಡುಪಿ ಪ್ರಥಮ, ಶ್ರೀಜಾ ಉದ್ಯಾವರ  ದ್ವಿತೀಯ, ಐಶಾನಿ ಶೆಟ್ಟಿ ಮಣಿಪಾಲ ತೃತೀಯ. ಸೀನಿಯರ್ ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ ಅನ್ವಿತಾ ಜಿ.ಮೂರ್ತಿ ಉಡುಪಿ ಪ್ರಥಮ,ಅಶ್ವಿಜಾ ಉಡುಪ ಕಿನ್ನಿಗೋಳಿ ದ್ವಿತೀಯ, ಪುರಂದರ್ ಕೋಟ್ಯಾನ್ ಮಲ್ಪೆ ತೃತೀಯ ಬಹುಮಾನ ಪಡೆದರು.

 
 
 
 
 
 
 
 
 
 
 

Leave a Reply