ಛಾಯಾಗ್ರಹಣ ಕ್ಷೇತ್ರದಲ್ಲಿ ನಮ್ಮ ಅಧ್ಯಯನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬೇಕು~ ಆಸ್ಟ್ರೋ ಮೋಹನ್  ​

ಛಾಯಾಗ್ರಹಣದಲ್ಲಿ ನಮ್ಮ ಅಧ್ಯಯನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬೇಕು ಅದರೊಂದಿಗೆ ಕಲಿಕಾ ಆಸಕ್ತಿಯೂ ನಮಗಿರಬೇಕು. ನಾವು ತೆಗೆದ ಛಾಯಾಚಿತ್ರಗಳನ್ನು ಪ್ರೀತಿಸಲು ಕಲಿಯಬೇಕು ಎಂದು ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಹೇಳಿದರು.
ಅವರು ಜಗನ್ನಾಥ ಸಭಾಭವನದಲ್ಲಿ ಬುಧವಾರದಂದು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್  ಉಡುಪಿ ವಲಯ ಹಮ್ಮಿಕೊಂಡ ” ಸ್ಟ್ರೀಟ್ ಫೋಟೋಗ್ರಫಿ’ ಕಾರ್ಯಗಾರ ಉದ್ಘಾಟಿಸಿ ಛಾಯಾಗ್ರಹಣ  ಕ್ಷೇತ್ರವನ್ನು ಬಯಸಿ ಬಂದ ಮೇಲೆ ಬದುಕು ಕಟ್ಟಿಕೊಳ್ಳಲೂ ಉದ್ಯೋಗದೊಂದಿಗೆ ಹೆಸರನ್ನು ಮಾಡಿಕೊಳ್ಳಬೇಕು ಎಂದರು. 
ಇತ್ತೀಚಿಗೆ ಅಗಲಿದ ಅಶೋಕ್ ಕುಮಾರ್ ಶೆಟ್ಟಿ ಹಾಗು ಸಬಾಸ್ಟಿನ್ ಅಂಚನ್ ರವರ ಗೌರವಾರ್ಥ ನುಡಿನಮನ ಹಾಗು ಪುಷ್ಪಾರ್ಚನೆ ಸಲ್ಲಿಸಲಾಯಿತು . 
ಈ ಸಂದರ್ಭದಲ್ಲಿ  ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ವಲಯ ಕೋಶಾಧ್ಯಕ್ಷ ಪ್ರಸಾದ್ ಜತ್ತನ್ 
ಉಪಸ್ಥಿತರಿದ್ದರು.
ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಕೇಶ್ ಕೆ. ಅಮೀನ್ ಧನ್ಯವಾದವಿತ್ತರು. ರಾಘವೇಂದ್ರ ಸೇರಿಗಾರ್ ನಿರೂಪಿಸಿದರು. ಬಳಿಕ ಆಸ್ಟ್ರೋ ಮೋಹನ್ ರವರಿಂದ ಸ್ಟ್ರೀಟ್ ಫೋಟೋಗ್ರಫಿ ಬಗ್ಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯಗಾರ ನೆರವೇರಿತು.   
 
 
 
 
 
 
 
 
 
 
 
 

Leave a Reply