ಉಡುಪಿಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ: ಶಾಸಕ ಕೆ ರಘುಪತಿ ಭಟ್

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ಕನ್ನಡ ವತಿಯಿಂದ ಇಂದು ನಡೆದ 226ನೇ ರಾಯಣ್ಣನವರ ಜಯಂತ್ಯೋತ್ಸವದ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ ರಘುಪತಿ ಭಟ್ ಅವರು ಉಡುಪಿಯ ಪ್ರಮುಖ ವೃತ್ತವಾದ ಬಸ್ ನಿಲ್ದಾಣದ ಬಳಿ ಪುಷ್ಪ ಬೇಕರಿಯ ಎದುರುಗಡೆ ಇರುವ ವೃತ್ತಕ್ಕೆ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ  ಎಂದು ಇನ್ನೂ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.
 ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರು ಸತತ ಪ್ರಯತ್ನಕ್ಕೆ ಇವತ್ತು ಪ್ರತಿಫಲ ಸಿಕ್ಕಂತಾಗಿದೆ ನಮಗೂ ವ್ರತ್ತಕ್ಕೆ ನಾಮಕರಣ ಮಾಡುವ ಬಗ್ಗೆ ಹೆಮ್ಮೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಇಂದು ನಡೆದ 226ನೇ ರಾಯಣ್ಣನವರ ಜಯಂತ್ಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ  ಸರಕಾರಿ ಮಟ್ಟದಲ್ಲಿ  ಸರಕಾರಿ ಮಟ್ಟದಲ್ಲಿ ರಾಯಣ್ಣ ಜಯಂತಿಯನ್ನು ಆಚರಣೆ ಮಾಡುವ ಆಲೋಚನೆ ಇದೆ ಎಂದರು
ರೋಟರಿ ರಾಯಲ್ ಉಡುಪಿಯ ಜಿಲ್ಲಾಧ್ಯಕ್ಷ ಡಾ. ಬಾಲಕೃಷ್ಣ ಮದ್ದೋಡಿ ಉಪನ್ಯಾಸದ ಮಾತುಗಳನ್ನಾಡಿ ಸಂಗೊಳ್ಳಿ ರಾಯಣ್ಣರಂತಹ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಇಂತಹ ಕಾರ್ಯಕ್ರಮಗಳು ಇನ್ನೂ ಆಗುತ್ತಿರಬೇಕು ಮತ್ತು ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಅವರಂತಹ ಯುವ ನಾಯಕರು ನಮ್ಮ ಸಮಾಜದಲ್ಲಿ ಇಂತಹ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ಮನೆಯ ಅಜ್ಜ ಮುತ್ತಜ್ಜನ ಹೆಸರನ್ನೇ ನೆನಪಿಡದ ಈ ಕಾಲಘಟ್ಟದಲ್ಲಿ 226 ವರ್ಷಗಳ ಹಿಂದೆ ಒಂದು ಮಹಾನ್ ಚೇತನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಂತಹ ಹೆಸರನ್ನು ನೆನಪಿನಲ್ಲಿಟ್ಟುಕೊಂಡು ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದರೆ ಸಂಗೊಳ್ಳಿ ರಾಯಣ್ಣರ ಸಾಹಸ ಶೌರ್ಯ ಬ್ರಿಟಿಷರ ವಿರುದ್ಧ ಮಾಡಿದ ಯುದ್ಧ ಎಂತಹ ಮಹಾನ್ ಕೆಲಸ ಆಗಿರಬೇಕು ಎಂದು ಹೆಮ್ಮೆಯ ಮಾತುಗಳನ್ನ ತಮ್ಮ ಉಪನ್ಯಾಸದಲ್ಲಿ ವ್ಯಕ್ತಪಡಿಸಿದರು.
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರ ಸತತ ಪ್ರಯತ್ನಕ್ಕೆ ಇವತ್ತು ಪ್ರತಿಫಲ ಸಿಕ್ಕಂತಾಗಿದೆ, ನಮಗೂ ವ್ರತ್ತಕ್ಕೆ ನಾಮಕರಣ ಮಾಡುವ ಬಗ್ಗೆ ಹೆಮ್ಮೆ ಇದೆ ಎಂದು ಸಂತಸ ವ್ಯಕ್ತಪಡಿಸಿದ  ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಮಾತನಾಡಿ ಎಲ್ಲರ ಸಹಕಾರ ಬಯಸಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ವಾಗನೆಪ್ಪ ಯೆಲಮೇಲ, ಹಾಲುಮತ ಮಹಾಸಭಾ ಜಿಲ್ಲೆಯ ಗೌರವಾಧ್ಯಕ್ಷರಾದ ಪ್ರಭುದೇವ ಮಾನೆ, ಹಾಲುಮತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತ ಜಿ ಗೋಡಿ, ಉಡುಪಿ ನಗರಸಭೆಯ ಸದಸ್ಯರಾದ ವಿಜಯ್ ಕೊಡವೂರು, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷರಾದ ಜಯರಾಮ್ ಅಂಬೆಕಲ್ಲು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ರಾಯಣ್ಣ ಅಭಿಮಾನಿ ಬಳಗದ ಮಾರ್ಗದರ್ಶಕರಾದ ತಿಪ್ಪಣ್ಣ ಬಿ. ಚಿಮ್ಮನಕಟ್ಟಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಇಲಕಲ್ ತಾಲೂಕು ಅಧ್ಯಕ್ಷರಾದ ಶಶಿಕಾಂತ್ ಯ ಗುರಿಕಾರ್, ರಾಯಣ್ಣ ಅಭಿಮಾನಿ ಬಳಗ ದಕ್ಷಿಣ ಕನ್ನಡ ಜಿಲ್ಲೆಯ ಮಂಜುನಾಥ್ ಆರ್ ನೋಟಗಾರ, ಸುಮಂಗಲ ಸ್ಟೋರ್ಸ್ ಪರ್ಕಳ ಇದರ ಮಾಲಕರಾದ ಪ್ರಕಾಶ್ ಶೆಣೈ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ತಾಲೂಕ್ ಅಧ್ಯಕ್ಷರಾದ ಲಕ್ಷ್ಮಣ ಕೋಲ್ಕಾರ್ ಉಪಸ್ಥಿತರಿದ್ದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆಯ ಉಪಾಧ್ಯಕ್ಷರಾದ ಈರಪ್ಪ ಗೌಂಡಿ ಸ್ವಾಗತಿಸಿದರು, ಅಧ್ಯಾಪಕರಾದ ಪ್ರಶಾಂತ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
 
 
 
 
 
 
 
 
 
 
 

Leave a Reply