ಬ್ರಹ್ಮಾವರ: ನೀಲಾವರದ ಗುಡ್ಡೆಅಂಗಡಿಯಲ್ಲಿ “ದೇವರ ಮಕ್ಕಳು ನಾವು” ವಾಟ್ಸಪ್ ಗ್ರೂಪಿನಿಂದ ಎರಡನೇ ಯೋಜನೆಯಾಗಿ ಸಿಲ್ವಿಯಾ ಡಿ’ಸೋಜಾರವರಿಗೆ ಮನೆ ನಿರ್ಮಿಸಿ ಹಸ್ತಾಂತರ ಮಾಡುವ ಕಾರ್ಯಕ್ರಮವು ಶನಿವಾರ ದಂದು ಅಮ್ಮುಂಜೆ ಸಂತ ಅಂತೋನಿ ಇಗರ್ಜಿಯ ಧರ್ಮಗುರುಗಳಾದ ವಂದನೀಯ ಲಾರೆನ್ಸ್ ಡೇವಿಡ್ ಕ್ರಾಸ್ತಾ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕಿ ಮಾಜಿ ತಾ.ಪಂ ಸದಸ್ಯೆ ವೆರೋನಿಕಾ ಕರ್ನೇಲಿಯೋ ಹಾಜರಿದ್ದು ಕಾರ್ಯಕ್ರಮವನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ನೀಲಾವರ ಪಂಚಾಯತ್ ಮಾಜಿ ಉಪಾಧ್ಯಕ್ಷ ಶ್ರೀ ರಮೇಶ್ ಪೂಜಾರಿ, ದಾನಿಗಳೂ ಹಾರಾಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶ್ರೀ ಕುಮಾರ ಸುವರ್ಣ, ಬೈಕಾಡಿ ಹಾಗೂ ಉಧ್ಯಮಿ ಶ್ರೀ ಬೋನಿಫಾಸ್ ಮಸ್ಕರೇನ್ಹಸ್ ಹಾಜರಿದ್ದರು.
ಅಂತೆಯೇ ಈ ದಿನದಲ್ಲೇ ಈ ಗ್ರೂಪಿನ ಮೂರನೇ ಯೋಜನೆಯಾಗಿ ಇಪ್ಪತ್ತಕ್ಕೂ ಮಿಕ್ಕಿ ಅಶಕ್ತರಿಗೆ, ಅಂಗವಿಕಲರಿಗೆ , ಮನೋರೋಗಿಗಳಿಗೆ, ವಿಧವೆಯರಿಗೆ, ಅನಾರೋಗ್ಯ ಪೀಡಿತರಿಗೆ ಜಾತಿಧರ್ಮ ಲೆಕ್ಕಿಸದೇ ಸಹಾಯಧನವನ್ನು ವಿತರಿಸಲಾಯಿತು. ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನೂ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಈ ಕಾರ್ಯಕ್ರಮದ ಪ್ರಮುಖ ರೂವಾರಿ ಗ್ರೂಪಿನ ಎಡ್ಮಿನ್ ಹಾಗೂ ಉದಾರ ಮನಸ್ಸಿನ ದಾನಿ ಮ್ಯಾಕ್ಷಿಮ್ ಮಸ್ಕರೇನ್ಹಸ್, ಬ್ರದರ್ ರೋನಿ ನೊರೊನ್ಹಾ ಹಾಗೂ ತಂಡದವರು ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿ ಕೊಂಡು ಬಂದಿರುತ್ತಾರೆ. ಗ್ರೂಪ್ ಎಡ್ಮಿನ್ ಮಾರ್ಕ್ ಡಿ’ಸೋಜಾರವರು ಸ್ವಾಗತಿಸಿ, ಮೀನಾ ಡಿ’ಸೋಜಾ ರವರು ದಾನಿಗಳ ಹೆಸರನ್ನು ವಾಚಿಸಿದರು. ವಲೇರಿಯನ್ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ , ಮೆಲಿಶಾ ಡಿ’ಸೋಜಾರವರು ವಂದಿಸಿದರು…