“ರೋಟರಿ ವಿಷ್ಣು ಮೂರ್ತಿ ವನ” ಯೋಜನೆ ಉದ್ಘಾಟನೆ

ಉಡುಪಿ : ರೋಟರಿ ಕ್ಲಬ್ ಮಣಿಪಾಲ ವತಿಯಿಂದ ವಿಷ್ಣು ಮೂರ್ತಿ ಪ್ರೌಢಶಾಲೆ ಕೊಡಿಬೆಟ್ಟು ಕುದಿ ಗ್ರಾಮದಲ್ಲಿ “ರೋಟರಿ ವಿಷ್ಣು ಮೂರ್ತಿ ವನ” ಯೋಜನೆ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 2182 ಇದರ ಜಿಲ್ಲಾ ಗೌರ್ನರ್ ರಾಮಚಂದ್ರ ಮೂರ್ತಿ ಉದ್ಘಾಟಿಸಿದರು.

ನಿಯೋಜಿತ ಜಿಲ್ಲಾ ಗೌರ್ನರ್ ಡಾ.ಹೆಚ್.ಜೆ‌.ಗೌರಿ, ಅಸಿಸ್ಟೆಂಟ್ ಜಿಲ್ಲಾ ಗೌರ್ನರ್ ಡಾ.‌ಸುರೇಶ ಶೆಣೈ , ವಲಯ ಸೇನಾನಿ ರೋ.ಅಮಿತ್ ಅರವಿಂದ್, ರೋಟರಿ ಮಣಿಪಾಲ ಅಧ್ಯಕ್ಷ ‌ಡಾ.ವಿರೂಪಾಕ್ಷ ದೇವರಮನೆ‌, ಇನ್ನಿತರ ಸದಸ್ಯರುಗಳು ಉಪಸ್ಥಿತರಿದ್ದರು. ‌ರೋ.ರಾಜವರ್ಮ ಅರಿಗ . ರೋ.ರವಿ ಕಾರಂತ ರೋಟರಿ ವಿಷ್ಣು ಮೂರ್ತಿ ವನದ ಮೇಲ್ವಿಚಾರಣೆ ವಹಿಸಿಕೊಂಡಿದ್ದರು.

ರೋಟೇರಿಯನ್ಸ್,ರೋಟರಾಕ್ಟ್ ಕ್ಲಬ್ ಸದಸ್ಯರು, ವಿಷ್ಣುಮೂರ್ತಿ ಪ್ರೌಢಶಾಲೆ ಯ ಅಡಳಿತ ಮಂಡಳಿಯ ಮುಖ್ಯಸ್ಥರು, ಮುಖ್ಯೋಪಾಧ್ಯಾಯರು, ಉಪಾಧ್ಯರು ಉಪಸ್ಥಿತರಿದ್ದರು. 

“ರೋಟರಿ -ವಿಷ್ಣುಮೂರ್ತಿ ವನ” ಮಿಯವಾಕಿ ಮಾದರಿಯ ವನವಾಗಿದ್ದು ,ಕಡಿಮೆ ಜಾಗದಲ್ಲಿ‌ ಹೆಚ್ಚಿನ ಮರವನ್ನು ಬೆಳೆಯುವ ಮಾದರಿಯ ವನವಾಗಿದೆ. ಇದು ರೋಟರಿ ಕ್ಲಬ್ ಮಣಿಪಾಲದ ಸೇವಯೋಜನೆಯ ಯೋಜನೆಯಾಗಿದೆ.

 
 
 
 
 
 
 
 
 
 
 

Leave a Reply