ಬ್ರಾಹ್ಮಣ ಮಹಾಸಭಾ (ರಿ) ವತಿಯಿಂದ 18ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ದಿನಾಂಕ 31.07.2022 ರಂದು ಸಂಜೆ 4.00 ಗಂಟೆಗೆ ಉಡುಪಿ ಜಿಲ್ಲೆಯ, ಪುತ್ತೂರು . ದುರ್ಗಾಪರಮೇಶ್ವರಿ ದೇವಸ್ಥಾನದ ಭಗವತಿ ಸಭಾ ಗೃಹ ದಲ್ಲಿ ನಡೆದ ಬ್ರಾಹ್ಮಣ ಮಹಾಸಭಾ (ರಿ) ವತಿಯಿಂದ 18ನೇ ವರ್ಷದ ಸಂಭ್ರಮದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ) ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭೋತ್ಸವ ಕಾರ್ಯಕ್ರಮವನ್ನು ನೆರವೇರಿ ಸಲಾಯಿತು , ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಫಲಾನುಭವಿಗಳಿಗೆ ಸಹಾಯಧನ ವಿತರಣೆ, ವಿವಾಹ ವಾರ್ಷಿಕೋತ್ಸವದ 50 ಸಂವತ್ಸರ ಪೂರೈಸಿದ ದಂಪತಿಗಳಿಗೆ, 80 ವರ್ಷ ಪೂರೈಸಿದ ಹಿರಿಯ ಸದಸ್ಯರಿಗೆ, SSLC, PUC ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು,ಈ ಸಂದರ್ಭದಲ್ಲಿ. ಪರಮಪೂಜ್ಯ ಶ್ರೀ ಶ್ರೀ ವಿದ್ಯಾ ವಲ್ಲಭ ತೀರ್ಥ ಶ್ರೀಪಾದರು ಹಾಗೂ ಶ್ರೀ ಎಚ್ಎಸ್ ಸಚ್ಚಿದಾನಂದ ಮೂರ್ತಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ( ಕರ್ನಾಟಕಸರಕಾರ )ಶ್ರೀ ಎಂ ಶಿವರಾಮ ಉಡುಪ, ಶ್ರೀ ಸುಬ್ಬರಾಯಹೆಗಡೆರವರು, ನಿರ್ದೇಶಕರು ಬ್ರಾ.ಅ,ಮ ಹಾಗೂ ಶ್ರೀ ವೈ ಸುಧಾಕರ್ ಭಟ್ ಜಿಲ್ಲಾಧ್ಯಕ್ಷರು ಉಡುಪಿ ಬ್ರಾಹ್ಮಣ ಮಹಾಸಭಾ ಮತ್ತು ಶ್ರೀ ಸಂದೀಪ್ ಮಂಜ ಜಿಲ್ಲಾ ಕಾರ್ಯದರ್ಶಿ ಹಾಗೂ ಸಂಘದ ಅಧ್ಯಕ್ಷರಾದ ಕೆ ದುರ್ಗಾ ಪ್ರಸಾದ್ ಭಾರ್ಗವ, ಸಂಚಾಲಕರು ಸುಬ್ರಮಣ್ಯ ಉಡುಪ ,ಕಾರ್ಯದರ್ಶಿ GVಆಚಾರ್ಯ, ಕೋಶಾಧಿಕಾರಿ MR ಆಚಾರ್ಯ ಮತ್ತು ಗಣ್ಯರು ಉಪಸ್ಥಿತರಿದ್ದರು.

Leave a Reply