ಪಡುಕೆರೆ ಸಮುದ್ರ ತೀರವನ್ನು ಸ್ವಚ್ಛ ಗೊಳಿಸುವ ಕಾರ್ಯಕ್ರಮ

ಉಡುಪಿ : ರೋಟರಿ ಕ್ಲಬ್ ಮಣಿಪಾಲ ಮತ್ತು ರೋಟರಾಕ್ಟ ಕ್ಲಬ್ ಮಣಿಪಾಲ‌ ಸೆಂಟ್ರಲ್ ಇವುಗಳ ಸಹಯೋಗದಲ್ಲಿ ಇನ್ನಿತರ‌ ರೋಟರಾಕ್ಟ ಕ್ಲಬ್ ಗಳಾದ ಎಸ್. ಡಿ.ಎಂ‌. ಕಾಲೇಜು, ಇಂದಿರಾ ಶಿವರಾಮ ಪಾಲಿಟೆಕ್ನಿಕ್ ಕಾಲೇಜು, ಹಾಗೂ ಇತರ‌ ಸಂಘ ಸಂಸ್ಥೆಗಳ‌ ಸದಸ್ಯರು,ಇಂದು ಪಡುಕೆರೆ ಸಮುದ್ರ ತೀರವನ್ನು ಸ್ವಚ್ಛ ಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ‌    

ರೋಟರಾಕ್ಟ್ ಕ್ಲಬ್ ಮಣಿಪಾಲ ಸೆಂಟ್ರಲ್ ನ ಅಧ್ಯಕ್ಷೆಯಾದ ರೇಷ್ಮ ಮಾತನಾಡಿ ಈ ರೀತಿಯ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.‌

ಸಹಾಸ್ ಸಂಸ್ಥೆಯ ಸದಸ್ಯರು ಸ್ವಚ್ಚತಾ ‌ಕಾರ್ಯಕ್ರಮದಲ್ಲಿ ಕೈಜೋಡಿಸಿದರು. ರೋಟರಿ ಕ್ಲಬ್ ಮಣಿಪಾಲದ‌ ಅಧ್ಯಕ್ಷ ಡಾ.ವಿರೂಪಾಕ್ಷ ‌ದೇವರಮನೆ, ರೋ.ಸುಬಾ ರಾವ್ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು. ವಿವಿಧ ರೋಟರಾಕ್ಟ್ ಕ್ಲಬ್ ಗಳ ಸದಸ್ಯರು ಹಾಗೂ ಇತರ‌ ಸಂಘ ಸಂಸ್ಥೆಗಳ ‌ಸದಸ್ಯರು, 50ಕ್ಕು ಹೆಚ್ಚು ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 
 
 
 
 
 
 
 
 
 
 

Leave a Reply